‘ಆ್ಯಂಕರ್ ಅನುಶ್ರೀ ಮದುವೆ ಆದಮೇಲೆ ನನ್ನ ವಿವಾಹ’; ವೇದಿಕೆ ಮೇಲೆ ಘೋಷಣೆ ಮಾಡಿದ ಡಾಲಿ ಧನಂಜಯ್
ಧನಂಜಯ್ ಹಾಗೂ ಅದಿತಿ ಪ್ರಭುದೇವ ನಟನೆಯ ‘ಒನ್ಸ್ ಅಪಾನ ಟೈಮ್ ಇನ್ ಜಮಾಲಿ ಗುಡ್ಡ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಹಿಂದೆಂದೂ ಮಾಡಿರದ ಪಾತ್ರದಲ್ಲಿ ಧನಂಜಯ್ ಅವರು ಕಾಣಿಸಿಕೊಂಡಿದ್ದಾರೆ ಎಂಬುದಕ್ಕೆ ಟ್ರೇಲರ್ ಸಾಕ್ಷ್ಯ ನೀಡಿದೆ.
ಸೆಲೆಬ್ರಿಟಿಗಳ ಮದುವೆ ವಿಚಾರದಲ್ಲಿ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಇರುತ್ತದೆ. ಅವರು ಯಾರನ್ನು ಪ್ರೀತಿ ಮಾಡುತ್ತಿದ್ದಾರೆ, ಯಾರನ್ನು ಮದುವೆ ಆಗುತ್ತಾರೆ ಎಂಬ ಕುತೂಹಲ ಸದಾ ಇರುತ್ತದೆ. ಅದೇ ರೀತಿ ಡಾಲಿ ಧನಂಜಯ್ (Dhananjay) ಅವರು ಯಾವಾಗ ಮದುವೆ ಆಗುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಆಗಾಗ ಎದುರಾಗುತ್ತಲೇ ಇರುತ್ತದೆ. ಅದೇ ರೀತಿ ಆ್ಯಂಕರ್ ಅನುಶ್ರೀ (Anchor Anushree) ವಿವಾಹದ ಬಗ್ಗೆಯೂ ಅನೇಕರಿಗೆ ಕುತೂಹಲ ಇದೆ. ಈಗ ಇಬ್ಬರೂ ಒಂದೇ ವೇದಿಕೆ ಏರಿದ್ದರು. ಈ ವೇಳೆ ಧನಂಜಯ್ ಅವರು ಮದುವೆ ವಿಚಾರದಲ್ಲಿ ಹೊಸ ಘೋಷಣೆ ಮಾಡಿದರು. ಇದನ್ನು ಕೇಳಿ ಫ್ಯಾನ್ಸ್ ನಕ್ಕಿದ್ದಾರೆ.
ಧನಂಜಯ್ ಹಾಗೂ ಅದಿತಿ ಪ್ರಭುದೇವ ‘ಒನ್ಸ್ ಅಪಾನ ಎ ಟೈಮ್ ಇನ್ ಜಮಾಲಿ ಗುಡ್ಡ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಹಿಂದೆಂದೂ ಮಾಡಿರದ ಪಾತ್ರದಲ್ಲಿ ಧನಂಜಯ್ ಅವರು ಕಾಣಿಸಿಕೊಂಡಿದ್ದಾರೆ ಎಂಬುದಕ್ಕೆ ಟ್ರೇಲರ್ ಸಾಕ್ಷ್ಯ ನೀಡಿದೆ. ಸದಾ ವಿಭಿನ್ನ ಪಾತ್ರಗಳ ಮೂಲಕ ಧನಂಜಯ್ ಅವರು ಗುರುತಿಸಿಕೊಳ್ಳುತ್ತಾರೆ. ಈಗ ಈ ಸಿನಿಮಾ ಮೂಲಕ ಅವರು ಮತ್ತೊಂದು ಪ್ರಯೋಗಾತ್ಮಕ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಭಾನುವಾರ (ಡಿಸೆಂಬರ್ 25) ನಡೆದಿದೆ. ಈ ಕಾರ್ಯಕ್ರಮದಲ್ಲಿ ಧನಂಜಯ್ ಅವರಿಗೆ ಅನುಶ್ರೀ ಅವರು ಮದುವೆ ಬಗ್ಗೆ ಪ್ರಶ್ನೆ ಮಾಡಿದರು.
‘ನಿಮ್ಮ ಗೆಳೆಯ ಚಿಟ್ಟೆ (ವಸಿಷ್ಠ ಸಿಂಹ) ಇತ್ತೀಚೆಗೆ ಎಂಗೇಜ್ ಆದರು. ನಿಮ್ಮ ಮದುವೆ ಯಾವಾಗ’ ಎಂದು ಧನಂಜಯ್ಗೆ ವೇದಿಕೆ ಮೇಲೆ ಅನುಶ್ರೀ ಪ್ರಶ್ನೆ ಮಾಡಿದರು. ಈ ಪ್ರಶ್ನೆಗೆ ಧನಂಜಯ್ಗೆ ಏನು ಉತ್ತರಿಸಬೇಕು ಎಂಬುದು ತಿಳಿಯಲಿಲ್ಲ. ‘ಮದುವೆ ಆಗಬೇಕಾ?’ ಎಂದು ಫ್ಯಾನ್ಸ್ ಬಳಿ ಪ್ರಶ್ನೆ ಮಾಡಿದರು. ಬಳಿಕ ‘ಫ್ಯಾನ್ಸ್ ಬೇಡ ಎನ್ನುತ್ತಿದ್ದಾರೆ’ ಎಂದು ಧನಂಜಯ್ ಉತ್ತರಿಸಿದರು.
ಇದನ್ನೂ ಓದಿ: ‘ಜಮಾಲಿ ಗುಡ್ಡ’ ವೇದಿಕೆ ಮೇಲೆ ಕಾಫಿ ನಾಡು ಚಂದು ಸ್ಟೈಲ್ನಲ್ಲಿ ಅದಿತಿಗೆ ವಿಶ್ ಮಾಡಿದ ಅನುಶ್ರೀ
ಅನುಶ್ರೀ ಅವರೂ ಮದುವೆ ಆಗಿಲ್ಲ. ಅವರಿಗೂ ಈ ಬಗ್ಗೆ ಆಗಾಗ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ. ಧನಂಜಯ್ ಅವರಿಗೂ ಇದು ನೆನಪಾಗಿದೆ. ‘ಅನುಶ್ರೀ ಮದುವೆ ಆಗುವ ಘೋಷಣೆ ಮಾಡಿದ ಬೆನ್ನಲ್ಲೇ ನಾನು ಮದುವೆ ಆಗುತ್ತೇನೆ’ ಎಂದು ಘೋಷಣೆ ಮಾಡಿದರು. ‘ನೀವು ತುಂಬಾ ಸಮಯ ಕಾಯಬೇಕಾಗುತ್ತದೆ’ ಎಂದರು ಅನುಶ್ರೀ. ಈ ಮಾತಿಗೆ ಫ್ಯಾನ್ಸ್ ನಕ್ಕಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:56 am, Mon, 26 December 22