
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಿನಿಮಾ ಹಾಗೂ ಖಾಸಗಿ ಜೀವನದ ವಿಚಾರದಲ್ಲಿ ಆಗಾಗ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರು ಹಂಚಿಕೊಂಡ ವಿಡಿಯೋ. ಅವರು ವಿಡಿಯೋದಲ್ಲಿ ಡಾನ್ಸ್ ಮಾಡಿದ್ದಾರೆ, ನಟಿಯ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ನಂತರ, ವಿಡಿಯೋದಲ್ಲಿರುವ ವ್ಯಕ್ತಿ ತಾವಲ್ಲ ಎಂದು ಹೇಳಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ರಾಮ್ ಗೋಪಾಲ್ ವರ್ಮಾ ಅವರು ಇನಾಯಾ ಸುಲ್ತಾನ ಜತೆ ಡಾನ್ಸ್ ಮಾಡಿದ್ದಾರೆ. ವಿಡಿಯೋದಲ್ಲಿರುವುದು ಇವರಿಬ್ಬರೇ ಅನ್ನೋದು ಸ್ಪಷ್ಟವಾಗಿದೆ. ಆದರೆ, ವಿಡಿಯೋದಲ್ಲಿರುವ ವ್ಯಕ್ತಿ ತಾವಲ್ಲ ಎಂದಿದ್ದಾರೆ ಆರ್ಜಿವಿ. ‘ಈ ವಿಡಿಯೋದಲ್ಲಿರುವ ವ್ಯಕ್ತಿ ನಾನಲ್ಲ. ಕೆಂಪು ಬಟ್ಟೆ ಧರಿಸಿರುವುದು ಇನಾಯಾ ಅಲ್ಲ. ಬೇಕಿದ್ದರೆ ನಾನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮೇಲೆ ಪ್ರಮಾಣ ಮಾಡುತ್ತೇನೆ’ ಎಂದಿದ್ದಾರೆ ಅವರು.
ವಿಡಿಯೋದಲ್ಲಿ ಕಾಣುವ ವ್ಯಕ್ತಿ ರಾಮ್ ಗೋಪಾಲ್ ಅವರೇ ಅನ್ನೋದು ಅಭಿಮಾನಿಗಳಿಗೆ ಗೊತ್ತಾಗಿದೆ. ಈ ವಿಡಿಯೋ ವಿಚಾರವಾಗಿಟ್ಟುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ರೀತಿಯಲ್ಲಿ ಟೀಕಿಸಲಾಗುತ್ತಿದೆ. ಇನ್ನು, ಆರ್ಜಿವಿ ನಟಿಯ ಕಾಲಿಗೆ ಬಿದ್ದು ನಮಸ್ಕರಿಸಿದ್ದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ.
ಈ ರೀತಿಯ ಚಿತ್ರ ವಿಚಿತ್ರ ಟ್ವೀಟ್ ಮಾಡುವುದರಲ್ಲಿ ಆರ್ಜಿವಿ ಎತ್ತಿದ ಕೈ. ಫ್ರೆಂಡ್ಶಿಪ್ ಡೆ ಬಗ್ಗೆ ಸರಣಿ ಟ್ವೀಟ್ ಮಾಡಿದ್ದ ಅವರು, ‘ನೀವು ನಿಮ್ಮ ಗೆಳೆಯರಿಗೆ ಸಹಾಯ ಮಾಡಿದಿರಿ ಎಂದಿಟ್ಟುಕೊಳ್ಳು. ಮುಂದಿನ ಬಾರಿ ಆತ ನಿಮ್ಮ ಬಳಿಯೇ ಬರುತ್ತಾನೆ’ ಎಂದು ಬರೆದುಕೊಂಡು #HappyEnemyshipDay ಎನ್ನುವ ಹ್ಯಾಷ್ಟ್ಯಾಗ್ ಹಾಕಿದ್ದರು.
ಇದನ್ನೂ ಓದಿ: ಇದು ಗೆಳೆಯರ ದಿನವಲ್ಲ ವೈರಿಗಳ ದಿನ ಎಂದ ರಾಮ್ ಗೋಪಾಲ್ ವರ್ಮಾ
ಆಮೀರ್ ಖಾನ್ಗಿಂತ ವೇಯ್ಟರ್ ಉತ್ತಮವಾಗಿ ಆ್ಯಕ್ಟ್ ಮಾಡಿದ್ದ; ಆರ್ಜಿವಿ ಹೀಗೆ ಹೇಳಿದ್ದರ ಹಿಂದಿತ್ತು ಬೇರೆ ಉದ್ದೇಶ