Rashmika Mandanna: ಮಿಲಾನ್​ಗೆ ಹಾರುವ ಮುನ್ನ ತಮ್ಮ ಸೌಂದರ್ಯದ ಗುಟ್ಟು ರಟ್ಟು ಮಾಡಿದ ರಶ್ಮಿಕಾ ಮಂದಣ್ಣ

Milan Fashion Week: ನಟಿ ರಶ್ಮಿಕಾ ಮಂದಣ್ಣ, ವಿಶ್ವಪ್ರಸಿದ್ಧ ಮಿಲಾನ್ ಫ್ಯಾಷನ್ ವೀಕ್ನಲ್ಲಿ ಭಾಗವಹಿಸಲು ತೆರಳಿದ್ದಾರೆ. ವಿಮಾನ ಹತ್ತುವ ಮುನ್ನ ತಮ್ಮ ಸೌಂದರ್ಯದ ಬಗ್ಗೆ ಗುಟ್ಟೊಂದನ್ನು ರಟ್ಟು ಮಾಡಿದ್ದಾರೆ ಈ ಚೆಲುವೆ.

Rashmika Mandanna: ಮಿಲಾನ್​ಗೆ ಹಾರುವ ಮುನ್ನ ತಮ್ಮ ಸೌಂದರ್ಯದ ಗುಟ್ಟು ರಟ್ಟು ಮಾಡಿದ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ

Updated on: Feb 22, 2023 | 8:44 PM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಭಾರತೀಯ ಚಿತ್ರರಂಗದಲ್ಲಿ ಹೊಸ ಎತ್ತರಗಳನ್ನು ಏರುತ್ತಿದ್ದಾರೆ. ಕನ್ನಡದ ಕಿರಿಕ್ ಪಾರ್ಟಿಯಿಂದ ನಟನೆ ಆರಂಭಿಸಿ ಕಡಿಮೆ ಅವಧಿಯಲ್ಲಿಯೇ ಭಾರತ ಚಿತ್ರರಂಗದ ಬೇಡಿಕೆಯ ನಟಿಯರಲ್ಲೊಬ್ಬರು ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಬಾಲಿವುಡ್ ಅಂಗಳದಲ್ಲಿ ಹೆಚ್ಚು ಕಾಲ ಕಳೆಯುತ್ತಿರುವ ಈ ಬೆಡಗಿ ಇದೀಗ ವಿಶ್ವ ಪ್ರಸಿದ್ಧ ಫ್ಯಾಷನ್ ಶೋನಲ್ಲಿ (Fashion Show) ಪಾಲ್ಗೊಳ್ಳಲೆಂದು ವಿದೇಶಕ್ಕೆ ಹಾರಿದ್ದು ಸಿನಿಮಾಗಳ ಜೊತೆಗೆ ಫ್ಯಾಷನ್ ಜಗತ್ತಿನಲ್ಲೂ ಛಾಪು ಮೂಡಿಸುವ ಪ್ರಯತ್ನದಲ್ಲಿದ್ದಾರೆ. ಜಗತ್ತಿನ ನಾಲ್ಕು ಪ್ರಮುಖ ಫ್ಯಾಷನ್ ವೀಕ್​ಗಳಲ್ಲಿ ಒಂದಾಗಿರುವ ಮಿಲಾನ್ ಫ್ಯಾಷನ್ ವೀಕ್​ನಲ್ಲಿ (Milan Fashion Week) ಭಾಗವಹಿಸಲು ರಶ್ಮಿಕಾ ಮಂದಣ್ಣ ಫೆಬ್ರವರಿ 22ರಂದು ಇಟಲಿಯ ಮಿಲಾನ್​ಗೆ ಪ್ರಯಾಣ ಬೆಳೆಸಿದ್ದಾರೆ.

ಫ್ಯಾಷನ್ ಶೋಗೆ ಹೋಗುವ ಮುನ್ನ ಮುಂಬೈ ಏರ್​ಪೋರ್ಟ್​ನಲ್ಲಿ ಪಾಪರಾಜಿಗಳಿಗೆ ಫೋಸು ನೀಡಿದ ರಶ್ಮಿಕಾ, ಅಲ್ಲಿ ಗುಟ್ಟೊಂದನ್ನು ರಟ್ಟು ಮಾಡಿದ್ದಾರೆ! ಮಿಲಾನ್​ಗೆ ಹೊರಟ ರಶ್ಮಿಕಾರನ್ನು ಅಡ್ಡಗಟ್ಟಿದ ಪಾಪರಾಜಿಗಳು, ‘ಮೇಡಂ ನಿಮ್ಮ ಸೌಂದರ್ಯದ ಗುಟ್ಟೇನು’ ಎಂದು ಕೇಳಿದ್ದಾರೆ. ಪ್ರಶ್ನೆಗೆ ಮೊದಲು ಸಣ್ಣಗೆ ನಾಚಿದ ರಶ್ಮಿಕಾ ಬಳಿಕ, ‘ನನ್ನ ನಗುವೇ ನನ್ನ ಸೌಂದರ್ಯದ ಗುಟ್ಟು’ ಎಂದಿದ್ದಾರೆ. ನಂತರ ನನ್ನ ಸೌಂದರ್ಯಕ್ಕೆ ನೀವೂ ಸಹ ಕಾರಣ ಎಂದು ಪಾಪರಾಜಿಗಳಿಗೂ ಕ್ರೆಡಿಟ್ ನೀಡಿದ್ದಾರೆ.

ಇದನ್ನೂ ಓದಿ
Rashmika Mandanna: ಎದೆ ಮೇಲೆ ಆಟೋಗ್ರಾಫ್​ ಹಾಕಿ ಅಂತ ಹಠ ಹಿಡಿದ ರಶ್ಮಿಕಾ ಮಂದಣ್ಣ ಅಭಿಮಾನಿ; ಮುಂದೇನಾಯ್ತು?
Rashmika Mandanna: ‘ಇಂದು ನಾನೇ ಗೋಲ್ಡನ್​ ಗರ್ಲ್​’ ಅಂತ ಪೋಸ್​ ನೀಡಿದ ರಶ್ಮಿಕಾ ಮಂದಣ್ಣ; ಆದ್ರೆ ಜನ ಹೇಳಿದ್ದೇನು?
Rashmika Mandanna: ಬಾಲಿವುಡ್​ ಸೇರಿದ ರಶ್ಮಿಕಾ ಮಂದಣ್ಣ ಹೊಸ ಅವತಾರ ಹೇಗಿದೆ ನೋಡಿ; ಫೋಟೋ ವೈರಲ್​
Rashmika Mandanna: ಸೆಲ್ಫಿ ಕೇಳಿದ ಅಭಿಮಾನಿಗಳ ಜತೆ ರಶ್ಮಿಕಾ ಮಂದಣ್ಣ ನಡೆದುಕೊಂಡಿದ್ದು ಹೇಗೆ? ವಿಡಿಯೋ ವೈರಲ್​

ಇದನ್ನೂ ಓದಿ: ಐದು ಕಡೆ ಐಷಾರಾಮಿ ಅಪಾರ್ಟ್​ಮೆಂಟ್ ಹೊಂದಿದ್ದಾರೆ ರಶ್ಮಿಕಾ ಮಂದಣ್ಣ? ಸ್ಪಷ್ಟನೆ ನೀಡಿದ ನಟಿ

ನಟಿ ರಶ್ಮಿಕಾ ಮಂದಣ್ಣ ಭಾಗವಹಿಸುತ್ತಿರುವ ಮಿಲಾನ್ ಫ್ಯಾಷನ್ ವೀಕ್ ಫೆಬ್ರವರಿ 21ರಂದೇ ಆರಂಭವಾಗಿದ್ದು, ಫೆಬ್ರವರಿ 27ಕ್ಕೆ ಅಂತ್ಯಗೊಳ್ಳಲಿದೆ. ಫ್ಯಾಷನ್ ಜಗತ್ತಿನ ಹಲವು ದಿಗ್ಗಜರು, ಮಾಡೆಲ್​ಗಳು, ನಟಿಯರು ಈ ಫ್ಯಾಷನ್ ಶೋನಲ್ಲಿ ಭಾಗವಹಿಸುತ್ತಾರೆ.

ಸಿನಿಮಾಗಳ ವಿಷಯಕ್ಕೆ ಮರಳುವುದಾದರೆ ರಶ್ಮಿಕಾ ಮಂದಣ್ಣ ಪ್ರಸ್ತುತ ಹಿಂದಿಯ ಅನಿಮಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ ನಾಯಕ. ಇದರ ಹೊರತಾಗಿ ತೆಲುಗಿನ ‘ಪುಷ್ಪ 2’ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.