‘ಜೈ ಹನುಮಾನ್’ ಸಿನಿಮಾ ಶೂಟ್ ಆರಂಭಕ್ಕೂ ಮೊದಲೇ ಮಹತ್ವದ ಬದಲಾವಣೆ

ಕಾಂತಾರ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ 'ಜೈ ಹನುಮಾನ್' ಸಿನಿಮಾದಲ್ಲಿ ಹನುಮಾನ್ ಪಾತ್ರ ಮಾಡುತ್ತಿದ್ದಾರೆ. ಫೆಬ್ರವರಿಯಲ್ಲಿ ಮುಹೂರ್ತ ಕಂಡ ಈ ಚಿತ್ರದಲ್ಲಿ ಆಸ್ಕರ್ ವಿಜೇತ ಎಂಎಂ ಕೀರವಾಣಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ನಿಮಿಷ್ ರವಿ ಬದಲಿಗೆ ಎಸ್ ತಿರುನವುಕ್ಕರಸು ಛಾಯಾಗ್ರಾಹಕರಾಗಿ ಸೇರ್ಪಡೆಯಾಗಿದ್ದಾರೆ.

‘ಜೈ ಹನುಮಾನ್’ ಸಿನಿಮಾ ಶೂಟ್ ಆರಂಭಕ್ಕೂ ಮೊದಲೇ ಮಹತ್ವದ ಬದಲಾವಣೆ
ರಿಷಬ್

Updated on: Apr 06, 2026 | 1:11 PM

ರಿಷಬ್ ಶೆಟ್ಟಿ ಅವರು ‘ಕಾಂತಾರ’ ಸಿನಿಮಾ ಬಳಿಕ, ‘ಕಾಂತಾರ: ಚಾಪ್ಟರ್ 1’ ಮಾಡಿದರು. ಈ ಎರಡೂ ಸಿನಿಮಾಗಳು ಅವರನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ಕರೆದುಕೊಂಡು ಹೋಗಿದೆ. ಈ ಸಿನಿಮಾಗಳಲ್ಲಿ ನಟಿಸೋದು ಮಾತ್ರವಲ್ಲ, ನಿರ್ದೇಶನ ಕೂಡ ಅವರದ್ದೇ. ಸದ್ಯ ರಿಷಬ್ ಅವರು ನಿರ್ದೇಶನದಿಂದ ಬ್ರೇಕ್ ಪಡೆದಿದ್ದು, ‘ಜೈ ಹನುಮಾನ್’ (Jai Hanuman) ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರ ಸೆಟ್ಟೇರಿ ಹಲವು ದಿನ ಕಳೆದ ಬಳಿಕ ಸಿನಿಮಾದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.

‘ಜೈ ಹನುಮಾನ್’ ಚಿತ್ರಕ್ಕೆ ಫೆಬ್ರವರಿಯಲ್ಲಿ ಮುಹೂರ್ತ ನೆರವೇರಿದೆ. ಈ ಚಿತ್ರದಲ್ಲಿ ರಿಷಬ್ ಹನುಮಾನ್ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ನಿಮಿಷ್ ರವಿ ಛಾಯಾಗ್ರಾಹಣ ಮಾಡಬೇಕಿತ್ತು. ಅವರು ‘ಲಕ್ಕಿ ಭಾಸ್ಕರ್’ ರೀತಿಯ ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿದ್ದರು. ಈಗ ಇವರನ್ನು ‘ಜೈ ಹನುಮಾನ್’ ಸಿನಿಮಾದಿಂದ ಹೊರಗಿಡಲಾಗಿದ್ದು, ಎಸ್​ ತಿರುನವುಕ್ಕರಸು ಅವರ ಎಂಟ್ರಿ ಆಗಿದೆ.

‘ಜೈ ಹನುಮಾನ್’ ಸಿನಿಮಾದಲ್ಲಿ ಪಾತ್ರವರ್ಗದ ಜೊತೆಗೆ ತಾಂತ್ರಿಕ ವರ್ಗಕ್ಕೂ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಆಸ್ಕರ್ ವಿಜೇತ ಎಂಎಂ ಕೀರವಾಣಿ ಅವರು ಸಿನಿಮಾಗೆ ಸಂಗೀತ ಮಾಡುತ್ತಿದ್ದಾರೆ. ನಿಮಿಷ್ ಅವರನ್ನು ಹೊರಕ್ಕೆ ಇಡಲು ಕಾರಣ ಏನು ಎಂಬ ವಿಷಯ ಇನ್ನೂ ಬಹಿರಂಗವಾಗಿಲ್ಲ. ಮೈತ್ರಿ ಮೂವೀ ಮೇಕರ್ಸ್ ‘ಜೈ ಹನುಮಾನ್’ ಸಿನಿಮಾನ ನಿರ್ಮಾಣ ಮಾಡುತ್ತಿದೆ. ‘ಹನುಮಾನ್’ ಸಿನಿಮಾ ದೊಡ್ಡ ಯಶಸ್ಸು ಕಂಡ ಬಳಿಕ, ಮೈತ್ರಿ ಈ ಚಿತ್ರಕ್ಕೆ ಕೈ ಹಾಕಿದೆ.

ಇದನ್ನೂ ಓದಿ: ರಿಷಬ್ ಶೆಟ್ಟಿ, ಪ್ರಗತಿ ಶೆಟ್ಟಿ ದಂಪತಿಯ ಮಗಳು ರಾಧ್ಯಾ ಬರ್ತ್​ಡೇ ವಿಡಿಯೋ ನೋಡಿ..

‘ಹನುಮಾನ್’ ಚಿತ್ರದಲ್ಲಿ ಮಾಡರ್ನ್ ಕಥೆ ಹಾಗೂ ದೈವಿಕ ಶಕ್ತಿ ವಿಷಯವನ್ನು ಒಂದುಗೂಡಿಸಲಾಗಿತ್ತು. ಈಗ ‘ಜೈ ಹನುಮಾನ್’ ಚಿತ್ರವನ್ನು ಯಾವ ರೀತಿಯಲ್ಲಿ ಮಾಡುತ್ತಾರೆ ಎಂಬ ಕುತೂಹಲ ಮೂಡಿದೆ. ರಿಷಬ್ ಶೆಟ್ಟಿ ಅವರು ಭಕ್ತಿ ಪ್ರಧಾನ ಸಿನಿಮಾಗಳನ್ನು ಮಾಡುವ ಮೂಲಕ ಭೇಷ್ ಎನಿಸಿಕೊಳ್ಳುತ್ತಿದ್ದಾರೆ. ಅವರ ಬತ್ತಳಿಕೆಗೆ ಹೊಸ ಸಿನಿಮಾ ಸೇರ್ಪಡೆ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us