Martin Teaser Launch: ವೀರೇಶ್ ಚಿತ್ರಮಂದಿರದ ಒಳಗೆ ಧ್ರುವ ಫ್ಯಾನ್ಸ್: ಟೀಸರ್ ರಿಲೀಸ್​ಗೆ ಕ್ಷಣಗಣನೆ

Vinay Bhat
|

Updated on:Feb 23, 2023 | 3:35 PM

ಮಾರ್ಟಿನ್ ಟೀಸರ್ ಬಿಡುಗಡೆ ಲೈವ್ ಅಪ್ಡೇಟ್ಸ್: ಮಧ್ಯಾಹ್ನ 1 ಹಾಗೂ 2 ಗಂಟೆಗೆ ಮಾರ್ಟಿನ್ ಸಿನಿಮಾದ ಟೀಸರ್ ಅನ್ನು ವೀರೇಶ್ ಚಿತ್ರಮಂದಿರದಲ್ಲಿ ಪ್ರದರ್ಶಿಸಲಾಗುತ್ತದೆ. ಧ್ರುವ ಸರ್ಜಾ ಅಭಿಮಾನಿಗಳು ಮಾತ್ರವಲ್ಲದೆ ಕೆಲವು ಸಿನಿಮಾ ಸೆಲೆಬ್ರಿಟಿಗಳು ಸಹ ಟೀಸರ್ ನೋಡಲು ಟಿಕೆಟ್ ಖರೀದಿಸಿದ್ದಾರೆ.

Martin Teaser Launch: ವೀರೇಶ್ ಚಿತ್ರಮಂದಿರದ ಒಳಗೆ ಧ್ರುವ ಫ್ಯಾನ್ಸ್: ಟೀಸರ್ ರಿಲೀಸ್​ಗೆ ಕ್ಷಣಗಣನೆ
ಧ್ರುವ ಸರ್ಜಾ

Martin Teaser Release Live Updates:  ಧ್ರುವ ಸರ್ಜಾ (Dhruva Sarja) ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಮಾರ್ಟಿನ್’ ಟೀಸರ್ (Martin Movie Teaser) ಇಂದು ವೀರೇಶ್ ಚಿತ್ರಮಂದಿರದಲ್ಲಿ ಬಿಡುಗಡೆ ಆಗಲಿದೆ. ಮಧ್ಯಾಹ್ನ 1 ಹಾಗೂ 2 ಗಂಟೆಗೆ ಮಾರ್ಟಿನ್ ಸಿನಿಮಾದ ಟೀಸರ್ ಅನ್ನು ಪ್ರದರ್ಶಿಸಲಾಗುತ್ತದೆ. ಈಗಾಗಲೇ ಮಧ್ಯಾಹ್ನ ಒಂದು ಗಂಟೆಯ ಶೋ ಸಂಪೂರ್ಣ ಬುಕ್ ಆಗಿದ್ದು ಎರಡು ಗಂಟೆಯ ಶೋ ಸಹ ಭಾಗಶಃ ಬುಕ್ ಆಗಿದೆ. ಧ್ರುವ ಸರ್ಜಾ ಅಭಿಮಾನಿಗಳು ಮಾತ್ರವಲ್ಲದೆ ಕೆಲವು ಸಿನಿಮಾ ಸೆಲೆಬ್ರಿಟಿಗಳು ಸಹ ಟೀಸರ್ ನೋಡಲು ಟಿಕೆಟ್ ಖರೀದಿಸಿದ್ದಾರೆ. ರಾಜಾಜಿನಗರ ಕೆಂಪೇಗೌಡ ಸಮುದಾಯ ಭವನದಿಂದ ಶುರುವಾದ ಅದ್ದೂರಿ ಮೆರವಣಿಗೆಯಲ್ಲಿ ಮೆರವಣಿಗೆಯಲ್ಲಿ ದ್ರುವ ಸರ್ಜಾ ಹಾಗು ಚಿತ್ರತಂಡ ಭಾಗಿಯಾಗಿದೆ. ಕಲಾತಂಡಗಳು ಬೈಕ್ ರ್ಯಾಲಿ ಜೊತೆ ಚಿತ್ರಮಂದಿರ ತಲುಪುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗಿಯಾಗಿದ್ದಾರೆ.

LIVE NEWS & UPDATES

The liveblog has ended.
  • 23 Feb 2023 02:46 PM (IST)

    Karnataka News Live: ಈ ಬಾರಿ ಕರ್ನಾಟಕದಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಅಮಿತ್ ಶಾ

    ಬಳ್ಳಾರಿ: ಈ ಬಾರಿ ಕರ್ನಾಕಟದಲ್ಲಿ ಪೂರ್ಣ ಬಹುಮತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಅಮಿತ್ ಶಾ ಹೇಳಿದ್ದಾರೆ. ಬಳ್ಳಾರಿ ಜಿಲ್ಲೆ ಸಂಡೂರಿನ ಎಸ್​ಆರ್​ಎಸ್​​ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಭಾಷಣ ಮಾಡಿದ ಅವರು, ಸಂಡೂರಿನ ಕುಮಾರಸ್ವಾಮಿ ದೇವರಿಗೆ ನನ್ನ ನಮಸ್ಕಾರಗಳು. ಕಾರ್ಯಕ್ರಮಕ್ಕೆ ಬರಲು ನನ್ನಿಂದ ತಡವಾಗಿದ್ದಕ್ಕೆ ಕ್ಷಮೆ ಕೇಳುತ್ತೇನೆ ಎಂದರು. ಕಾಂಗ್ರೆಸ್, ಜೆಡಿಎಸ್ ಎರಡೂ ಪಕ್ಷಗಳು ಕುಟುಂಬವಾದಿ ಪಕ್ಷಗಳಾಗಿವೆ. ಕುಟುಂಬವಾದಿ ಪಕ್ಷಗಳಿಂದ ಬಡವರ ಕಲ್ಯಾಣ ಮಾಡುವುದಿಲ್ಲ. ಸಿದ್ದರಾಮಯ್ಯ ಅವಧಿಯಲ್ಲಿ ಹೈಕಮಾಂಡ್​ಗೆ ಎಟಿಎಂ ಆಗಿತ್ತು. ಕರ್ನಾಟಕ ಕಾಂಗ್ರೆಸ್ ದೆಹಲಿ ಹೈಕಮಾಂಡ್​​ಗೆ ಎಟಿಎಂ ಆಗಿತ್ತು ಎಂದು ಆರೋಪಿಸಿದರು. ಪಿಎಫ್​ಐ ಸಂಘಟನೆಯನ್ನು ಪ್ರಧಾನಿ ಮೋದಿ ನಿಷೇಧ ಮಾಡಿದರು. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ PFI ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ಪಡೆದುಕೊಂಡಿದ್ದರು ಎಂದರು.

  • 23 Feb 2023 01:35 PM (IST)

    Martin Teaser Launch Live: ಮಾರ್ಟಿನ್ ಟೀಸರ್ ಬಗ್ಗೆ ನಟಿ ಮಣಿಯರು ಏನಂದ್ರು?

    ಮಾರ್ಟಿನ್ ಟೀಸರ್ ಬಗ್ಗೆ ನಟಿ ಅನ್ವೇಶಿ ಹಾಗೂ ವೈಭವಿ ಮಾತನಾಡಿದ್ದು ಏನು ಹೇಳಿದ್ದಾರೆ ನೋಡಿ.

  • 23 Feb 2023 12:51 PM (IST)

    Martin Teaser Launch Live: ಟೀಸರ್ ನೋಡಲು ಮುಗಿಬಿದ್ದ ಫ್ಯಾನ್ಸ್

    ಕೆಲವೇ ನಿಮಿಷಗಳಲ್ಲಿ ಮಾರ್ಟಿನ್ ಸಿನಿಮಾದ ಟೀಸರ್ ಬಿಡುಗಡೆ ಆಗಲಿದ್ದು, ಧ್ರುವ ಸರ್ಜಾ ಅಭಿಮಾನಿಗಳು ಘೋಷಣೆಗಳ ಕೂಗುತ್ತಾ ವೀರೇಶ್ ಚಿತ್ರಮಂದಿರ ಪ್ರವೇಶ ಮಾಡಿದ್ದಾರೆ. 1 ಗಂಟೆಗೆ ಸಿನಿಮಾದ ಟೀಸರ್ ಪ್ರದರ್ಶನ ನಡೆಯಲಿದೆ.

  • 23 Feb 2023 11:56 AM (IST)

    Martin Teaser Launch Live: ದ್ರುವ ಸರ್ಜಾ ಕಟೌಟ್​ಗೆ ಹಾಲಿನ ಅಭಿಷೇಕ

    ವೀರೇಶ್ ಚಿತ್ರಮಂದಿರದಲ್ಲಿ ತಲೆ ಎತ್ತಿರುವ ದ್ರುವ ಸರ್ಜಾ ಕಟೌಟ್​ಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿದ್ದಾರೆ. ಥಿಯೇಟರ್ ಮುಂದೆ ತಮಟೆ ಸೌಂಡ್​ಗೆ ಫ್ಯಾನ್ಸ್​ ಕುಣಿದು ಕುಪ್ಪಳಿಸುತ್ತಿದ್ದಾರೆ. ಇದರ ನಡುವೆ ಮೆರವಣಿಗೆ ಮೂಲಕ ವಿರೇಶ್ ಚಿತ್ರಮಂದಿರಕ್ಕೆ ನಿರ್ದೆಶಕ ಎ.ಪಿ ಅರ್ಜುನ್ ಹಾಗು ನಾಯಕಿ ವೈಭವಿ ಶಾಂಡಿಲ್ಯಾ ಆಗಮಿಸಿದ್ದಾರೆ.

  • 23 Feb 2023 11:29 AM (IST)

    Martin Teaser Launch Live: ವೀರೇಶ್ ಚಿತ್ರಮಂದಿರದ ಮುಂದೆ ಅಭಿಮಾನಿಗಳು ಸಂಭ್ರಮಾಚರಣೆ

    ವೀರೇಶ್ ಚಿತ್ರಮಂದಿರದ ಮುಂದೆ ಧ್ರುವ ಸರ್ಜಾ ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಡೊಳ್ಳು ಕುಣಿತ, ಪಟಾಕಿ ಹೊಡೆತ ಜೋರಾಗಿ ಸಾಗಿವೆ.

  • 23 Feb 2023 11:26 AM (IST)

    Martin Teaser Launch Live: ವೀರೇಶ್ ಚಿತ್ರಮಂದಿರ ತಲುಪಿದ ಧ್ರುವ ಫ್ಯಾನ್ಸ್

    ಆಟೋ ಬೈಕ್ ರ್ಯಾಲಿ ಮೂಲಕ ಧ್ರವ ಸರ್ಜಾ ಅಭಿಮಾನಿಗಳು ವೀರೇಶ್ ಚಿತ್ರಮಂದಿರ ತಲುಪಿದ್ದಾರೆ. ಕೆಲವೇ ಹೊತ್ತಿನಲ್ಲಿ ಮಾರ್ಟಿನ್ ಟೀಸರ್ ಬಿಡುಗಡೆ ಆಗಲಿದೆ.

  • 23 Feb 2023 11:22 AM (IST)

    ಮಾರ್ಟಿನ್ ಟೀಸರ್ ರಿಲೀಸ್​ಗೆ ಭರ್ಜರಿ ಪ್ಲಾನ್

    ಮಾರ್ಟಿನ್ ಟೀಸರ್ ರಿಲೀಸ್​ಗೆ ಭರ್ಜರಿ ಪ್ಲಾನ್ ನಡಿತಿದೆ. ಇಂದು ವೀರೇಶ್ ಚಿತ್ರಮಂದಿರದಲ್ಲಿ ಈಗಾಗಲೇ ಧ್ರುವ ಫ್ಯಾನ್ಸ್ ಬಂದು ಎಲ್ಲ ತಯಾರಿ ನಡೆಸುತ್ತಿದ್ದಾರೆ.

  • 23 Feb 2023 11:05 AM (IST)

    ಮೆರವಣಿಗೆಯಲ್ಲಿ ಆಂಜನೇಯನ ವೇಷಧಾರಿಗಳು

    ಮಾರ್ಟಿನ್ ಟೀಸರ್ ರಿಲೀಸ್ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಚಂಡೆ-ಮದ್ದಳೆ ಕಲಾ ತಂಡಗಳು ಭಾಗಿಯಾಗಿವೆ. ಜೊತೆಗೆ ಆಂಜನೇಯನ ವೇಷಧಾರಿಗಳು ಕೂಡ ಭಾಗಿ ಆಗಿರುವುದು ವಿಶೇಷ. ಧ್ರುವ ಸರ್ಜಾ ಆಂಜನೇಯ ಸ್ವಾಮಿಯ ಪರಮ ಭಕ್ತರು.

  • 23 Feb 2023 11:01 AM (IST)

    ಮಾರ್ಟಿನ್ ಟೀಸರ್ ರಿಲೀಸ್ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ

    ಮಾರ್ಟಿನ್ ಟೀಸರ್ ರಿಲೀಸ್ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ದೊರೆತಿದೆ. ರಾಜಾಜಿನಗರ ಕೆಂಪೇಗೌಡ ಸಮುದಾಯ ಭವನದಿಂದ ಮೆರವಣಿಗೆ ಆರಂಭವಾಗಿದ್ದು ಧ್ರುವ ಸರ್ಜಾ ಹಾಗೂ ಚಿತ್ರತಂಡ ಭಾಗಿಯಾಗಿದೆ. ಕಲಾ ತಂಡಗಳು ಮೆರವಣಿಗೆಯಲ್ಲಿದ್ದು ಫ್ಯಾನ್ಸ್ ಬೈಕ್ ರ್ಯಾಲಿ ಮಾಡುತ್ತಾ ವೀರೇಶ್ ಚಿತ್ರಮಂದಿರವನ್ನು ತಲುಪಲಿದ್ದಾರೆ.

  • 23 Feb 2023 10:53 AM (IST)

    Martin Teaser Launch Live: ಮಾರ್ಟಿನ್ ಟೀಸರ್ ಯೂಟ್ಯೂಬ್​ನಲ್ಲಿ ಎಷ್ಟು ಗಂಟೆಗೆ ಬಿಡುಗಡೆ?

    ಮಾರ್ಟಿನ್ ಟೀಸರ್ ಇಂದು ಮಧ್ಯಾಹ್ನ 1 ಹಾಗೂ 2 ಗಂಟೆಗೆ ವೀರೇಶ್ ಚಿತ್ರಮಂದಿರದಲ್ಲಿ ಬಿಡುಗಡೆ ಆಗಲಿದೆ.  ಅದೇರೀತಿ ಸಂಜೆ 5 ಗಂಟೆ 5 ನಿಮಿಷಕ್ಕೆ ಅಧಿಕೃತವಾಗಿ ಯೂಟ್ಯೂಬ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ರಿಲೀಸ್ ಆಗಲಿದೆ.

  • 23 Feb 2023 10:46 AM (IST)

    ಧ್ರುವ ಅಭಿಮಾನಿಗಳ ಸಂಭ್ರಮ

    ರಾಜಾಜಿನಗರ ಕೆಂಪೇಗೌಡ ಸಮುದಾಯ ಭವನದಿಂದ ಅದ್ದೂರಿ ಮೆರವಣಿಗೆ ಆರಂಭವಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗಿಯಾಗಿದ್ದಾರೆ. ಡೊಳ್ಳು ಕುಣಿತ, ಚೆಂಡೇ, ವಾಧ್ಯ, ಜನಪದ ಕಲಾ ತಂಡಗಳ ಜೊತೆ ಚಿತ್ರತಂಡದ ಸಂಭ್ರಮಿಸುತ್ತಿದೆ. ಅಭಿಮಾನಿಗಳಂತೂ ರಸ್ತೆಯುದ್ದಕ್ಕೂ ಪಟಾಕಿ ಸಿಡಿಸಿ ಖುಷಿ ಪಡುತ್ತಿದ್ದಾರೆ.

  • 23 Feb 2023 10:40 AM (IST)

    ಮಾರ್ಟಿನ್ ಟೀಸರ್ ಬಿಡುಗಡೆಗೆ ಕ್ಷಣಗಣನೆ

    ಧ್ರುವ ಸರ್ಜಾ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಮಾರ್ಟಿನ್’ ಟೀಸರ್ ಇಂದು  ಮಧ್ಯಾಹ್ನ 1 ಹಾಗೂ 2 ಗಂಟೆಗೆ ವೀರೇಶ್ ಚಿತ್ರಮಂದಿರದಲ್ಲಿ ಬಿಡುಗಡೆ ಆಗಲಿದೆ.

  • Published On - Feb 23,2023 10:38 AM

    Follow us
    ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು
    ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು
    Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ
    Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ
    ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
    ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
    ತಮ್ಮ ರಾಜಕೀಯ ವೈರಿ ಚಲುವರಾಯಸ್ವಾಮಿ ಕೆಲಸವನ್ನು ಶ್ಲಾಘಿಸಿದ ಕುಮಾರಣ್ಣ..!
    ತಮ್ಮ ರಾಜಕೀಯ ವೈರಿ ಚಲುವರಾಯಸ್ವಾಮಿ ಕೆಲಸವನ್ನು ಶ್ಲಾಘಿಸಿದ ಕುಮಾರಣ್ಣ..!
    ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
    ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
    ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
    ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
    ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
    ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
    ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
    ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
    ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
    ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
    ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
    ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ