ನಟ ಸಾಯಿ ಧರಮ್ ತೇಜ್ ಅಭಿಮಾನಿಗಳು ಈಗ ನಿಟ್ಟುಸಿರು ಬಿಟ್ಟಿದ್ದಾರೆ. ಸೆ.10ರಂದು ಭೀಕರ ಬೈಕ್ ಅಪಘಾತಕ್ಕೆ ಒಳಗಾಗಿದ್ದ ಸಾಯಿ ಧರಮ್ ತೇಜ್ ಅವರು ಮಾರಣಾಂತಿಕವಾಗಿ ಗಾಯಗೊಂಡಿದ್ದರು. ಆದರೆ ಈಗ ಅವರು ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ. ವಿಜಯ ದಶಮಿ ಹಬ್ಬದ ಪ್ರಯುಕ್ತ ಅವರು ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಈ ಬಗ್ಗೆ ಅವರ ಮಾವ, ‘ಮೆಗಾ ಸ್ಟಾರ್’ ಚಿರಂಜೀವಿ ಅವರು ಟ್ವೀಟ್ ಮೂಲಕ ಸಿಹಿ ಸುದ್ದಿ ನೀಡಿದ್ದಾರೆ.
‘ಈ ಬಾರಿ ವಿಜಯ ದಶಮಿಯ ವಿಶೇಷ ಏನೆಂದರೆ, ಸಾಯಿ ಧರಮ್ ತೇಜ್ ಸಂಪೂರ್ಣ ಗುಣಮುಖರಾಗಿ ಮನೆಗೆ ಬರುತ್ತಿದ್ದಾರೆ. ಭೀಕರ ಬೈಕ್ ಅಪಘಾತದಲ್ಲಿ ಅವರು ಬದುಕಿ ಬಂದಿದ್ದಾರೆ. ಇದು ನಮ್ಮೆಲ್ಲರಿಗೂ ಖುಷಿ ನೀಡಿದೆ. ಅವರಿಗೆ ಇದು ಪುನರ್ಜನ್ಮ’ ಎಂದು ಚಿರಂಜೀವಿ ಟ್ವೀಟ್ ಮಾಡಿದ್ದಾರೆ.
ವಿಶೇಷವೆಂದರೆ ಇಂದು (ಅ.15) ಸಾಯಿ ಧರಮ್ ತೇಜ್ ಜನ್ಮದಿನ. ಹಾಗಾಗಿ ಎಲ್ಲರೂ ಅವರಿಗೆ ಶುಭಾಶಯ ಕೋರುತ್ತಿದ್ದಾರೆ. ಚಿರಂಜೀವಿ ಕೂಡ ಬರ್ತ್ಡೇ ವಿಶ್ ಮಾಡಿದ್ದಾರೆ. ಬೈಕ್ ಅಪಘಾತದ ಬಳಿಕ ಒಂದು ತಿಂಗಳಿಗೂ ಹೆಚ್ಚು ದಿನಗಳ ಕಾಲ ಸಾಯಿ ಧರಮ್ ತೇಜ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಹಲವು ದಿನಗಳ ಕಾಲ ಅವರು ಕೋಮಾದಲ್ಲಿದ್ದರು.
ಸಾಯಿ ಧರಮ್ ತೇಜ್ ನಟಿಸಿದ್ದ ‘ರಿಪಬ್ಲಿಕ್’ ಚಿತ್ರ ಅ.1ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಆಗಲೂ ಅವರು ಕೋಮಾದಲ್ಲೇ ಇದ್ದರು. ಅವರ ಅನುಪಸ್ಥಿತಿಯಲ್ಲೇ ಸಿನಿಮಾ ಬಿಡುಗಡೆ ಆಗಿತ್ತು. ಆ ಚಿತ್ರದ ಪ್ರೀ-ರಿಲೀಸ್ ಇವೆಂಟ್ಗೆ ಬಂದಿದ್ದ ಪವನ್ ಕಲ್ಯಾಣ್ ಅವರು ಅಳಿಯನ ಹೆಲ್ತ್ ಬಗ್ಗೆ ಅಪ್ಡೇಟ್ ನೀಡಿದ್ದರು. ಸಾಯಿ ಧರಮ್ ತೇಜ್ ಇನ್ನೂ ಕಣ್ಣು ಬಿಟ್ಟಿಲ್ಲ ಎಂದು ಅವರು ಹೇಳಿದ್ದರಿಂದ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಈಗ ಆ ಆತಂಕ ನಿವಾರಣೆ ಆಗಿದೆ.
Another speciality of this #VijayaDashami is @IamSaiDharamTej is returning home after fully recovering from the accident,having had a miraculous escape,making us all happy & grateful!Nothing short of a Rebirth for him!
Happy Birthday Dear Teju from Atha & PedaMama!Stay Blessed! pic.twitter.com/pvIpsJalh1
— Chiranjeevi Konidela (@KChiruTweets) October 15, 2021
ಅತಿಯಾದ ಸ್ಪೀಡ್ನಲ್ಲಿ ಸ್ಪೋರ್ಟ್ಸ್ ಬೈಕ್ ಓಡಿಸಿದ್ದೇ ಈ ಅಪಘಾತಕ್ಕೆ ಕಾರಣ ಎಂದು ವರದಿ ಆಗಿತ್ತು. ಆದರೆ ಸಾಯಿ ಧರಮ್ ತೇಜ್ ಕುಟುಂಬದವರು ಈ ಮಾತನ್ನು ಒಪ್ಪುತ್ತಿಲ್ಲ.
ಇದನ್ನೂ ಓದಿ:
ಭೀಕರ ಬೈಕ್ ಅಪಘಾತ; ನಟನ 4 ತಪ್ಪುಗಳು ಬಟಾಬಯಲು: ಸಾಯಿ ಧರಮ್ ತೇಜ್ ಹೀಗೆ ಮಾಡಬಾರದಿತ್ತು
ಸಾಯಿ ಧರಮ್ ತೇಜ್ ಬೈಕ್ ಅಪಘಾತ: ಅಪಶಕುನ ನುಡಿದ ಹಿರಿಯ ನಟನ ವಿರುದ್ಧ ಭಾರಿ ಆಕ್ರೋಶ