ಸದ್ಯಕ್ಕಂತೂ ನಟಿ ರಶ್ಮಿಕಾ ಮಂದಣ್ಣ (Rashmika Mandanna ) ಅವರು ಯಶಸ್ಸಿನ ಉತ್ತುಂಗದಲ್ಲಿ ಇದ್ದಾರೆ. ದಕ್ಷಿಣ ಭಾರತದ ಸ್ಟಾರ್ ನಟರ ಸಿನಿಮಾಗಳಿಗೆ ಅವರೇ ನಾಯಕಿ ಆಗಬೇಕು ಎಂದು ನಿರ್ದೇಶಕರು ಪಟ್ಟು ಹಿಡಿಯುತ್ತಿದ್ದಾರೆ. ಎಷ್ಟು ಖರ್ಚಾದರೂ ಪರವಾಗಿಲ್ಲ ಎಂದು ಕಾಲ್ಶೀಟ್ ಪಡೆಯೋಕೆ ನಿರ್ಮಾಪಕರು ಮುಗಿಬೀಳುತ್ತಿದ್ದಾರೆ. ಈಗ ‘ಪುಷ್ಪ’ (Pushpa Movie) ಸಿನಿಮಾದಿಂದ ರಶ್ಮಿಕಾ ಮಂದಣ್ಣ ದೊಡ್ಡ ಗೆಲುವು ಪಡೆದುಕೊಂಡಿದ್ದಾರೆ. ಅದರ ಜೊತೆಗೆ ಅವರು ಸಂಭಾವನೆ (Rashmika Mandanna Remuneration) ಹೆಚ್ಚಿಸಿಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅದೇ ರೀತಿ ನಟ ಅಲ್ಲು ಅರ್ಜುನ್ (Allu Arjun) ಅವರ ಸಂಭಾವನೆಯಲ್ಲೂ ಏರಿಕೆ ಆಗಿದೆ ಎನ್ನಲಾಗಿದೆ.
ಈಗಾಗಲೇ ತಿಳಿದಿರುವಂತೆ ‘ಪುಷ್ಪ’ ಚಿತ್ರದ ಎರಡನೇ ಪಾರ್ಟ್ ಸಿದ್ಧವಾಗುತ್ತಿದೆ. ಆ ಸಿನಿಮಾದಲ್ಲೂ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಅಭಿನಯಿಸಲಿದ್ದಾರೆ. ಮೊದಲ ಪಾರ್ಟ್ ಗೆದ್ದ ಬಳಿಕ ಎರಡನೇ ಪಾರ್ಟ್ಗೆ ರಶ್ಮಿಕಾ ಹೆಚ್ಚು ಸಂಬಳ ಕೇಳುತ್ತಿದ್ದಾರಂತೆ. ಮೊದಲ ಪಾರ್ಟ್ಗೆ 2 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದ ಅವರು ಈಗ 3 ಕೋಟಿ ರೂ. ಡಿಮ್ಯಾಂಡ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಂದರೆ, ಅವರು ಶೇ.50ರಷ್ಟು ಸಂಭಾವನೆಯನ್ನು ಹಚ್ಚಿಸಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಈಗ ಗೆಲ್ಲುವ ಕುದುರೆ ಆಗಿದ್ದಾರೆ. ಅವರು ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದೆ. ಹಾಗಾಗಿ ಅವರ ಜೊತೆ ಸಿನಿಮಾ ಮಾಡಲು ನಿರ್ಮಾಪಕರು ಮುಗಿಬೀಳುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಮಿಂಚಿದ ಬಳಿಕ ಅವರಿಗೆ ಬಾಲಿವುಡ್ನಿಂದಲೂ ಬುಲಾವ್ ಬಂದಿದೆ. ಅಮಿತಾಭ್ ಬಚ್ಚನ್ ಜೊತೆ ‘ಗುಡ್ ಬೈ’ ಹಾಗೂ ಸಿದ್ದಾರ್ಥ್ ಮಲ್ಹೋತ್ರ ಜೊತೆ ‘ಮಿಷನ್ ಮಜ್ನು’ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ಆ ಸಿನಿಮಾಗಳು ತೆರೆಕಂಡ ಬಳಿಕ ರಶ್ಮಿಕಾ ಮಂದಣ್ಣ ಅವರ ಖ್ಯಾತಿ ಇನ್ನಷ್ಟು ಹೆಚ್ಚಲಿದೆ.
ತಪ್ಪಾಗಿದೆ ರಶ್ಮಿಕಾ ಮಂದಣ್ಣ ಹೆಸರು:
‘ಪುಷ್ಪ’ ಸಿನಿಮಾ ಪೂರ್ಣಗೊಂಡ ನಂತರದಲ್ಲಿ ಕೊನೆಯಲ್ಲಿ ಎಲ್ಲಾ ಕಲಾವಿದರ ಫೋಟೋವನ್ನು ಹಾಕಿ ಹೆಸರು ತೋರಿಸಲಾಗಿದೆ. ಅಲ್ಲು ಅರ್ಜುನ್, ಫಹಾದ್ ಫಾಸಿಲ್ ಆದ ಬಳಿಕ ರಶ್ಮಿಕಾ ಅವರ ಹೆಸರು ಬಂದಿದೆ. ಎಲ್ಲಾ ಹೆಸರುಗಳು ಇಂಗ್ಲಿಷ್ನಲ್ಲಿವೆ. ರಶ್ಮಿಕಾ ಹೆಸರನ್ನು ತಪ್ಪಾಗಿ ಬರೆಯಲಾಗಿದೆ. ರಶ್ಮಿಕಾ ಮಂದಣ್ಣ ಬದಲು, ರಸ್ಮಿಕಾ ಮಡೋನಾ ಎಂದು ಬರೆಯಲಾಗಿದೆ. ಚಿತ್ರತಂಡ ಮಾಡಿದ ಈ ಅಚಾತುರ್ಯಕ್ಕೆ ಅನೇಕರಿಂದ ವಿರೋಧ ವ್ಯಕ್ತವಾಗಿದೆ.
ಇದನ್ನೂ ಓದಿ:
ರಶ್ಮಿಕಾ ಮಂದಣ್ಣ ನಟನೆಗಿಲ್ಲ ಮಹೇಶ್ ಬಾಬು ಮೆಚ್ಚುಗೆ; ಪ್ರಿನ್ಸ್ಗೆ ಧನ್ಯವಾದ ಹೇಳಿದ ಅಭಿಮಾನಿಗಳು
ವಿಜಯ್ ದೇವರಕೊಂಡ ಜತೆ ಗೋವಾದಲ್ಲಿ ಹೊಸ ವರ್ಷ ಆಚರಿಸಿದ ರಶ್ಮಿಕಾ? ಇಲ್ಲಿದೆ ಫೋಟೋ ಸಾಕ್ಷಿ