ವಿವಾಹದ ಬೆನ್ನಲ್ಲೇ ರಶ್ಮಿಕಾ ಮಂದಣ್ಣಗೆ ಸಿಕ್ತು ಸಿಹಿ ಸುದ್ದಿ; ಸಿಕ್ತು ಅವಾರ್ಡ್

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆಯಾದ ಕೆಲವೇ ದಿನಗಳಲ್ಲಿ ರಶ್ಮಿಕಾಗೆ 'ಗದ್ದರ್ ಫಿಲ್ಮ್ ಅವಾರ್ಡ್ 2025' ಪ್ರಶಸ್ತಿ ಲಭಿಸಿದೆ. 'ಗರ್ಲ್​​ಫ್ರೆಂಡ್' ಚಿತ್ರದ ಅತ್ಯುತ್ತಮ ನಟನೆಗಾಗಿ ತೆಲಂಗಾಣ ಸರ್ಕಾರ ನೀಡಿದ ಈ ರಾಜ್ಯ ಪ್ರಶಸ್ತಿಯು ಅಭಿಮಾನಿಗಳಲ್ಲಿ ಸಂತಸ ತಂದಿದೆ. ನವೆಂಬರ್ 7ರಂದು ಬಿಡುಗಡೆಯಾದ 'ಗರ್ಲ್​​ಫ್ರೆಂಡ್' ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ 29 ಕೋಟಿ ಗಳಿಸಿತ್ತು.

ವಿವಾಹದ ಬೆನ್ನಲ್ಲೇ ರಶ್ಮಿಕಾ ಮಂದಣ್ಣಗೆ ಸಿಕ್ತು ಸಿಹಿ ಸುದ್ದಿ; ಸಿಕ್ತು ಅವಾರ್ಡ್
ರಶ್ಮಿಕಾ
Edited By:

Updated on: Mar 07, 2026 | 4:40 PM

ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ ಇತ್ತೀಚೆಗೆ ಮದುವೆ ಆದರು. ಈ ವಿವಾಹದ ಬಳಿಕ ಅವರು ವಿವಿಧ ರೀತಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈಗ ಮದುವೆ ಆದ ಬಳಿಕ ರಶ್ಮಿಕಾ ಮಂದಣ್ಣಗೆ ಗುಡ್ ನ್ಯೂಸ್ ಸಿಕ್ಕಿದೆ. ತೆಲಂಗಾಣ ಸರ್ಕಾರ ‘2025ರ ಗದ್ದರ್ ಫಿಲ್ಮ್ ಅವಾರ್ಡ್’ ಸಿಕ್ಕಿದೆ. ‘ಗರ್ಲ್​​ಫ್ರೆಂಡ್’ ಚಿತ್ರದ ನಟನೆಗೆ ಈ ಅವಾರ್ಡ್ ಸಿಕ್ಕಿದೆ. ಇದು ಅಭಿಮಾನಿಗಳ ಖುಷಿ ಹೆಚ್ಚಿಸಿದೆ.

ರಶ್ಮಿಕಾ ಮಂದಣ್ಣ ಅವರು ಫೆಬ್ರವರಿ 26ರಂದು ಮದುವೆ ಆದರು. ಉದಯಪುರದಲ್ಲಿ ಈ ವಿವಾಹ ನಡೆಯಿತು. ಫೆಬ್ರವರಿ 4ರಂದು ಇವರ ಆರತಕ್ಷತೆ ನಡೆದಿದೆ. ವಿವಾಹ ಆದ ಒಂದೇ ವಾರಕ್ಕೆ ರಶ್ಮಿಕಾಗೆ ಗುಡ್​ ನ್ಯೂಸ್ ಸಿಕ್ಕಿದೆ. ಅವರಿಗೆ ತೆಲಂಗಾಣ ರಾಜ್ಯ ಪ್ರಶಸ್ತಿ ಸಿಕ್ಕಿದ್ದು ಅಭಿಮಾನಿಗಳ ಖುಷಿ ಹೆಚ್ಚಿಸಿದೆ. ‘ಗರ್ಲ್​​ಫ್ರೆಂಡ್’ ಚಿತ್ರವನ್ನು ರಾಹುಲ್ ರವೀಂದ್ರನ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ನವೆಂಬರ್ 7ರಂದು ರಿಲೀಸ್ ಆಯಿತು. ಈ ಚಿತ್ರ ಗಮನ ಸೆಳೆಯಿತು. ಈ ಸಿನಿಮಾ ಬಾಕ್ಸ್ ಆಫೀಸ್​​​ನಲ್ಲಿ 29 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

‘ಥಂಡೇಲ್’ ಸಿನಿಮಾದ ನಟನೆಗೆ ನಾಗ ಚೈತನ್ಯ ಅವರಿಗೆ ಅತ್ಯುತ್ತಮ ಅವಾರ್ಡ್ ಸಿಕ್ಕಿದೆ. ‘ರಾಜು ವೆಡ್ಸ್ ರಾಂಬಾಯಿ’ ಸಿನಿಮಾಗೆ ಅತ್ಯುತ್ತಮ ಸಿನಿಮಾ ಅವಾರ್ಡ್ ಸಿಕ್ಕಿದೆ. ಶಿವಾಜಿ ಅವರು ಅತ್ಯುತ್ತಮ ಪೋಷಕ ನಟನ ಪಾತ್ರ ಮಾಡಿದ್ದಾರೆ. ಭೂಮಿಕಾ ಅವರು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದರು. ಎನ್​ಟಿಆರ್ ನ್ಯಾಷನಲ್ ಫಿಲ್ಮ್ ಅವಾರ್ಡ್ ಪ್ರಶಸ್ತಿ ಚಿರಂಜೀವಿಗೆ ಸಿಕ್ಕಿದೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಸಂಗೀತ್ ಕಾರ್ಯಕ್ರಮದ ಸುಂದರ ಫೋಟೋಸ್

ರಶ್ಮಿಕಾ ಮಂದಣ್ಣ ಅವರು ವಿವಿಧ ರೀತಿಯ ಸಿನಿಮಾಗನ್ನು ಒಪ್ಪಿ ನಟಿಸುತ್ತಿದ್ದಾರೆ. ಎಲ್ಲಾ ಸಿನಿಮಾಗಳು ಗಮನ ಸೆಳೆಯುವ ರೀತಿಯಲ್ಲಿ ಇದೆ. ಅವರ ನಟನೆಯ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿವೆ. ಸ್ಟಾರ್ ಕಲಾವಿದರ ಜೊತೆ ರಶ್ಮಿಕಾ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈಗ ಅವರಿಗೆ ಸ್ಟೇಟ್ ಅವಾರ್ಡ್ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:08 pm, Sat, 7 March 26

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us