Dhananjay: ಸಪ್ತಪದಿ ತುಳಿಯುವಾಸೆಗೆ ಪಾದಯಾತ್ರೆ ಹೊರಟ ಬ್ರಹ್ಮಚಾರಿಗಳು, ಜೊತೆಗೆ ಹೆಜ್ಜೆ ಹಾಕಿದ ಡಾಲಿ

ಮದುವೆಗೆ ಹೆಣ್ಣು ಸಿಗದೆ ನೊಂದಿರುವ ಬ್ರಹ್ಮಾಚಾರಿಗಳ ಪರ ನಿಂತಿರುವ ನಟ ಡಾಲಿ ಧನಂಜಯ್ (Daali Dhananjay), ಮದುವೆಯಾಗಲೆಂದು ಹರಕೆ ಹೊತ್ತು ಪಾದಯಾತ್ರೆ ಹೊರಟ ಬ್ರಹ್ಮಚಾರಿಗಳಿಗೆ ಶುಭ ಹಾರೈಸಿದ್ದಾರೆ. ಮಾತ್ರವಲ್ಲ ತಾವೂ ಸಹ ಜೊತೆಗೆ ಹೆಜ್ಜೆ ಹಾಕಿದ್ದಾರೆ.

Dhananjay: ಸಪ್ತಪದಿ ತುಳಿಯುವಾಸೆಗೆ ಪಾದಯಾತ್ರೆ ಹೊರಟ ಬ್ರಹ್ಮಚಾರಿಗಳು, ಜೊತೆಗೆ ಹೆಜ್ಜೆ ಹಾಕಿದ ಡಾಲಿ
ಅವಿವಾಹಿತರ ಪಾದಯಾತ್ರೆ ಉದ್ಘಾಟಿಸಿದ ಡಾಲಿ ಧನಂಜಯ್
Follow us
ಮಂಜುನಾಥ ಸಿ.
|

Updated on:Feb 23, 2023 | 11:54 AM

ವಯಸ್ಸು ಏರುತ್ತಿದೆ ಆದರೆ ಮದುವೆಗೆ ಯಾರೂ ಹೆಣ್ಣು ಕೊಡುತ್ತಿಲ್ಲವೆಂದು ರೊಚ್ಚಿಗೆದ್ದ ಕೆಲ ಬ್ರಹ್ಮಚಾರಿ  (Bachelor) ಯುವಕರು ಮದುವೆಯಾಗಲೆಂದು ಹರಕೆ ಹೊತ್ತು ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದು ಈ ಪಾದಯಾತ್ರೆಗೆ ಸ್ಯಾಂಡಲ್​ವುಡ್​ನ (Sandalwood) ಮೋಸ್ಟ್ ಎಲಿಜಿಬೆಲ್ ಬ್ಯಾಚುಲರ್ ಡಾಲಿ ಧನಂಜಯ್ (Daali Dhananjay) ಚಾಲನೆ ನೀಡಿದ್ದಾರೆ.

ಮಂಡ್ಯ ಜಿಲ್ಲೆ ಕೆ.ಎಂ.ದೊಡ್ಡಿ ಗ್ರಾಮದ ವೆಂಕಟೇಶ್ವರಸ್ವಾಮಿ ದೇವಾಲಯದಿಂದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮಂದಿ ಯುವಕರು ಪಾದಯಾತ್ರೆ ಆರಂಭಿಸಿದ್ದಾರೆ. ಈ ಪಾದಯಾತ್ರೆಗೆ ಚಾಲನೆ ನೀಡಿರುವ ಡಾಲಿ ಧನಂಜಯ್ ಕೆಲ ದೂರ ಅವಿವಾಹಿತ ಯುವಕರೊಂದಿಗೆ ತಾವೂ ಹೆಜ್ಜೆ ಹಾಕಿದರು. ಈ ಸಮಯದಲ್ಲಿ ಮತ್ತೊಬ್ಬ ನಟ ನಾಗಭೂಷಣ್ ಸಹ ಇದ್ದರು.

ಬ್ರಹ್ಮಚಾರಿಗಳ ನೋವು ಆಲಿಸಿದ ಡಾಲಿ ಧನಂಜಯ್ ಹಾಗೂ ನಾಗಭೂಷಣ್, ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ ಎಲ್ಲ ಬ್ರಹ್ಮಚಾರಿಗಳು ಮುಂದಿನ ವರ್ಷದ ವೇಳೆಗೆ ಗೃಹಸ್ಥರಾಗಲಿ ಎಂದು ಹಾರೈಸಿ, ಬಡವರ ಮಕ್ಳು ಬೆಳೀಬೇಕು, ರೈತರ ಮಕ್ಳಿಗೆ ಹೆಣ್ಣು ಸಿಗ್ಬೇಕು ಎಂದರು ಡಾಲಿ.

ಈ ಪಾದಯಾತ್ರೆಯಲ್ಲಿ ಕೆ.ಎಂ.ದೊಡ್ಡಿ ಗ್ರಾಮದ ಅವಿವಾಹಿತರು ಮಾತ್ರವೇ ಅಲ್ಲದೆ ಇನ್ನೂ ಕೆಲವು ಗ್ರಾಮಗಳ ಅವಿವಾಹಿತ ಯುವಕರು ಹಾಗೂ ಹೊರ ರಾಜ್ಯದ ಇಬ್ಬರು ಯುವಕರು ಸಹ ಭಾಗವಹಿಸಿದ್ದು ವಿಶೇಷ. ಪಾದಯಾತ್ರೆ ತಂಡದಲ್ಲಿರುವ ಬಹುತೇಕರು ರೈತರ ಮಕ್ಕಳು, ಸ್ವತಃ ಯುವ ರೈತರೇ ಆಗಿದ್ದಾರೆ.

ಪಾದಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಊಟ, ವಸತಿ ಹಾಗೂ ಪಾನೀಯದ ವ್ಯವಸ್ಥೆಯನ್ನು ಆಯೋಜಕರೇ ಮಾಡಿದ್ದು, ಕೆಎಂ ದೊಡ್ಡಿ, ಮಳವಳ್ಳಿ, ಕೊಳ್ಳೆಗಾಲ, ಹನೂರು ಮಾರ್ಗವಾಗಿ ಮೂರು ದಿನಗಳ ನಡೆದು ಈ ತಂಡವು ಮಲೆ ಮಾದೇಶ್ವರ ಬೆಟ್ಟ ಸೇರಿಕೊಳ್ಳಲಿದೆ.

ಗ್ರಾಮೀಣ ಭಾಗದ ಯುವಕರಿಗೆ ಮದುವೆಯಾಗಲು ಹೆಣ್ಣು ಕೊಡುತ್ತಿಲ್ಲ, ಅದರಲ್ಲಿಯೂ ರೈತರ ಮನೆ ಮಕ್ಕಳನ್ನಂತೂ ಹೆಣ್ಣು ಹೆತ್ತವರು ತೀರ ಅವಗಣನೆ ಮಾಡಿದ್ದಾರೆ ಎಂದು ಕೆಲ ಅವಿವಾಹಿತ ಯುವಕರು ಬೇಸರ ವ್ಯಕ್ತಪಡಿಸಿದ್ದಾರೆ. ಹೀಗೆ ಕಡೆಗಣನೆಗೆ ಒಳಗಾದ ಅವಿವಾಹಿತರಿಗೆ ವಿವಾಹವಾಗಲೆಂದು ಈ ಪಾದಯಾತ್ರೆಯನ್ನು ಪ್ರತಿ ವರ್ಷವೂ ಆಯೋಜಿಸುವುದಾಗಿ ಪಣ ತೊಟ್ಟಿದ್ದಾರೆ ಕೆಎಂ ದೊಡ್ಡಿಯ ಬ್ರಹ್ಮಚಾರಿಗಳು.

ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಕೆಲ ಷರತ್ತುಗಳನ್ನು ಸಹ ವಿಧಿಸಿದ್ದಾರೆ. ಕಡ್ಡಾಯವಾಗಿ 30 ವರ್ಷದ ದಾಟಿದ ಅವಿವಾಹಿತರಷ್ಟೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬಹುದು. ಮದುವೆಯಾದವರಿಗೆ ಪಾದಯಾತ್ರೆ ಮಾಡಲು ಅವಕಾಶವಿಲ್ಲ. ನಿಶ್ಚಿತಾರ್ಥ ಆದವರೂ ಸಹ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:52 am, Thu, 23 February 23

ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ