ನಟ ರಾಮ್ ಚರಣ್ (Ram Charan) ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ದಿನದಿಂದ ದಿನಕ್ಕೆ ಅವರ ಚಾರ್ಮ್ ಹೆಚ್ಚುತ್ತಿದೆ. ಒಂದಕ್ಕಿಂತ ಮತ್ತೊಂದು ಸೂಪರ್ ಹಿಟ್ ಸಿನಿಮಾಗಳನ್ನು ಅವರು ನೀಡುತ್ತಿದ್ದಾರೆ. 2022ರಲ್ಲಿ ತೆರೆಕಂಡ ಎಸ್ಎಸ್ ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ (RRR Movie) ಸಿನಿಮಾದಿಂದ ರಾಮ್ ಚರಣ್ ಅವರ ವೃತ್ತಿಜೀವನಕ್ಕೆ ಹೊಸ ಮೈಲೇಜ್ ಸಿಕ್ಕಿತು. ‘ಗೋಲ್ಡನ್ ಗ್ಲೋಬ್’ ಪ್ರಶಸ್ತಿ ಪಡೆದಿದ್ದೂ ಅಲ್ಲದೇ ಆಸ್ಕರ್ಗೆ ನಾಮಿನೇಟ್ ಆಗಿರುವ ಈ ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡಿದೆ. ಇಷ್ಟೆಲ್ಲ ಸಾಧನೆಗಳನ್ನು ಮಾಡಿರುವ ರಾಮ್ ಚರಣ್ ಅವರು ಈಗ ಮುಂದಿನ ಸಿನಿಮಾಗಳತ್ತ ಗಮನ ಹರಿಸುತ್ತಿದ್ದಾರೆ. ಒಂದಷ್ಟು ಇಂಟರೆಸ್ಟಿಂಗ್ ಪ್ರಾಜೆಕ್ಟ್ಗಳಿಗೆ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅವರ ಮುಂಬರುವ ಸಿನಿಮಾಗಳ (Ram Charan Upcoming Movies) ಬಗ್ಗೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. ಆ ಕುರಿತು ಇಲ್ಲಿದೆ ಮಾಹಿತಿ..
ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದ ಸಿನಿಮಾದಲ್ಲಿ ರಾಮ್ ಚರಣ್ ನಟಿಸುತ್ತಿದ್ದಾರೆ. ಇಬ್ಬರ ಕಾಂಬಿನೇಶನ್ ಮೇಲೆ ಅಭಿಮಾನಿಗಳು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಿಗ್ ಬಜೆಟ್ನಲ್ಲಿ ಈ ಸಿನಿಮಾ ಸಿದ್ಧವಾಗಲಿದೆ. ಆ್ಯಕ್ಷನ್ ಪ್ರಿಯರಿಗೆ ಈ ಚಿತ್ರ ಸಖತ್ ಇಷ್ಟವಾಗಲಿದೆ. ಬಾಲಿವುಡ್ನ ಬಹುಬೇಡಿಕೆಯ ನಟಿ ಕಿಯಾರಾ ಅಡ್ವಾಣಿ ಅವರು ಈ ಸಿನಿಮಾದಲ್ಲಿ ರಾಮ್ ಚರಣ್ಗೆ ಜೋಡಿಯಾಗಿ ನಟಿಸುತ್ತಿದ್ದಾರೆ.
ಇದನ್ನೂ ಓದಿ: ಮುಂದಿನ ಸಂಕ್ರಾಂತಿಗೆ ಬಾಕ್ಸ್ ಆಫೀಸ್ನಲ್ಲಿ ಅಲ್ಲು ಅರ್ಜುನ್-ರಾಮ್ ಚರಣ್ ಮಧ್ಯೆ ಫೈಟ್?
ಶಂಕರ್ ಮತ್ತು ರಾಮ್ ಚರಣ್ ಕಾಂಬಿನೇಷನ್ನ ಸಿನಿಮಾಗೆ ಶೀರ್ಷಿಕೆ ಏನೆಂಬುದು ಇನ್ನೂ ಬಹಿರಂಗ ಆಗಿಲ್ಲ. 2023ರಲ್ಲೇ ಈ ಚಿತ್ರ ರಿಲೀಸ್ ಆಗುವ ಸಾಧ್ಯತೆ ದಟ್ಟವಾಗಿದೆ. ಖ್ಯಾತ ನಿರ್ಮಾಪಕ ದಿಲ್ ರಾಜು ಅವರು ‘ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್’ ಬ್ಯಾನರ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಹಲವು ಕಾರಣಗಳಿಂದಾಗಿ ಈ ಸಿನಿಮಾ ಮೇಲೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ: ಆಫ್ರಿಕಾದಲ್ಲಿ ದೇಸಿ ಸ್ಟೈಲ್ನಲ್ಲಿ ವರ್ಕೌಟ್ ಮಾಡಿದ ರಾಮ್ ಚರಣ್; ಇಲ್ಲಿದೆ ವಿಡಿಯೋ
ಶಂಕರ್ ಜೊತೆಗಿನ ಸಿನಿಮಾದ ಕೆಲಸಗಳ ಪೂರ್ಣಗೊಂಡ ಬಳಿಕ ಬುಚ್ಚಿ ಬಾಬು ಸನಾ ನಿರ್ದೇಶನದ ಹೊಸ ಚಿತ್ರದಲ್ಲಿ ರಾಮ್ ಚರಣ್ ನಟಿಸಲಿದ್ದಾರೆ. ಆ ಚಿತ್ರಕ್ಕೆ ವೆಂಕಟ ಸತೀಶ್ ಕಿಲಾರು ಬಂಡವಾಳ ಹೂಡಲಿದ್ದಾರೆ. ಜೆರ್ಸಿ ಸಿನಿಮಾ ಖ್ಯಾತಿಯ ಗೌತಮ್ ತಿನ್ನನೂರಿ ಸಿನಿಮಾವನ್ನು ಕೂಡ ರಾಮ್ ಚರಣ್ ಅವರು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಹಳೆಯ ಫೋಟೋ ಹಂಚಿಕೊಂಡು ಪತ್ನಿಗೆ ವಿಶೇಷ ಮನವಿ ಮಾಡಿದ ರಾಮ್ ಚರಣ್
‘ಆರ್ಆರ್ಆರ್’ ಸೂಪರ್ ಹಿಟ್ ಆಗಿದ್ದರಿಂದ ಮುಂದಿನ ಸಿನಿಮಾಗಳ ಬಗ್ಗೆ ರಾಮ್ ಚರಣ್ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಇಟ್ಟುಕೊಳ್ಳುವುದು ಸಹಜ. ಆ ನಿರೀಕ್ಷೆಗೆ ತಕ್ಕಂತೆಯೇ ಅವರು ಶ್ರಮಿಸಬೇಕಿದೆ. ಹಾಗಾಗಿ ಸಿನಿಮಾಗಳ ಆಯ್ಕೆಯಲ್ಲಿ ರಾಮ್ ಚರಣ್ ಅವರು ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.