AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಮಾಯಣ’ ಒಟಿಟಿ ರಿಲೀಸ್: ಸಬ್‌ಸ್ಕ್ರೈಬರ್‌ಗಳಿಗೂ ಸಿಗಲ್ಲ ಉಚಿತ ವೀಕ್ಷಣೆ

ಬಾಲಿವುಡ್‌ನ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಬಳಿಕ ಜಿಯೋಹಾಟ್‌ಸ್ಟಾರ್ ಒಟಿಟಿ ವೇದಿಕೆಯಲ್ಲಿ ಪ್ರತ್ಯೇಕರಾಗಿ ಹಣ ಪಾವತಿಸಿ ವೀಕ್ಷಿಸುವ 'ಪೇ-ಪರ್-ವ್ಯೂ' ಮಾದರಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ಚಿತ್ರವನ್ನು ದೇಶದ ಪ್ರತಿಯೊಬ್ಬರ ಮನೆಗಳಿಗೆ ತಲುಪಿಸಲು ನಿರ್ಮಾಪಕರು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಆದರೆ, ಇದಕ್ಕೆ ದುಬಾರಿ ಹಣ ತೆತ್ತಬೇಕಿದೆ.

'ರಾಮಾಯಣ' ಒಟಿಟಿ ರಿಲೀಸ್: ಸಬ್‌ಸ್ಕ್ರೈಬರ್‌ಗಳಿಗೂ ಸಿಗಲ್ಲ ಉಚಿತ ವೀಕ್ಷಣೆ
ರಾಮಾಯಣ
ರಾಜೇಶ್ ದುಗ್ಗುಮನೆ
|

Updated on:Oct 22, 2026 | 12:12 PM

Share

ಮುಖ್ಯಾಂಶಗಳು

  •  ಥಿಯೇಟರ್ ಬಳಿಕ ಒಟಿಟಿಗೆ ಬರಲಿದೆ ರಣ್‌ಬೀರ್ ಕಪೂರ್ ಅಭಿನಯದ ರಾಮಾಯಣ
  • ಜಿಯೋಹಾಟ್‌ಸ್ಟಾರ್‌ನಲ್ಲಿ ಪೇ-ಪರ್-ವ್ಯೂ ಆಧಾರದ ಮೇಲೆ ಸಿನಿಮಾ ವೀಕ್ಷಣೆಗೆ ಅವಕಾಶ
  • ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಮನೆಮನೆಗೆ ತಲುಪಿಸುವ ಬೃಹತ್ ಹೆಜ್ಜೆ

ರಣ್‌ಬೀರ್ ಕಪೂರ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ‘ ಸಿನಿಮಾವು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಬಳಿಕ ಒಟಿಟಿಗೆ ಕಾಲಿಡಲಿದೆ. ಜಿಯೋ ಹಾಟ್‌ಸ್ಟಾರ್ ಅಲ್ಲಿ ಈ ಸಿನಿಮಾ ಪ್ರಸಾರ ಕಾಣಲಿದೆ. ಇದಕ್ಕಾಗಿ ಪ್ರೈಮ್ ಫೋಕಸ್ ಸ್ಟುಡಿಯೋಸ್ ಹಾಟ್​​ ಸ್ಟಾರ್ ಜೊತೆ ಒಪ್ಪಂದ ಮಾಡಿಕೊಡಿದೆ. ಸಬ್​ಸ್ಕ್ರಿಪ್ಶನ್ ಇದ್ದರೆ ನೀವು ಈ ಸಿನಿಮಾ ನೋಡಬಹುದು ಎಂದುಕೊಳ್ಳಬೇಡಿ. ಈ ಬಾರಿ ‘ಪೇ-ಪರ್-ವ್ಯೂ’ ಆಧಾರದ ಮೇಲೆ ಈ ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದು ಅಧಿಕೃತವಾಗಿ ತಿಳಿಸಲಾಗಿದೆ.

ಜಿಯೋಸ್ಟಾರ್ ಮುಖ್ಯಸ್ಥೆ ನೀತಾ ಅಂಬಾನಿ ಅವರು ಈ ಒಪ್ಪಂದದ ಬಗ್ಗೆ ಮಾಹಿತಿ ನೀಡಿದ್ದಾರೆ. ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಸಾರುವ ಈ ಮಹಾಕಾವ್ಯವನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಪ್ರತಿಯೊಬ್ಬ ಭಾರತೀಯನ ಕುಟುಂಬಕ್ಕೆ ತಲುಪಿಸುವುದು ನಮ್ಮ ಸೌಭಾಗ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಯುವ ಪೀಳಿಗೆಗೆ ನಮ್ಮ ಸನಾತನ ಮೌಲ್ಯಗಳು ಹಾಗೂ ಸಂಸ್ಕೃತಿಯ ಪರಿಚಯವನ್ನು ಮಾಡಿಕೊಡಲು ಈ ಡಿಜಿಟಲ್ ಪ್ಲಾಟ್‌ಫಾರ್ಮ್ ಅತ್ಯಂತ ಸಹಕಾರಿಯಾಗಲಿದೆ ಎಂದಿದ್ದಾರೆ.

ನಿರ್ಮಾಪಕ ನಮಿತ್ ಮಲ್ಹೋತ್ರಾ ಮಾತನಾಡಿ, ‘ಈ ಚಿತ್ರವನ್ನು ಪ್ರತಿಯೊಬ್ಬರೂ ಐಮ್ಯಾಕ್ಸ್ 3ಡಿ ನಂತಹ ದೊಡ್ಡ ಪರದೆಯ ಮೇಲೆ ಅನುಭವಿಸಬೇಕು ಎಂಬುದು ನಮ್ಮ ಆಸೆ. ಆದರೆ ದೇಶದ ಎಲ್ಲ ಪ್ರದೇಶಗಳಲ್ಲಿಯೂ ದೊಡ್ಡ ಸಿನಿಮಾ ಮಂದಿರಗಳ ಸೌಲಭ್ಯ ಲಭ್ಯ ಇರೋದಿಲ್ಲ. ಈ ಕಾರಣದಿಂದಲೇ ಚಿತ್ರಮಂದಿರಗಳ ಪ್ರದರ್ಶನ ಮುಗಿದ ಬಳಿಕ, ದೇಶದ ಪ್ರತಿಯೊಬ್ಬ ನಾಗರಿಕನ ಕೈಗೆ ಈ ಮಹಾಕಾವ್ಯವನ್ನು ತಲುಪಿಸಲು ಜಿಯೋಹಾಟ್‌ಸ್ಟಾರ್ ಅತ್ಯಂತ ಸೂಕ್ತವಾದ ಡಿಜಿಟಲ್ ವೇದಿಕೆ’ ಎಂದು ಅವರು ತಿಳಿಸಿದ್ದಾರೆ.

ನವೆಂಬರ್ 5ರಂದು ದೀಪಾವಳಿಯ ವಿಶೇಷ ಸಂದರ್ಭದಲ್ಲಿ ಈ ಚಿತ್ರವು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಾಣಲಿದೆ. ಪ್ರೇಕ್ಷಕರು ಈ ಅದ್ಭುತ ದೃಶ್ಯಕಾವ್ಯವನ್ನು ಮೊಬೈಲ್ ಅಥವಾ ಟಿವಿ ಪರದೆಗಳಿಗಿಂತ ದೊಡ್ಡ ಥಿಯೇಟರ್‌ಗಳಲ್ಲಿ ಕಣ್ತುಂಬಿಕೊಳ್ಳಬೇಕು ಎಂಬುದು ಚಿತ್ರತಂಡದ ಪ್ರಮುಖ ಇಚ್ಛೆಯಾಗಿದೆ. ಥಿಯೇಟರ್‌ಗಳಲ್ಲಿ ಸಿನಿಮಾದ ಸಂಭ್ರಮ ಮುಗಿದ ನಂತರವೇ ಪ್ರೇಕ್ಷಕರು ಒಟಿಟಿ ಮಾಧ್ಯಮದಲ್ಲಿ ಪ್ರತ್ಯೇಕರಾಗಿ ಹಣ ನೀಡಿ ವೀಕ್ಷಿಸುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ.

ಇದನ್ನೂ ಓದಿ: ದಿಲ್ ರಾಜು ಜಾಣ ನಿರ್ಣಯ: ಆಂಧ್ರ-ತೆಲಂಗಾಣದಲ್ಲಿ ‘ರಾಮಾಯಣ’ ಟಿಕೆಟ್​​ ಬೆಲೆ ಏರಿಕೆ ಇಲ್ಲ

ಒಟಿಟಿ ಸಬ್​ಸಕ್​ರಿಪ್ಶನ್​ಗೆ ಅನೇಕರು ಹಣ ನೀಡಿರುತ್ತಾರೆ. ಹೀಗಿದ್ದರೂ ಸಿನಿಮಾ ನೋಡಲು ಪ್ರತ್ಯೇಕ ಹಣ ನೀಡಬೇಕಿರುವುದು ಎಷ್ಟು ಸರಿ ಎಂಬುದು ಅನೇಕರ ಪ್ರಶ್ನೆ. ಒಂದು ಅವಧಿ ಮುಗಿದ ಬಳಿಕ ಚಂದಾದಾರಿಕೆ ಇರುವವರಿಗೆ ಈ ಚಿತ್ರವನ್ನು ಉಚಿತವಾಗಿ ನೋಡುವ ಅವಕಾಶ ಸಿಗುತ್ತದೆಯೇ ಎನ್ನುವ ಪ್ರಶ್ನೆ ಈಗ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:12 pm, Thu, 22 October 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More