AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Martin Teaser: ಮಾರ್ಟಿನ್ ಸಿನಿಮಾ ಟೀಸರ್ ನೋಡಲು ಟಿಕೆಟ್! ಕೊಟ್ಟ ಹಣ ಸತ್ಕಾರ್ಯಕ್ಕೆ ಬಳಕೆ

Martin Movie | Dhruva Sarja: ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಧ್ರುವ ಸರ್ಜಾ ಅವರ ‘ಮಾರ್ಟಿನ್’ ಸಿನಿಮಾದ ಟೀಸರ್ ಫೆ.23ರಂದು ಬಿಡುಗಡೆ ಆಗಲಿದೆ. ಟೀಸರ್ ನೋಡಲು ಇಚ್ಛಿಸುವವರು 80 ಅಥವಾ 100 ರೂಪಾಯಿ ಹಣ ನೀಡಿ ಟಿಕೆಟ್​ ಪಡೆಯಬೇಕು.

Martin Teaser: ಮಾರ್ಟಿನ್ ಸಿನಿಮಾ ಟೀಸರ್ ನೋಡಲು ಟಿಕೆಟ್! ಕೊಟ್ಟ ಹಣ ಸತ್ಕಾರ್ಯಕ್ಕೆ ಬಳಕೆ
ಧ್ರುವ ಸರ್ಜಾ
ಮದನ್​ ಕುಮಾರ್​
|

Updated on:Feb 22, 2023 | 7:44 PM

Share

ಧ್ರುವ ಸರ್ಜಾ (Dhruva Sarja) ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಮಾರ್ಟಿನ್’ ಟೀಸರ್ (Martin Movie Teaser) ಫೆಬ್ರವರಿ 23 ರಂದು ವೀರೇಶ್ ಚಿತ್ರಮಂದಿರದಲ್ಲಿ ಬಿಡುಗಡೆ ಆಗಲಿದೆ. ಟೀಸರ್ ವೀಕ್ಷಿಸಲು ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಖರೀದಿಸಿದ್ದು, ಟಿಕೆಟ್ ಮಾರಾಟದಿಂದ ಸಂಗ್ರಹವಾಗುವ ಹಣವನ್ನು ಸತ್ಕಾರ್ಯವೊಂದಕ್ಕೆ ಚಿತ್ರತಂಡ ಬಳಸಲಿದೆ. ಯಾವುದೇ ಸಿನಿಮಾದ ಟೀಸರ್, ಟ್ರೇಲರ್​ಗಳು ಆಯಾ ಸಿನಿಮಾಗಳಿಗೆ ಪ್ರಮುಖ ಪ್ರಚಾರ ಅಸ್ತ್ರ. ಸಾಮಾನ್ಯವಾಗಿ ಚಿತ್ರತಂಡಗಳು ತಮ್ಮ ಸಿನಿಮಾದ ಟೀಸರ್ ಅಥವಾ ಟ್ರೇಲರ್​ಗಳನ್ನು ಯೂಟ್ಯೂಬ್​ನಲ್ಲಿ ಅಥವಾ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡುವುದು ವಾಡಿಕೆ. ಆದರೆ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ (Martin Movie) ಚಿತ್ರತಂಡ ಈ ವಿಷಯದಲ್ಲಿ ತುಸು ಭಿನ್ನವಾಗಿ ಯೋಚಿಸಿದೆ.

‘ಮಾರ್ಟಿನ್’ ಸಿನಿಮಾದ ಟೀಸರ್ ಅನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಹೊಸ ಸಿನಿಮಾಗಳ ಟೀಸರ್​ಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವುದು ಹೊಸ ವಿಷಯವೇನೂ ಅಲ್ಲವಾದರೂ, ‘ಮಾರ್ಟಿನ್’ ಸಿನಿಮಾ ತಂಡ ತುಸು ಮುಂದೆ ಹೋಗಿ ಚಿತ್ರಮಂದಿರದಲ್ಲಿ ಟೀಸರ್ ವೀಕ್ಷಿಸಲು ಟಿಕೆಟ್ ಮಾರಾಟ ಮಾಡುತ್ತಿದೆ!

ಹೌದು, ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾದ ಟೀಸರ್ ಅನ್ನು ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ನಾಳೆ (ಫೆಬ್ರವರಿ 23) ಬಿಡುಗಡೆ ಮಾಡಲಾಗುತ್ತಿದ್ದು, ಟೀಸರ್ ನೋಡಲು ಇಚ್ಛಿಸುವವರು 80 ಅಥವಾ 100 ರೂಪಾಯಿ ಹಣ ತೆರಬೇಕಾಗಿದೆ. ಆದರೆ ಪ್ರೇಕ್ಷಕರು ನೀಡಿದ ಈ ಹಣ ಸತ್ಕಾರ್ಯವೊಂದಕ್ಕೆ ಬಳಕೆ ಆಗಲಿದೆ.

ಇದನ್ನೂ ಓದಿ
Image
Dhruva Sarja: ಅಪ್ಪನಾದ ಖುಷಿಯಲ್ಲಿ ಆಸ್ಪತ್ರೆ ಎದುರು ಅಭಿಮಾನಿಗಳ ಜತೆ ಸೆಲ್ಫಿಗೆ ಪೋಸ್​ ಕೊಟ್ಟ ಧ್ರುವ ಸರ್ಜಾ
Image
ಧ್ರುವ ಸರ್ಜಾ-ಪ್ರೇರಣಾಗೆ ಹೆಣ್ಣು ಮಗು; ರಾಯನ್​ ಜತೆ ಬಂದು ಪ್ರತಿಕ್ರಿಯೆ ನೀಡಿದ ಮೇಘನಾ ರಾಜ್​
Image
Dhruva Sarja: ‘ಹೆಣ್ಮಕ್ಕಳ ಮೇಲೆ ಗೌರವ ಜಾಸ್ತಿ ಆಗಿದೆ’; ಮಗಳು ಜನಿಸಿದ ಬಳಿಕ ಧ್ರುವ ಸರ್ಜಾ ಫಸ್ಟ್​ ರಿಯಾಕ್ಷನ್
Image
Dhruva Sarja: ನಾ ಅಣ್ಣನನ್ನು ತುಂಬಾ ಮಿಸ್ ಮಾಡ್ಕೊತ್ತಿದ್ದೀನಿ: ಖುಷಿಯ ನಡುವೆ ಧ್ರುವ ಸರ್ಜಾರ ನೋವು..!

ಇದನ್ನೂ ಓದಿ: ‘ಅಜ್ಜಿ ಸಾವಿನ ಬಳಿಕ ಆಸ್ಪತ್ರೆಗೆ ಬರಬಾರದು ಅಂದುಕೊಂಡಿದ್ದೆ’; ಅಭಿಮಾನಿಗಾಗಿ ನಿರ್ಧಾರ ಬದಲಿಸಿದ ಧ್ರುವ ಸರ್ಜಾ

ವೀರೇಶ್ ಚಿತ್ರಮಂದಿರದಲ್ಲಿ ಫೆಬ್ರವರಿ 23ರ ಮಧ್ಯಾಹ್ನ 1 ಹಾಗೂ 2 ಗಂಟೆಗೆ ಮಾರ್ಟಿನ್ ಸಿನಿಮಾದ ಟೀಸರ್ ಅನ್ನು ಪ್ರದರ್ಶಿಸಲಾಗುತ್ತದೆ. ಬುಧವಾರದ ವೇಳೆಗಾಗಲೇ ಮಧ್ಯಾಹ್ನ ಒಂದು ಗಂಟೆಯ ಶೋ ಸಂಪೂರ್ಣ ಬುಕ್ ಆಗಿದ್ದು ಎರಡು ಗಂಟೆಯ ಶೋ ಸಹ ಭಾಗಶಃ ಬುಕ್ ಆಗಿದೆ. ಧ್ರುವ ಸರ್ಜಾ ಅಭಿಮಾನಿಗಳು ಮಾತ್ರವಲ್ಲದೆ ಕೆಲವು ಸಿನಿಮಾ ಸೆಲೆಬ್ರಿಟಿಗಳು ಸಹ ಟೀಸರ್ ನೋಡಲು ಟಿಕೆಟ್ ಖರೀದಿಸಿದ್ದಾರೆ.

ಇದನ್ನೂ ಓದಿ: ಏಕಾಏಕಿ ದೇಹದ ತೂಕ ಇಳಿಸಿಕೊಂಡ್ರೆ ಸೈಡ್ ಎಫೆಕ್ಟ್ ಆಗುತ್ತಾ? ಧ್ರುವ ಸರ್ಜಾ ಹೇಳಿದ್ದಿಷ್ಟು

ಹೀಗೆ ಸಿನಿಮಾದ ಟೀಸರ್ ತೋರಿಸಿ ಸಂಗ್ರಹಿಸಲಾಗುವ ಹಣವನ್ನು ಸತ್ಕಾರ್ಯವೊಂದಕ್ಕೆ ಬಳಸಲು ನಟ ಧ್ರುವ ಸರ್ಜಾ ಹಾಗೂ ಇಡೀ ಚಿತ್ರತಂಡ ಯೋಜಿಸಿದೆ. ಟೀಸರ್ ಶೋನಿಂದ ಒಟ್ಟಾಗುವ ಹಣವನ್ನು ಗೋಶಾಲೆಗೆ ನೀಡಿ ಗೋವಿನ ಮಹತ್ವ ಸಾರಲಿದೆ.

ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವ ಜೊತೆಗೆ ಯೂಟ್ಯೂಬ್​ನಲ್ಲಿಯೂ ಸಿನಿಮಾದ ಟೀಸರ್ ಫೆಬ್ರವರಿ 23ರಂದೇ ಬಿಡುಗಡೆ ಆಗಲಿದೆ. ಆದರೆ ಅದಕ್ಕಾಗಿ ವಿಶೇಷ ಕಾರ್ಯಕ್ರಮವನ್ನು ಚಿತ್ರತಂಡ ಆಯೋಜಿಸಿದೆ. ಫೆ.23ರಂದು ನಡೆಯುವ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಧ್ರುವ ಸರ್ಜಾ, ನಟಿ ವೈಭವಿ ಶಾಂಡಿಲ್ಯ, ನಟಿ ಅನ್ವೀಶ್ ಜೈನ್, ನಿರ್ದೇಶಕ ಎಪಿ ಅರ್ಜುನ್ ಇನ್ನಿತರರು ಭಾಗವಹಿಸಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:44 pm, Wed, 22 February 23

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ