‘ಅನಿಮಲ್’ ಸಿನಿಮಾದ ದೃಶ್ಯ ನೋಡಿ ಟ್ರೋಲ್ ಮಾಡಿದವರಿಗೆ ರಶ್ಮಿಕಾ ತಿರುಗೇಟು

ಕಳೆದ ವರ್ಷ ಡಿಸೆಂಬರ್ 1ರಂದು ರಿಲೀಸ್ ಆದ ‘ಅನಿಮಲ್’ ಸಿನಿಮಾ ಭರ್ಜರಿ ಗಳಿಕೆ ಮಾಡಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ತುಟಿ ಕಚ್ಚಿಕೊಂಡು ಹೇಳುವ ಡೈಲಾಗ್ ಇದೆ. ಆ ಡೈಲಾಗ್ ಸರಿಯಾಗಿ ಕೇಳಿಲ್ಲ. ಇದನ್ನು ಟ್ರೋಲ್ ಮಾಡಲಾಗಿತ್ತು. ನಾಲ್ಕು ತಿಂಗಳು ಮೌನ ತಾಳಿದ್ದ ಅವರು ಈಗ ಈ ಬಗ್ಗೆ ಮಾತನಾಡಿದ್ದಾರೆ.  

‘ಅನಿಮಲ್’ ಸಿನಿಮಾದ ದೃಶ್ಯ ನೋಡಿ ಟ್ರೋಲ್ ಮಾಡಿದವರಿಗೆ ರಶ್ಮಿಕಾ ತಿರುಗೇಟು
ರಶ್ಮಿಕಾ

Updated on: Apr 05, 2024 | 7:03 AM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಇಂದು (ಏಪ್ರಿಲ್ 5) ಜನ್ಮದಿನ. ಅವರಿಗೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ರಶ್ಮಿಕಾ ಅವರನ್ನು ಪ್ರೀತಿಸುವ ವರ್ಗ ಒಂದು ಕಡೆಯಾದರೆ, ಅವರನ್ನು ಟ್ರೋಲ್ ಮಾಡುವ ವರ್ಗ ಮತ್ತೊಂದು ಕಡೆ. ರಶ್ಮಿಕಾ ಅವರು ಟ್ರೋಲ್​ಗೆ ಹೆಚ್ಚು ತಲೆಕೆಡಿಸಿಕೊಂಡವರಲ್ಲ. ಆದರೆ, ಎಲ್ಲೋ ಅಪರೂಪಕ್ಕೊಮ್ಮೆ ಈ ಬಗ್ಗೆ ಮೌನ ಮುರಿಯತ್ತಾರೆ. ಕಳೆದ ವರ್ಷ ಡಿಸೆಂಬರ್ 1ರಂದು ರಿಲೀಸ್ ಆದ ‘ಅನಿಮಲ್’ ಸಿನಿಮಾ ಭರ್ಜರಿ ಗಳಿಕೆ ಮಾಡಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ತುಟಿ ಕಚ್ಚಿಕೊಂಡು ಹೇಳುವ ಡೈಲಾಗ್ ಇದೆ. ಆ ಡೈಲಾಗ್ ಸರಿಯಾಗಿ ಕೇಳಿಲ್ಲ. ಇದನ್ನು ಟ್ರೋಲ್ ಮಾಡಲಾಗಿತ್ತು. ನಾಲ್ಕು ತಿಂಗಳು ಮೌನ ತಾಳಿದ್ದ ಅವರು ಈಗ ಈ ಬಗ್ಗೆ ಮಾತನಾಡಿದ್ದಾರೆ.

ನೇಹಾ ಧೂಪಿಯಾ ಶೋಗೆ ಅವರು ಇತ್ತೀಚೆಗೆ ಆಗಮಿಸಿದ್ದರು. ಈ ವೇಳೆ ಅವರು ಈ ಬಗ್ಗೆ ಮಾತನಾಡಿದ್ದಾರು. ‘ದೇಹದ ವಿಚಾರ ಇಟ್ಟುಕೊಂಡು ಮಹಿಳೆಯರನ್ನು ಜನರು ಟ್ರೋಲ್ ಮಾಡೋದು ನನಗೆ ಇಷ್ಟ ಆಗುವುದಿಲ್ಲ. ಸಿನಿಮಾದ ಡೈಲಾಗ್ ವಿಚಾರಕ್ಕೆ ನನ್ನನ್ನು ಟ್ರೋಲ್ ಮಾಡುತ್ತಿದ್ದಾರೆ. ನಾನು ಹೇಗೆ ನಟಿಸಿದ್ದೇನೆ ಅನ್ನೋದು ನನಗೆ ತಿಳಿದಿದೆ’ ಎಂದಿದ್ದಾರೆ ರಶ್ಮಿಕಾ.

‘ಕರ್ವಾ ಚೌತ್ ದೃಶ್ಯವು ಒಂಭತ್ತು ನಿಮಿಷ ಇತ್ತು. ಈ ದೃಶ್ಯ ಮಾಡುವಾಗ ಸೆಟ್‌ನಲ್ಲಿರುವ ಜನರು ಅದನ್ನು ಇಷ್ಟಪಟ್ಟಿದ್ದರು. ಅವರು ಚಪ್ಪಾಳೆ ತಟ್ಟಿದರು. ಚೆನ್ನಾಗಿದೆ ಎಂದು ಹೊಗಳಿದರು. ಆದರೆ ಟ್ರೇಲರ್, ಸಿನಿಮಾ ನೋಡಿದ ಜನರು ಆ ದೃಶ್ಯವನ್ನು ಟ್ರೋಲ್ ಮಾಡಿದರು. ಸೆಟ್​ನಲ್ಲಿ ಇಷ್ಟವಾದ ದೃಶ್ಯವನ್ನು ಜನರು ಈಗ ಟ್ರೋಲ್ ಮಾಡುತ್ತಿದ್ದಾರೆ. ಏನು ಶೂಟ್ ಮಾಡಲಾಗಿದೆ, ಹೇಗೆ ಶೂಟ್ ಮಾಡಲಾಗಿದೆ ಎಂಬುದು ನನಗೆ ತಿಳಿದಿದೆ. ಆದರೆ ಜನರಿಗೆ ತಿಳಿದಿಲ್ಲ. ನಾನು ಜನರೊಂದಿಗೆ ಮಾತನಾಡಬೇಕು. ನಿಜವಾಗಿಯೂ ಏನಾಗುತ್ತಿದೆ ಎಂದು ನನಗೆ ತಿಳಿಯಬೇಕು’ ಎಂದು ರಶ್ಮಿಕಾ ಹೇಳಿದ್ದಾರೆ.

ಇದನ್ನೂ ಓದಿ: ಕಡಿಮೆ ಬಜೆಟ್​ನಲ್ಲಿ ಸಿನಿಮಾ ಮಾಡಲಿರುವ ‘ಅನಿಮಲ್​’ ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ

ರಶ್ಮಿಕಾ ಮಂದಣ್ಣ ಅವರು ಸದ್ಯ ‘ಪುಷ್ಪ 2’, ‘ರೇನ್​ಬೋ’ ಮೊದಲಾದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಧನುಷ್ ನಟನೆಯ ‘ಕುಬೇರ’ ಚಿತ್ರಕ್ಕೆ ಅವರು ನಾಯಕಿ. ವಿಕ್ಕಿ ಕೌಶಲ್ ಜೊತೆ ಅವರು ಸಿನಿಮಾ ಮಾಡುತ್ತಿದ್ದಾರೆ. ಪ್ರತಿ ಸಿನಿಮಾಗಳು ಬೇರೆ ಬೇರೆ ರೀತಿಯಲ್ಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ