ಫೆಬ್ರವರಿ 26ಕ್ಕೆ ಉದಯಪುರದಲ್ಲಿ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದುವೆ

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆ ಸುದ್ದಿ ವೈರಲ್ ಆಗಿದೆ. ಮುಂದಿನ ವರ್ಷ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ಇವರ ವಿವಾಹ ನಡೆಯಲಿದೆ ಎನ್ನಲಾಗಿದೆ. ಖಾಸಗಿತನ ಕಾಪಾಡಲು ಸೆಲೆಬ್ರಿಟಿಗಳು ಉದಯಪುರ ಆಯ್ಕೆ ಮಾಡಿದ್ದಾರೆ. 'ಥಾಮಾ' ಚಿತ್ರ ಯಶಸ್ವಿ ನಂತರ ರಶ್ಮಿಕಾ ತಮ್ಮ ಸಿನಿ ಕೆಲಸಗಳನ್ನು ಮುಗಿಸಿ, ಮದುವೆಗೆ ಸಿದ್ಧರಾಗುವ ಸಾಧ್ಯತೆ ಇದೆ.

ಫೆಬ್ರವರಿ 26ಕ್ಕೆ ಉದಯಪುರದಲ್ಲಿ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದುವೆ
ರಶ್ಮಿಕಾ-ವಿಜಯ್

Updated on: Nov 07, 2025 | 9:05 AM

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ನಿಶ್ಚಿತಾರ್ಥ ನಡೆದಿದೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡಿದೆ. ಸಾಮಾನ್ಯವಾಗಿ ಇದು ಫೇಕ್ ನ್ಯೂಸ್ ಆದರೆ, ಇದನ್ನು ಅಲ್ಲಗಳೆಯಲಾಗುತ್ತದೆ. ಆದರೆ, ರಶ್ಮಿಕಾ ಮಂದಣ್ಣ ಅವರು ಇದನ್ನು ಅಲ್ಲಗಳೆಯಲೂ ಇಲ್ಲ, ಒಪ್ಪಿಕೊಳ್ಳಲೂ ಇಲ್ಲ. ಹೀಗಾಗಿ, ಅನುಮಾನ ಹೆಚ್ಚಾಗಿದೆ. ಈಗ ಇವರ ವಿವಾಹ ನಡೆಯೋ ಜಾಗ ಹಾಗೂ ದಿನಾಂಕ ಹೊರ ಬಿದ್ದಿದೆ.

ನ್ಯೂಸ್ 9 ಮಾಡಿದ ವರದಿ ಪ್ರಕಾರ, ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಅವರು ಮುಂದಿನ ವರ್ಷ ಫೆಬ್ರವರಿ 26ರಂದು ಮದುವೆ ಆಗುತ್ತಿದ್ದಾರೆ ಎನ್ನಲಾಗಿದೆ. ಈ ಮದುವೆಗಾಗಿ ಇವರು ರಾಜಸ್ಥಾನದ ಉದಯಪುರ ಆಯ್ಕೆ ಮಾಡಿಕೊಂಡಿದ್ದಾರೆ. ಈಗಾಗಲೇ ಅನೇಕ ಸೆಲೆಬ್ರಿಟಿಗಳು ವಿವಾಹಕ್ಕೆ ಉದಯಪುರವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಕೂಡ ಇದೇ ಆಯ್ಕೆ ಮಾಡಿಕೊಂಡರೇ ಎನ್ನುವ ಪ್ರಶ್ನೆ ಮೂಡಿದೆ.

ಈ ಮೊದಲು ಕತ್ರಿನಾ, ಕಿಯಾರಾ ಅಡ್ವಾಣಿ, ಪರಿಣಿತಿ ಚೋಪ್ರಾ ಅವರು ರಾಜಸ್ಥಾನದಲ್ಲೇ ವಿವಾಹ ಆಗಿದ್ದರು. ಹಳೆಯ ಕಾಲದ ರಾಜರ ಕೋಟೆಗಳನ್ನು ಹೋಟೆಲ್ ಆಗಿ ಬದಲಾಯಿಸಲಾಗಿದ್ದು, ವಿವಾಹಕ್ಕೆ ವಿಶೇಷ ಮೆರಗು ನೀಡುತ್ತವೆ. ಹೈದರಾಬಾದ್ ಅಥವಾ ಬೆಂಗಳೂರಿನಲ್ಲಿ ವಿವಾಹ ನಡೆದರೆ ಖಾಸಗಿತನಕ್ಕೆ ಧಕ್ಕೆ ಆಗುವ ಸಾಧ್ಯತೆ ಹೆಚ್ಚು. ಆದರೆ, ರಾಜಸ್ಥಾನದಲ್ಲಿ ಮದುವೆ ಆದರೆ ಈ ರೀತಿಯ ಸಮಸ್ಯೆ ಇರೋದಿಲ್ಲ.

ರಶ್ಮಿಕಾ ಮಂದಣ್ಣ ನಟನೆಯ ‘ಥಾಮಾ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಯಶಸ್ಸು ಕಂಡಿದೆ. ಈ ಚಿತ್ರ 100 ಕೋಟಿ ರೂಪಾಯಿ ಕ್ಲಬ್ ಸೇರಿದ ಖುಷಿ ಅಭಿಮಾನಿಗಳಿಗೆ ಇದೆ. ಈಗ ರಶ್ಮಿಕಾ ಮಂದಣ್ಣ ಒಪ್ಪಿಕೊಂಡ ಕೆಲವು ಸಿನಿಮಾ ಕೆಲಸಗಳನ್ನು ಪೂರ್ಣಗೊಳಿಸಬೇಕಿದೆ. ಇದಾದ ಬಳಿಕ ರಶ್ಮಿಕಾ ಮಂದಣ್ಣ ಅವರು ವಿವಾಹ ಕಾರ್ಯದಲ್ಲಿ ಬ್ಯುಸಿ ಆಗಲಿದ್ದಾರೆ ಎಂದು ಹೇಳಲಾಗುತ್ತಾ ಇದೆ.

ಇದನ್ನೂ ಓದಿ: ಸಂಜನಾ ಗಲ್ರಾನಿ ನಟನೆ ನೋಡಿ ಚಪ್ಪಾಳೆ ತಟ್ಟಿದ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಜನಪ್ರಿಯತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಇದೆ. ಅವರು ಮದುವೆ ಆದ ಬಳಿಕ ಆಫರ್ ಕಡಿಮೆ ಆಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬಂದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.