ಅಲ್ಲು ಅರ್ಜುನ್ ಡಾನ್ಸ್ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರು ಹಾಕುವ ಸ್ಟೆಪ್ ಕಲಿಯೋದು ಅಷ್ಟು ಸುಲಭದ ಮಾತಲ್ಲ. ಅಲ್ಲು ಜತೆ ತೆರೆ ಹಂಚಿಕೊಳ್ಳುವ ನಟಿಯರಿಗೆ ಸ್ಟೆಪ್ ಮ್ಯಾಚ್ ಮಾಡೋದು ಹೇಗೆ ಎನ್ನುವ ಆತಂಕ ಇದ್ದೇ ಇರುತ್ತದೆ. ಡಾನ್ಸ್ ಮಾಡುವುದರಲ್ಲಿ ಅಲ್ಲು ಅಷ್ಟು ನಿಸ್ಸೀಮರು. ಈಗ ರಶ್ಮಿಕಾಗೂ ಇದೇ ಚಿಂತೆ ಕಾಡಿದೆ. ಅಲ್ಲುಗೆ ಸರಿಸಾಟಿಯಾಗಿ ನಿಲ್ಲೋಕೆ ಅವರು ಡಾನ್ಸ್ ಕ್ಲಾಸ್ಗೆ ತೆರಳುತ್ತಿದ್ದಾರೆ ಅನ್ನೋದು ವಿಶೇಷ.
ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ‘ಪುಷ್ಪ’ ಸಿನಿಮಾದಲ್ಲಿ ಒಟ್ಟಾಗಿ ತೆರೆಹಂಚಿಕೊಳ್ಳುತ್ತಿದ್ದಾರೆ. ಟಾಲಿವುಡ್ನ ಖ್ಯಾತ ನಿರ್ದೇಶಕ ಸುಕುಮಾರ್ ಆ್ಯಕ್ಷನ್ಕಟ್ ಹೇಳುತ್ತಿರುವ ಈ ಚಿತ್ರ ಎರಡು ಪಾರ್ಟ್ಗಳಲ್ಲಿ ತೆರೆಗೆ ಬರುತ್ತಿದೆ. ಸುಕುಮಾರ್ ಸಿನಿಮಾದಲ್ಲಿ ಕಥೆ ಜತೆಗೆ ಡಾನ್ಸ್ಗೂ ಹೆಚ್ಚಿನ ಆದ್ಯತೆ ಇರುತ್ತದೆ. ಈ ಮೊದಲು ಕೂಡ ಇದು ಸಾಕಷ್ಟು ಬಾರಿ ಸಾಬೀತಾಗಿದೆ. ಈಗ ಪುಷ್ಪದಲ್ಲೂ ಅಲ್ಲು ಹಾಗೂ ರಶ್ಮಿಕಾ ಒಟ್ಟಾಗಿ ಡಾನ್ಸ್ ಮಾಡಲಿದ್ದಾರೆ. ಅಲ್ಲು ಹೆಜ್ಜೆಗೆ ಮ್ಯಾಚ್ ಮಾಡೋಕೆ ರಶ್ಮಿಕಾ ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.
ರಶ್ಮಿಕಾ ಸದ್ಯ ಡಾನ್ಸ್ ಕ್ಲಾಸ್ಗೆ ತೆರಳುತ್ತಿದ್ದಾರೆ. ಸಿನಿಮಾದಲ್ಲಿ ಬರುವ ಸಾಂಗ್ ಒಂದಕ್ಕಾಗಿ ರಶ್ಮಿಕಾ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಅಲ್ಲು ಹೆಜ್ಜೆ ಜತೆ ಮ್ಯಾಚ್ ಮಾಡಿಕೊಳ್ಳಲು ಎಲ್ಲಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಮಹೇಶ್ ಬಾಬು ನಟನೆಯ ‘ಸರಿಲೇರು ನೀಕೆವ್ವರು’ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಬರುವ ಸಾಂಗ್ ಒಂದರಲ್ಲಿ ರಶ್ಮಿಕಾ ಸಖತ್ ಆಗಿ ಸ್ಟೆಪ್ ಹಾಕಿದ್ದರು. ಈ ಮೂಲಕ ತಾವು ಉತ್ತಮ ಡಾನ್ಸರ್ ಎಂಬುದನ್ನೂ ಸಾಬೀತು ಮಾಡಿದ್ದರು ರಶ್ಮಿಕಾ. ಈಗ ಅಲ್ಲು ಸಿನಿಮಾದಲ್ಲಿ ಅವರ ಡಾನ್ಸ್ ಹೇಗಿರಲಿದೆ ಅನ್ನೋದು ಸದ್ಯದ ಕುತೂಹಲ.
ಪುಷ್ಪ ಸಿನಿಮಾ ಎರಡು ಪಾರ್ಟ್ಗಳಲ್ಲಿ ರಿಲೀಸ್ ಆಗುತ್ತಿದೆ. ಮೊದಲ ಪಾರ್ಟ್ ಇದೇ ಕ್ರಿಸ್ಮಸ್ಗೆ ತೆರೆಗೆ ಬರುತ್ತಿದೆ. ತೆಲುಗು, ತಮಿಳು, ಮಲಯಾಳಂ, ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ಒಟ್ಟಿಗೆ ಬಿಡುಗಡೆ ಆಗುತ್ತಿದೆ. ಫಹಾದ್ ಫಾಸಿಲ್ ಈ ಸಿನಿಮಾದಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಚಿತ್ರತಂಡ ಅವರ ಲುಕ್ ರಿಲೀಸ್ ಮಾಡಿತ್ತು.
ಇದನ್ನೂ ಓದಿ: ತೆಲುಗಿನಲ್ಲಿ ಮೊದಲ ಚಿತ್ರದ ರಿಲೀಸ್ಗೂ ಮುನ್ನವೇ ಹೆಚ್ಚಿದೆ ಕನ್ನಡತಿ ಶ್ರೀಲೀಲಾ ಹವಾ; ರಶ್ಮಿಕಾ, ಪೂಜಾ, ಕೃತಿ ಕಥೆಯೇನು?
ಜಿಮ್ನಲ್ಲಿ ಒಟ್ಟಾಗಿ ವರ್ಕೌಟ್ ಮಾಡಿದ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ; ಫೋಟೋ ವೈರಲ್