ದಕ್ಷಿಣದ ಈ ಟಾಪ್ ಹೀರೋಯಿನ್​ಗಳು ಪಡೆದ ಶಿಕ್ಷಣದ ಬಗ್ಗೆ ಇಲ್ಲಿದೆ ಮಾಹಿತಿ..

| Updated By: ರಾಜೇಶ್ ದುಗ್ಗುಮನೆ

Updated on: Aug 25, 2023 | 8:19 AM

ಸೆಲೆಬ್ರಿಟಿಗಳ ಬಗ್ಗೆ, ಅವರ ಹಿನ್ನೆಲೆ, ಅವರು ಪಡೆದಿರೋ ಶಿಕ್ಷಣದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಅನೇಕರಿಗೆ ಇರುತ್ತದೆ. ರಶ್ಮಿಕಾ ಮಂದಣ್ಣ ಅವರಿಂದ ಹಿಡಿದು ತಮನ್ನಾ ಭಾಟಿಯಾವರೆಗೆ ದಕ್ಷಿಣ ಭಾರತದ ಟಾಪ್ ಹೀರೋಯಿನ್​ಗಳು ಯಾವ ಡಿಗ್ರಿ ಪಡೆದಿದ್ದಾರೆ? ಅವರ ಶಿಕ್ಷಣದ ಅರ್ಹತೆ ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ದಕ್ಷಿಣದ ಈ ಟಾಪ್ ಹೀರೋಯಿನ್​ಗಳು ಪಡೆದ ಶಿಕ್ಷಣದ ಬಗ್ಗೆ ಇಲ್ಲಿದೆ ಮಾಹಿತಿ..
ದಕ್ಷಿಣದ ಈ ಟಾಪ್ ಹೀರೋಯಿನ್​ಗಳು ಪಡೆದ ಶಿಕ್ಷಣದ ಬಗ್ಗೆ ಇಲ್ಲಿದೆ ಮಾಹಿತಿ..
Follow us on

ಸೆಲೆಬ್ರಿಟಿಗಳ ಬಗ್ಗೆ, ಅವರ ಹಿನ್ನೆಲೆ, ಅವರು ಪಡೆದಿರೋ ಶಿಕ್ಷಣದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಅನೇಕರಿಗೆ ಇರುತ್ತದೆ. ಅದರಲ್ಲೂ ಅವರ ಫ್ಯಾನ್ಸ್​ಗೆ ಈ ವಿಚಾರದ ಬಗ್ಗೆ ಮಾಹಿತಿ ಸಿಕ್ಕರಂತೂ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿಬಿಡುತ್ತಾರೆ. ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿರುವ ಬಹುತೇಕರು ತಮ್ಮ ಓದಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ (Rashmika Mandanna) ಅವರಿಂದ ಹಿಡಿದು ತಮನ್ನಾ ಭಾಟಿಯಾವರೆಗೆ ದಕ್ಷಿಣ ಭಾರತದ ಟಾಪ್ ಹೀರೋಯಿನ್​ಗಳು ಯಾವ ಡಿಗ್ರಿ ಪಡೆದಿದ್ದಾರೆ? ಅವರ ಶಿಕ್ಷಣದ ಅರ್ಹತೆ ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಸಾಯಿ ಪಲ್ಲವಿ

ಅದ್ಭುತ ನಟನೆ, ಡ್ಯಾನ್ಸ್ ಮೂಲಕ ಗಮನ ಸೆಳೆದವರು ನಟಿ ಸಾಯಿ ಪಲ್ಲವಿ. ಅವರಿಗೆ ದಕ್ಷಿಣ ಭಾರತದಲ್ಲಿ ಸಖತ್ ಬೇಡಿಕೆ ಇದೆ. ‘ಪ್ರೇಮಂ’, ‘ಫಿದಾ’ ಮೊದಲಾದ ಸಿನಿಮಾಗಳ ಮೂಲಕ ಅವರು ಗಮನ ಸೆಳೆದಿದ್ದಾರೆ. ಸಾಯಿ ಪಲ್ಲವಿ ಎಂಎಂಬಿಎಸ್ ಡಿಗ್ರಿ ಪಡೆದಿದ್ದಾರೆ. ಕೊಯಿಮತ್ತೂರಿನಲ್ಲಿ ಅವರು ವೈದ್ಯಕೀಯ ಪದವಿ ಮುಗಿಸಿದ್ದಾರೆ. ಈಗ ನಟಿಯಾಗಿ ಮಿಂಚುತ್ತಿದ್ದಾರೆ.

ನಯನತಾರಾ

ನಯನತಾರಾಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ ಮೂಲಕ ಮಿಂಚಲು ಅವರು ರೆಡಿ ಆಗಿದ್ದಾರೆ. ನಯನತಾರಾ ಕಾಲೇಜ್​ನಲ್ಲಿ ಲಿಟರೇಚರ್ ಓದಿದ್ದಾರೆ. ಅವರು ಡಿಗ್ರಿವರೆಗೆ ಶಿಕ್ಷಣ ಪಡೆದಿದ್ದಾರೆ. ಸದ್ಯ ಕುಟುಂಬದ ಕಡೆಗೂ ಹೆಚ್ಚು ಗಮನ ಹರಿಸುತ್ತಿದ್ದಾರೆ. ನಯನತಾರಾಗೆ ಅವಳಿ ಮಕ್ಕಳಿದ್ದಾರೆ.

ಕಾಜಲ್ ಅಗರ್​ವಾಲ್

ನಟಿ ಕಾಜಲ್ ಅಗರ್​ವಾಲ್​ ಅವರು ಈಗ ಒಂದು ಮಗುವಿನ ತಾಯಿ. ಕುಟುಂಬದ ಆರೈಕೆಯ ಜೊತೆ ಸಿನಿಮಾಗಳಲ್ಲೂ ಅವರು ತೊಡಗಿಕೊಂಡಿದ್ದಾರೆ. ಕಾಜಲ್ ಅವರು ಮಾಸ್ ಮೀಡಿಯಾದಲ್ಲಿ ಡಿಗ್ರಿ ಪಡೆದಿದ್ದಾರೆ. ಅಡ್ವಟೈಸಿಂಗ್ ಹಾಗೂ ಮಾರ್ಕೆಂಟಿಂಗ್​ನಲ್ಲಿ ಸ್ಪೆಷಲೈಸೇಷನ್ ಮಾಡಿದ್ದಾರೆ.

ಸಮಂತಾ

ನಟಿ ಸಮಂತಾ ಅವರು ಸದ್ಯ ಅಮೆರಿಕದಲ್ಲಿದ್ದಾರೆ. ‘ಖುಷಿ’ ಸಿನಿಮಾ ರಿಲೀಸ್​ಗಾಗಿ ಅವರು ಕಾದಿದ್ದಾರೆ. ಅವರು ಬಿಕಾಂ ಪದವಿ ಪಡೆದುಕೊಂಡಿದ್ದಾರೆ. ಸಮಂತಾ ಓದಿದ್ದು ಚೆನ್ನೈನಲ್ಲಿ. ಸ್ಟೆಲ್ಲಾ ಮೇರಿಸ್ ಕಾಲೇಜಿನಲ್ಲಿ ಸಮಂತಾ ಶಿಕ್ಷಣ ಪಡೆದರು. ಸದ್ಯ ಅವರು ನಟನೆಯಿಂದ ಒಂದು ವರ್ಷ ಬ್ರೇಕ್​ನಲ್ಲಿದ್ದಾರೆ.

ತ್ರಿಷಾ

ತ್ರಿಷಾಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ‘96’ ಚಿತ್ರದ ಮೂಲಕ ಎಲ್ಲರ ಗಮನ ಸೆಳೆದ ಅವರು ಹಲವು ಆಫರ್​ಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ‘ಪೊನ್ನಿಯಿನ್ ಸೆಲ್ವನ್ 1-2’ ಚಿತ್ರದ ಮೂಲಕ ಜನಪ್ರಿಯತೆ ಪಡೆದರು. ‘ಲಿಯೋ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುವ ಈ ನಟಿ ಬಿಬಿಎ ಪದವಿ ಪಡೆದಿದ್ದಾರೆ.

ರಶ್ಮಿಕಾ ಮಂದಣ್ಣ

ಕನ್ನಡದ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದವರು ರಶ್ಮಿಕಾ ಮಂದಣ್ಣ. ರಶ್ಮಿಕಾ ಓದಿದ್ದು ಬೆಂಗಳೂರಿನಲ್ಲಿ. ಅವರು ಡಿಗ್ರಿ ಓದಿದ್ದಾರೆ. ‘ಪುಷ್ಪ 2’, ‘ಅನಿಮಲ್’ ಮೊದಲಾದ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅವರಿಗೆ ಬೇಡಿಕೆ ಹೆಚ್ಚುತ್ತಲೇ ಇದೆ.

ಅನುಷ್ಕಾ ಶೆಟ್ಟಿ

ನಟಿ ಅನುಷ್ಕಾ ಶೆಟ್ಟಿ ಅವರು ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. ಅವರ ನಟನೆಯ ‘ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ’ ರಿಲೀಸ್​ಗೆ ರೆಡಿ ಇದೆ. ಕಂಪ್ಯೂಟರ್ ಅಪ್ಲಿಕೇಷನ್​ನಲ್ಲಿ ಈ ನಟಿ ಪದವಿ ಹೊಂದಿದ್ದಾರೆ. ಅವರು ಶಿಕ್ಷಣ ಪಡೆದಿದ್ದು ಬೆಂಗಳೂರಿನಲ್ಲಿ ಅನ್ನೋದು ವಿಶೇಷ.

ಇದನ್ನೂ ಓದಿ: ಕಂಗನಾ ರಣಾವತ್​ಗೆ ಒಲಿಯದ ರಾಷ್ಟ್ರ ಪ್ರಶಸ್ತಿ; ನಟಿಯ ಪ್ರತಿಕ್ರಿಯೆ ಏನು?

ಶ್ರುತಿ ಹಾಸನ್

ಚೆನ್ನೈನ ಸೇಂಟ್ ಆ್ಯಂಡ್ರೀವ್ ಕಾಲೇಜಿನಲ್ಲಿ ಶ್ರುತಿ ಹಾಸನ್ ಶಿಕ್ಷಣ ಪಡೆದಿದ್ದಾರೆ. ಅವರು ಮನಶಾಸ್ತ್ರ ಅಧ್ಯಯನ ಮಾಡಿದ್ದಾರೆ. ಶ್ರುತಿ ಹಾಸನ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ‘ಸಲಾರ್’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ.

ತಮನ್ನಾ ಭಾಟಿಯಾ

‘ಜೈಲರ್’ ಸಿನಿಮಾ ಮೂಲಕ ತಮನ್ನಾ ದೊಡ್ಡ ಗೆಲುವು ಕಂಡಿದ್ದಾರೆ. ತಮನ್ನಾ ಪದವಿವರೆಗೆ ಓದಿದ್ದಾರೆ. ಅವರು ಶಿಕ್ಷಣ ಪಡೆದಿದ್ದು ಮುಂಬೈನಲ್ಲಿ. ವಿಜಯ್ ವರ್ಮಾ ಜೊತೆಗಿನ ಸುತ್ತಾಟದ ಕಾರಣದಿಂದಲೂ ಅವರು ಸುದ್ದಿ ಆಗುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:12 am, Fri, 25 August 23