ಬಿಗ್ ಬಾಸ್​ನಿಂದ ಬಂದ ಬಳಿಕ ಹೇಗಿದೆ ನಮ್ರತಾ ಗೌಡ ಹಾಗೂ ಸ್ನೇಹಿತ್ ಗೆಳೆತನ?

ಬಿಗ್ ಬಾಸ್​ನಿಂದ ಹೊರ ಬಂದ ಬಳಿಕ ನಮ್ರತಾ ಅವರು ಸ್ನೇಹಿತ್ ಬಳಿ ಮಾತನಾಡಿಲ್ಲ ಎನ್ನಲಾಗಿದೆ. ವಿನಯ್, ಮೈಕಲ್, ರಕ್ಷಕ್, ನಮ್ರತಾ ಮೈಸೂರಿಗೆ ಒಟ್ಟಾಗಿ ತೆರಳಿದ್ದರು. ಈ ವೇಳೆ ಸ್ನೇಹಿತ್ ಅವರು ಇವರ ಜೊತೆ ಇರಲಿಲ್ಲ. ಅನೇಕ ಕಡೆ ನಮ್ರತಾ ಇದ್ದ ಜಾಗದಲ್ಲಿ ಸ್ನೇಹಿತ್ ಇರಲಿಲ್ಲ.

ಬಿಗ್ ಬಾಸ್​ನಿಂದ ಬಂದ ಬಳಿಕ ಹೇಗಿದೆ ನಮ್ರತಾ ಗೌಡ ಹಾಗೂ ಸ್ನೇಹಿತ್ ಗೆಳೆತನ?
ಸ್ನೇಹಿತ್-ನಮ್ರತಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Apr 05, 2024 | 7:50 AM

‘ಬಿಗ್ ಬಾಸ್ ಕನ್ನಡ ಸೀಸನ್ 10’ (BBK 10) ಮುಗಿದು ಕೆಲವು ತಿಂಗಳು ಕಳೆದಿದ್ದರೂ ಇದರ ಬಗ್ಗೆ ಚರ್ಚೆ ನಿಂತಿಲ್ಲ. ಬಿಗ್ ಬಾಸ್ ಸ್ಪರ್ಧಿಗಳು ಆಗಾಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾ ಇರುತ್ತಾರೆ. ಹಲವು ಇವೆಂಟ್​ಗಳಲ್ಲಿ ಭಾಗಿ ಆಗುತ್ತಿದ್ದಾರೆ. ಹಲವು ಬ್ರ್ಯಾಂಡ್​ಗಳ ಪ್ರಚಾರ ಮಾಡಿ ಗಮನ ಸೆಳೆಯುತ್ತಿದ್ದಾರೆ. ಇದರ ಜೊತೆಗೆ ಕಿರುತೆರೆ ಶೋಗಳಲ್ಲೂ ಅವರು ಮಿಂಚುತ್ತಿದ್ದಾರೆ. ಈಗ ಅನೇಕರಿಗೆ ನಮ್ರತಾ ಗೌಡ ಹಾಗೂ ಸ್ನೇಹಿತ್ ಗೌಡ ಮಧ್ಯೆ ಫ್ರೆಂಡ್​ಶಿಪ್ ಇದೆಯೋ ಅಥವಾ ಇಲ್ಲವೋ ಎನ್ನುವ ಪ್ರಶ್ನೆ ಕಾಡುತ್ತಿದೆ.

ಬಿಗ್ ಬಾಸ್​ನಲ್ಲಿ ನಮ್ರತಾ ಗೌಡ ಹಾಗೂ ಸ್ನೇಹಿತ್ ಗೌಡ ಸಖತ್ ಕ್ಲೋಸ್ ಆಗಿದ್ದರು. ಇವರ ಮಧ್ಯೆ ಉತ್ತಮ ಗೆಳೆತನ ಇತ್ತು. ಈ ಕಾರಣಕ್ಕೆ ಅನೇಕರು ಇವರನ್ನು ಟ್ರೋಲ್ ಮಾಡಿದ್ದೂ ಇದೆ. ಪರೋಕ್ಷವಾಗಿ ಸ್ನೇಹಿತ್ ಅವರು ನಮ್ರತಾಗೆ ಪ್ರಪೋಸ್ ಮಾಡಿದ್ದೂ ಇದೆ. ಆದರೆ, ಇದನ್ನು ನಮ್ರತಾ ಒಪ್ಪಿಕೊಂಡಿಲ್ಲ. ನಂತರ ಸ್ನೇಹಿತ್ ಅವರು ಬಿಗ್ ಬಾಸ್​ನಿಂದ ಮೊದಲು ಔಟ್ ಆದರು. ಆ ಬಳಿಕ ಅವರಿಗೆ ಮತ್ತೆ ಬಿಗ್ ಬಾಸ್​ಗೆ ಬರೋ ಅವಕಾಶ ಸಿಕ್ಕಿತ್ತು. ಈ ವೇಳೆ ನಮ್ರತಾ ಅವರಿಂದ ಸ್ನೇಹಿತ್ ಅಂತರ ಕಾಯ್ದುಕೊಂಡರು. ಇದು ನಮ್ರತಾಗೆ ಬೇಸರ ಮೂಡಿಸಿತ್ತು. ಜೊತೆಗೆ ಅವರನ್ನು ಕುಗ್ಗಿಸೋ ಕೆಲಸವನ್ನು ಸ್ನೇಹಿತ್ ಮಾಡಿದ್ದರು. ಇದು ನಮ್ರತಾಗೆ ಮತ್ತಷ್ಟು ಬೇಸರ ತಂದಿತ್ತು.

ಬಿಗ್ ಬಾಸ್​ನಿಂದ ಹೊರ ಬಂದ ಬಳಿಕ ನಮ್ರತಾ ಅವರು ಸ್ನೇಹಿತ್ ಬಳಿ ಮಾತನಾಡಿಲ್ಲ ಎನ್ನಲಾಗಿದೆ. ವಿನಯ್, ಮೈಕಲ್, ರಕ್ಷಕ್, ನಮ್ರತಾ ಮೈಸೂರಿಗೆ ಒಟ್ಟಾಗಿ ತೆರಳಿದ್ದರು. ಈ ವೇಳೆ ಸ್ನೇಹಿತ್ ಅವರು ಇವರ ಜೊತೆ ಇರಲಿಲ್ಲ. ಅನೇಕ ಕಡೆ ನಮ್ರತಾ ಇದ್ದ ಜಾಗದಲ್ಲಿ ಸ್ನೇಹಿತ್ ಇರಲಿಲ್ಲ. ಹೀಗಾಗಿ ಇಬ್ಬರ ಮಧ್ಯೆ ಇರೋ ಫ್ರೆಂಡ್​ಶಿಪ್ ಪೂರ್ತಿ ಕಟ್ ಆಗಿದೆ ಎನ್ನಲಾಗಿದೆ.

ಒಳ್ಳೆಯ ಫ್ರೆಂಡ್​ಶಿಪ್ ಇದ್ದರೆ ಸೋಶಿಯಲ್ ಮೀಡಿಯಾದಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡಿಕೊಳ್ಳುತ್ತಾರೆ. ಆದರೆ, ನಮ್ರತಾ ಗೌಡ ಹಾಗೂ ಸ್ನೇಹಿತ್ ಅವರು ಇನ್​ಸ್ಟಾಗ್ರಾಮ್​ನಲ್ಲಿ ಪರಸ್ಪರ ಫಾಲೋ ಮಾಡಿಕೊಳ್ಳುತ್ತಿಲ್ಲ. ಹೀಗಾಗಿ, ಇಬ್ಬರ ಮಧ್ಯೆ ಯಾವುದೇ ಫ್ರೆಂಡ್​ಶಿಪ್ ಉಳಿದುಕೊಂಡಿಲ್ಲ ಅನ್ನೋದು ಸ್ಪಷ್ಟವಾಗಿದೆ. ಇಬ್ಬರೂ ಎಲ್ಲಾದರೂ ಒಟ್ಟಾಗಿ ಕಾಣಿಸಿಕೊಂಡರೆ ಈ ಗೊಂದಲಕ್ಕೆ ತೆರೆ ಬೀಳಲಿದೆ.

ಇದನ್ನೂ ಓದಿ: ಲೈವ್​ನಲ್ಲಿ ನಮ್ರತಾ ಗೌಡ ಅಂದ ಹೊಗಳಿದ ಕಾರ್ತಿಕ್ ಮಹೇಶ್; ವಿಡಿಯೋ ವೈರಲ್

ನಮ್ರತಾ ಗೌಡ ಅವರಿಗೆ ಬಿಗ್ ಬಾಸ್ ಸಾಕಷ್ಟು ಜನಪ್ರಿಯತೆ ನೀಡಿದೆ. ಈ ಖ್ಯಾತಿ ಸದ್ಯಕ್ಕೆ ಕಡಿಮೆ ಆಗೋದಲ್ಲ. ಹಲವು ಬ್ರ್ಯಾಂಡ್​ಗಳ ಜೊತೆ ಅವರು ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ. ಸಾಕಷ್ಟು ಆಫರ್​ಗಳು ಅವರನ್ನು ಹುಡುಕಿ ಬರುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್