Randeep Hooda: ಮಾಯಾವತಿ ಬಗ್ಗೆ ಕೀಳು ಜೋಕ್​; ‘ರಾಧೆ’ ನಟ ರಣದೀಪ್​ ಹೂಡಾಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛೀಮಾರಿ

ಇತ್ತೀಚೆಗೆ ತೆರೆಕಂಡ ಸಲ್ಮಾನ್​ ಖಾನ್​ ನಾಯಕತ್ವದ ರಾಧೆ ಸಿನಿಮಾದಲ್ಲಿ ರಣದೀಪ್​ ಹೂಡ ಅವರು ಖಳನಾಯಕನಾಗಿ ನಟಿಸಿದ್ದಾರೆ. ವಿವಾದದ ಕಾರಣದಿಂದ ಅವರು ರಿಯಲ್​ ಲೈಫ್​ನಲ್ಲಿಯೂ ಬ್ಯಾಡ್​ ಬಾಯ್​ ಆಗಿದ್ದಾರೆ.

Randeep Hooda: ಮಾಯಾವತಿ ಬಗ್ಗೆ ಕೀಳು ಜೋಕ್​; ‘ರಾಧೆ’ ನಟ ರಣದೀಪ್​ ಹೂಡಾಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛೀಮಾರಿ
ರಣದೀಪ್​ ಹೂಡಾ - ಮಾಯಾಮತಿ
Edited By:

Updated on: May 29, 2021 | 3:39 PM

ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಮಾತನಾಡುವಾಗ ತುಂಬಾ ಹುಷಾರಾಗಿ ಇರಬೇಕು. ಎಷ್ಟೇ ಒಳ್ಳೆಯ ಸಿನಿಮಾ ಮಾಡಿದ್ದರೂ ಕೂಡ ಅವರು ನಿಜಜೀವನದಲ್ಲಿ ಹೇಗೆ ನಡೆದುಕೊಳ್ಳುತ್ತಾರೆ ಎಂಬುದರ ಮೇಲೆ ಅವರಿಗೆ ಸಿಗುವ ಗೌರವದ ಪ್ರಮಾಣ ನಿರ್ಧಾರ ಆಗಿರುತ್ತದೆ. ಇಷ್ಟು ದಿನ ಪ್ರೇಕ್ಷಕರಿಂದ ಭೇಷ್​ ಎನಿಸಿಕೊಳ್ಳುತ್ತಿದ್ದ ಬಾಲಿವುಡ್​ ನಟ ರಣದೀಪ್​ ಹೂಡಾ ಅವರು ಈಗ ಎಲ್ಲರಿಂದಲೂ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ. ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ ಬಗ್ಗೆ ಅವರು ಹೇಳಿದ ಒಂದು ಕೀಳುಮಟ್ಟದ ಜೋಕ್​ನ ಕಾರಣದಿಂದಾಗಿ ವಿವಾದ ಭುಗಿಲೆದ್ದಿದೆ. ಭಾರತದಲ್ಲಿ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಣದೀಪ್​ ಹೂಡಾ ಅವರಿಗೆ ಮುಖಭಂಗ ಆಗಿದೆ.

ರಣದೀಪ್​ ಹೂಡಾ ಅವರು ತಮ್ಮ ಜನಪ್ರಿಯತೆಯ ಕಾರಣದಿಂದ ವಿಶ್ವಸಂಸ್ಥೆಯ ವನ್ಯಜೀವಿಗಳ ಸಂರಕ್ಷಣೆಯ ಕಾರ್ಯಕ್ರಮಗಳಿಗೆ ರಾಯಭಾರಿ ಆಗಿದ್ದರು. ಆದರೆ ಈಗ ಅವರು ಮಾಯಾವತಿ ಬಗ್ಗೆ ಹೇಳಿದ ಕೆಟ್ಟ ಜೋಕ್​ನ ಪರಿಣಾಮ ಎಲ್ಲೆಡೆ ಅವರಿಗೆ ವಿರೋಧ ವ್ಯಕ್ತವಾಗಿರುವುರಿಂದ ಅವರನ್ನು ರಾಯಭಾರಿ ಸ್ಥಾನದಿಂದ ಕೆಳಗಿಳಿಸಲಾಗಿದೆ. ಆ ಮೂಲಕ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿನ್ನೆಡೆ ಅನುಭವಿಸುವಂತಾಗಿದೆ. ಇತ್ತೀಚೆಗೆ ತೆರೆಕಂಡ ಸಲ್ಮಾನ್​ ಖಾನ್​ ನಾಯಕತ್ವದ ರಾಧೆ ಸಿನಿಮಾದಲ್ಲಿ ರಣದೀಪ್​ ಹೂಡ ಅವರು ಖಳನಾಯಕನಾಗಿ ನಟಿಸಿದ್ದಾರೆ. ವಿವಾದದ ಕಾರಣದಿಂದ ಅವರು ರಿಯಲ್​ ಲೈಫ್​ನಲ್ಲಿಯೂ ಬ್ಯಾಡ್​ ಬಾಯ್​ ಆಗಿದ್ದಾರೆ.

ಮಾಯಾವತಿ ಬಗ್ಗೆ ರಣದೀಪ್​ ಹೂಡಾ ಕೆಟ್ಟ ಜೋಕ್​ ಹೇಳಿರುವುದು ಇತ್ತೀಚೆಗಲ್ಲ. ಹಲವು ವರ್ಷಗಳ ಹಿಂದೆಯೇ ಖಾಸಗಿ ಟಿವಿ ವಾಹಿನಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಣದೀಪ್​ ಹೂಡಾ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಅವರು ಮಾಯಾವತಿ ಕುರಿತಂತೆ ಕೆಟ್ಟದಾಗಿ ಜೋಕ್​ ಮಾಡಿದ್ದರು. ಆ ವಿಡಿಯೋವನ್ನು ನೆಟ್ಟಿಗರೊಬ್ಬರು ಕೆಲವೇ ದಿನಗಳ ಹಿಂದೆ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡು ರಣದೀಪ್​ಗೆ ಛೀಮಾರಿ ಹಾಕಿದ್ದಾರೆ. ಬಳಿಕ ಅದು ಎಲ್ಲೆಡೆ ವೈರಲ್​ ಆಯಿತು. ರಣದೀಪ್​ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಲಾಗುತ್ತಿದೆ.

‘ಒಬ್ಬ ಮಹಿಳೆ ಮೇಲೆ ನೀವು ಇಂಥ ಕೆಟ್ಟ ಮಾತುಗಳನ್ನು ಆಡುತ್ತೀರಿ ಎನ್ನುವುದಾದರೆ ನಿಮ್ಮ ಮನಸ್ಸಲ್ಲಿ ಎಷ್ಟು ಕೆಟ್ಟತನ ಇದೆ ಎಂಬುದು ಗೊತ್ತಾಗುತ್ತದೆ. ಇದನ್ನು ಸಹಿಸಲು ಸಾಧ್ಯವಿಲ್ಲ’ ಎಂದು ವಿಡಿಯೋ ನೋಡಿದ ಅನೇಕರು ರಣದೀಪ್​ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ:

ಯುಪಿ ಮಾಜಿ ಸಿಎಂ ಮಾಯಾವತಿ ಬಗ್ಗೆ ಕೀಳು ಜೋಕ್​ ಹೇಳಿ ಟ್ರೋಲ್​ ಆಗುತ್ತಿರುವ ‘ರಾಧೆ’ ನಟ ರಣದೀಪ್​ ಹೂಡಾ

ರಾಧೆ ಸಿನಿಮಾ ಕಳಪೆ ಎಂದ ನಟನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಸಲ್ಮಾನ್​ ಖಾನ್​

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us