‘ಅನಿಮಲ್’ ಚಿತ್ರದಲ್ಲಿ ಶಾರುಖ್ ನಟಿಸಿದ್ರೆ 2000 ಕೋಟಿ ರೂ. ಕಲೆಕ್ಷನ್ ಆಗ್ತಿತ್ತು ಎಂದ ಫ್ಯಾನ್ಸ್
ಸೂಪರ್ ಹಿಟ್ ‘ಅನಿಮಲ್’ ಚಿತ್ರದಲ್ಲಿ ನಟ ರಣಬೀರ್ ಕಪೂರ್ ಹಲವು ಶೇಡ್ ಇರುವ ಪಾತ್ರ ನಿಭಾಯಿಸಿದ್ದರು. ಆ ಗೆಟಪ್ಗಳಲ್ಲಿ ಶಾರುಖ್ ಖಾನ್ ಹೇಗೆ ಕಾಣಿಸಬಹುದು ಎಂಬ ಕಲ್ಪನೆಗೆ ಎಐ ವಿಡಿಯೋ ಜೀವ ತುಂಬಿದೆ. ರಣಬೀರ್ ಕಪೂರ್ ಅವರಿಗಿಂತಲೂ ಚೆನ್ನಾಗಿ ಶಾರುಖ್ ಖಾನ್ ನಟಿಸುತ್ತಿದ್ದರು ಎಂಬುದು ನೆಟ್ಟಿಗರ ವಾದ. ಆ ಬಗ್ಗೆ ಇಲ್ಲಿದೆ ಮಾಹಿತಿ..
ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ (Animal Movie) 2023ರಲ್ಲಿ ತೆರೆಕಂಡು ಬ್ಲಾಕ್ ಬಸ್ಟರ್ ಹಿಟ್ ಆಯಿತು. ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಿದ ಆ ಸಿನಿಮಾಗೆ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಅಂದಾಜು 900 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. ಒಂದು ವೇಳೆ ಅದೇ ಸಿನಿಮಾದಲ್ಲಿ ರಣಬೀರ್ ಕಪೂರ್ (Ranbir Kapoor) ಬದಲು ಶಾರುಖ್ ಖಾನ್ (Shah Rukh Khan) ನಟಿಸಿದ್ದರೆ ಒಟ್ಟು ಕಲೆಕ್ಷನ್ 2 ಸಾವಿರ ಕೋಟಿ ರೂಪಾಯಿ ಆಗುತ್ತಿತ್ತು ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ.
ಕೃತಕ ಬುದ್ಧಿಮತ್ತೆಯಿಂದ ಯಾವುದೇ ಕಲ್ಪನೆಯನ್ನು ಬೇಕಾದರೂ ನಿಜವಾಗಿಸಬಹುದು. ಕೆಲವರು ಇದನ್ನು ಕೆಟ್ಟದ್ದಕ್ಕೆ ಬಳಸುತ್ತಾರೆ. ಆದರೆ ಇನ್ನೊಂದು ವರ್ಗದ ಜನರು ಎಐ ಬಳಸಿಕೊಂಡು ಹೊಸ ಲೋಕ ಸೃಷ್ಟಿಸುತ್ತಾರೆ. ಅದಕ್ಕೆ ಬೆಸ್ಟ್ ಉದಾಹರಣೆ ಇಲ್ಲಿದೆ.. ‘ಅನಿಮಲ್’ ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸಿದ್ದರೆ ಹೇಗಿರುತ್ತಿತ್ತು ಎಂಬುದನ್ನು ತೋರಿಸುವ ಒಂದು ಡೀಪ್ ಫೇಕ್ ವಿಡಿಯೋ ರಚಿಸಲಾಗಿದೆ. ಇದನ್ನು ನೋಡಿದ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.
‘ಅನಿಮಲ್’ ಸಿನಿಮಾದಲ್ಲಿ ರಣಬೀರ್ ಕಪೂರ್ ಅವರು ಅನೇಕ ಶೇಡ್ ಇರುವ ಪಾತ್ರವನ್ನು ನಿಭಾಯಿಸಿದ್ದರು. ಆ ಎಲ್ಲ ಗೆಟಪ್ಗಳಲ್ಲಿ ಶಾರುಖ್ ಹೇಗೆ ಕಾಣಿಸಬಹುದು ಎಂಬ ಕಲ್ಪನೆಗೆ ಈ ವಿಡಿಯೋ ಜೀವ ತುಂಬಿದೆ. ರಣಬೀರ್ ಕಪೂರ್ ಅವರಿಗಿಂತಲೂ ಶಾರುಖ್ ಖಾನ್ ಅವರು ಚೆನ್ನಾಗಿ ನಟಿಸುತ್ತಿದ್ದರು. ಅಲ್ಲದೇ ಅವರ ಫ್ಯಾನ್ ಫಾಲೋಯಿಂಗ್ ದೊಡ್ಡದಿರುವ ಕಾರಣ ಬಾಕ್ಸ್ ಆಫೀಸ್ನಲ್ಲಿ ಎರಡು ಸಾವಿರ ಕೋಟಿ ರೂಪಾಯಿ ಕಮಾಯಿ ಆಗುತ್ತಿತ್ತು ಎಂದು ಕಿಂಗ್ ಖಾನ್ ಅಭಿಮಾನಿಗಳು ಕಮೆಂಟ್ಗಳ ಮೂಲಕ ತಮ್ಮ ಅನಿಸಿಕೆ ತಿಳಿಸಿದ್ದಾರೆ.
ವೈರಲ್ ಆಗಿರುವ ಎಐ ವಿಡಿಯೋ:
View this post on Instagram
ರಶ್ಮಿಕಾ ಮಂದಣ್ಣ, ತೃಪ್ತಿ ದಿಮ್ರಿ, ಬಾಬಿ ಡಿಯೋಲ್, ಅನಿಲ್ ಕಪೂರ್, ರಣಬೀರ್ ಕಪೂರ್ ಮುಂತಾದವರು ‘ಅನಿಮಲ್’ ಸಿನಿಮಾದಲ್ಲಿ ನಟಿಸಿದ್ದರು. ‘ಅರ್ಜುನ್ ರೆಡ್ಡಿ’, ‘ಕಬೀರ್ ಸಿಂಗ್’ ಮೂಲಕ ತಮ್ಮದೇ ಛಾಪು ಮೂಡಿಸಿದ್ದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ‘ಅನಿಮಲ್’ ಚಿತ್ರದ ಬಳಿಕ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಪ್ರಭಾಸ್ ಜೊತೆ ಅವರು ಮುಂದಿನ ಸಿನಿಮಾ ಮಾಡಲಿದ್ದಾರೆ. ಆ ಸಿನಿಮಾ ಹೇಗಿರಲಿದೆ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.
ಜನರು ‘ಸಿಂಗಂ’ ಅಂದುಕೊಂಡಿದ್ರು; ಆದ್ರೆ ರಣಬೀರ್ ಕಪೂರ್ ಆಗಿದ್ದು ಕೇವಲ ‘ಚಿಂಗಂ’
ಇನ್ನು, ಶಾರುಖ್ ಖಾನ್ ಅವರು 2023ರಲ್ಲಿ ‘ಪಠಾಣ್’ ಹಾಗೂ ‘ಜವಾನ್’ ಸಿನಿಮಾಗಳಿಂದ ಗೆಲುವಿನ ಟ್ರ್ಯಾಕ್ಗೆ ಮರಳಿದರು. ‘ಡಂಕಿ’ ಸಿನಿಮಾ ಸಾಧಾರಣ ಕಲೆಕ್ಷನ್ ಮಾಡಿತು. ಅವರ ಹೊಸ ಸಿನಿಮಾ ಘೋಷಣೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಸ್ಕ್ರಿಪ್ಟ್ ಆಯ್ಕೆಯಲ್ಲಿ ಶಾರುಖ್ ಖಾನ್ ಅವರು ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.