ಸೆಟ್​​ನಲ್ಲಿ ಕಣ್ಣೀರು ಹಾಕಿದ್ದರಂತೆ ನಟಿ ಸಾಯಿ ಪಲ್ಲವಿ: ಕಾರಣ?

Sai Pallavi movie: ಸಿನಿಮಾಗಳ ಜೊತೆಗೆ ಪರದೆಯಾಚೆಯ ತಮ್ಮ ವ್ಯಕ್ತಿತ್ವದಿಂದಲೂ ಗಮನ ಸೆಳೆಯುತ್ತಲೇ ಬಂದಿದ್ದಾರೆ ನಟಿ ಸಾಯಿ ಪಲ್ಲವಿ. ಯಾವುದೇ ಸಿನಿಮಾನಲ್ಲಿ ನಟಿಸಿದರೂ ಆ ತಂಡದೊಟ್ಟಿಗೆ ಉತ್ತಮ ವೃತ್ತಿಪರ ಬಾಂಧವ್ಯವನ್ನು ಹೊಂದಿಸಿಕೊಳ್ಳುತ್ತಾರೆ. ಅತ್ಯಂತ ವೃತ್ತಿಪರ ನಟಿಯರಲ್ಲಿ ಒಬ್ಬರಾಗಿರುವ ಸಾಯಿ ಪಲ್ಲವಿ, ಒಮ್ಮೆ ಮಾತ್ರ ಸೆಟ್​​ನಲ್ಲಿ ಕಣ್ನೀರು ಹಾಕಿದ್ದರಂತೆ.

ಸೆಟ್​​ನಲ್ಲಿ ಕಣ್ಣೀರು ಹಾಕಿದ್ದರಂತೆ ನಟಿ ಸಾಯಿ ಪಲ್ಲವಿ: ಕಾರಣ?
Sai Pallavi

Updated on: Apr 23, 2026 | 12:20 PM

ಸಾಯಿ ಪಲ್ಲವಿ (Sai Pallavi) ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟಿ. ಅವರನ್ನು ಲೇಡಿ ಪವರ್ ಸ್ಟಾರ್ ಎಂದು ಸಹ ಕರೆಯಲಾಗುತ್ತದೆ. ಇತರೆ ಸಮಕಾಲೀನ ನಟಿಯರಂತಲ್ಲದೆ, ಪಾತ್ರಕ್ಕೆ ಪ್ರಾಧಾನ್ಯತೆ ಇದ್ದರಷ್ಟೆ ಸಿನಿಮಾಗಳನ್ನು ಒಪ್ಪಿಕೊಳ್ಳುವ ಮತ್ತು ಸಿನಿಮಾನಲ್ಲಿಯೂ ಸಹ ಗ್ಲಾಮರ್ ರಹಿತವಾದ ಉಡುಪುಗಳನ್ನು ಮಾತ್ರವೇ ಧರಿಸುವ, ಐಟಂ ಹಾಡುಗಳಿಂದ ಬಹಳ ದೂರವೇ ಉಳಿದಿರುವ ನಟಿ ಸಾಯಿ ಪಲ್ಲವಿ, ಸಿನಿಮಾಗಳ ಜೊತೆಗೆ ಪರದೆಯಾಚೆಯ ತಮ್ಮ ವ್ಯಕ್ತಿತ್ವದಿಂದಲೂ ಗಮನ ಸೆಳೆಯುತ್ತಲೇ ಬಂದಿದ್ದಾರೆ. ಅತ್ಯಂತ ವೃತ್ತಿಪರ ನಟಿಯರಲ್ಲಿ ಒಬ್ಬರಾಗಿರುವ ಸಾಯಿ ಪಲ್ಲವಿ, ಒಮ್ಮೆ ಮಾತ್ರ ಸೆಟ್​​ನಲ್ಲಿ ಕಣ್ನೀರು ಹಾಕಿದ್ದರಂತೆ.

ಸಾಯಿ ಪಲ್ಲವಿ ಸಾಮಾನ್ಯವಾಗಿ ಒಂದು ಬಾರಿಗೆ ಒಂದು ಸಿನಿಮಾನಲ್ಲಿ ಮಾತ್ರ ನಟಿಸುತ್ತಾರಂತೆ. ಆದರೆ ಕೋವಿಡ್​ ಇಂದಾಗಿ ಈ ನಿಯಮ ಮುರಿಯಿತಂತೆ. ಕೋವಿಡ್ ಬಳಿಕ ಅನಿವಾರ್ಯವಾಗಿ ಒಟ್ಟಿಗೆ ಮೂರು ಸಿನಿಮಾನಲ್ಲಿ ಸಾಯಿ ಪಲ್ಲವಿ ನಟಿಸಬೇಕಾಯ್ತಂತೆ. ನಿರ್ಮಾಪಕರಿಗೆ ಸಮಸ್ಯೆ ಆಗುತ್ತದೆ ಎಂಬ ಕಾರಣಕ್ಕೆ ಸಾಯಿ ಪಲ್ಲವಿ ನಿಯಮ ಮುರಿದು ನಟಿಸಲು ಒಪ್ಪಿಕೊಂಡರಂತೆ. ಆದರೆ ಅದರಿಂದ ಅವರು ಸಾಕಷ್ಟು ಸಮಸ್ಯೆಗೆ ತುತ್ತಾದರಂತೆ.

ಒಂದೂ ದಿನವೂ ಬ್ರೇಕ್ ಇಲ್ಲದೆ ಸತತವಾಗಿ ಸಿನಿಮಾಗಳಲ್ಲಿ ನಟಿಸುತ್ತಲೇ ಇದ್ದರಂತೆ. ಅದರಲ್ಲೂ ‘ಶಾಮ ಸಿಂಘ ರಾಯ್’ ಸಿನಿಮಾನಲ್ಲಿ ನಟಿಸುವಾಗಂತೂ ಬಹಳ ಕಷ್ಟವಾಯ್ತಂತೆ. ಅದು ರಾತ್ರಿ ಶೂಟಿಂಗ್ ಮಾಡಬೇಕಿತ್ತಂತೆ. ಆದರೆ ಸಾಯಿ ಪಲ್ಲವಿಗೆ ರಾತ್ರಿ ಶೂಟಿಂಗ್ ಆಗುತ್ತಿರಲಿಲ್ಲವಂತೆ, ‘ನನಗೆ ಬೆಳಿಗಿನ ಹೊತ್ತು ನಿದ್ದೆ ಬರುವುದಿಲ್ಲ. ಆದರೆ ರಾತ್ರಿ ಶೂಟಿಂಗ್ ಇದ್ದ ಕಾರಣ, ರಾತ್ರಿ ನಿದ್ದೆಯೂ ಆಗುತ್ತಿರಲಿಲ್ಲ. ಸತತವಾಗಿ ಒಂದು ವಾರದ ವರೆಗೆ ನಿದ್ದೆ ಇಲ್ಲದೆ ಶೂಟಿಂಗ್ ಮಾಡಿದೆ. ಒಂದು ರಾತ್ರಿ ನನ್ನ ಕೈಯಲ್ಲಿ ಸಾಧ್ಯವಾಗಲಿಲ್ಲ ಅಳು ಒತ್ತರಿಸಿ ಬಂದು, ಕಣ್ನೀರು ಹಾಕಿಬಿಟ್ಟೆ’ ಎಂದಿದ್ದರು ಸಾಯಿ ಪಲ್ಲವಿ.

ಇದನ್ನೂ ಓದಿ:ಸಾಯಿ ಪಲ್ಲವಿಗೆ ಕೊಟ್ಟ ಮಾತನ್ನು ಉಳಿಸಿಕೊಂಡ ಮಣಿರತ್ನಂ

‘ನನಗೆ ಸಿನಿಮಾ ಎಂದರೆ ಬಹಳ ಇಷ್ಟ, ನಟಿಸುವುದು, ಡ್ಯಾನ್ಸ್ ಮಾಡುವುದೆಂದರೆ ಪಂಚ ಪ್ರಾಣ. ಆದರೆ ಅದರಿಂದಲೇ ನನಗೆ ಸುಸ್ತಾಗಿ ಹೋಗಿತ್ತು, ಒಂದು ದಿನವಾದರೂ ಇದರಿಂದ ಬಿಡುಗಡೆ ಬೇಕು ಅನಿಸಿಬಿಟ್ಟಿತ್ತು ಅಷ್ಟು ಸುಸ್ತಾಗಿ ಹೋಗಿದ್ದೆ. ನಾನು ಅಳುವುದು ಕಂಡು ನನ್ನ ಸಹೋದರಿ ಹೋಗಿ ನಿರ್ಮಾಪಕರ ಬಳಿ ಮನವಿ ಮಾಡಿಕೊಂಡರಂತೆ. ನಿರ್ಮಾಪಕರು ಸಹ ಬಹಳ ಒಳ್ಳೆಯ ಮನಸ್ಸಿನವರಾಗಿದ್ದು, ಕೂಡಲೇ ಸಾಯಿ ಪಲ್ಲವಿ ಅವರಿಗೆ ಎರಡು ದಿನದ ಬ್ರೇಕ್ ನೀಡಿದರಂತೆ.

ಸಾಯಿ ಪಲ್ಲವಿ ಪ್ರಸ್ತುತ ‘ರಾಮಾಯಣ’ ಸಿನಿಮಾನಲ್ಲಿ ನಟಿಸಿದ್ದಾರೆ. ಅದರ ಜೊತೆಗೆ ಶಿವಕಾರ್ತಿಕೇಯನ್ ಜೊತೆಗೆ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಮಣಿರತ್ನಂ ನಿರ್ದೇಶನದ ಸಿನಿಮಾನಲ್ಲಿ ಸಹ ನಟಿಸುತ್ತಿದ್ದಾರೆ. ಒಂದು ತೆಲುಗು ಸಿನಿಮಾ ಸಹ ಒಪ್ಪಿಕೊಂಡಿದ್ದಾರೆ. ಹಿಂದಿಯಲ್ಲಿ ಆಮಿರ್ ಖಾನ್ ಪುತ್ರನ ಜೊತೆಗೆ ಒಂದು ಸಿನಿಮಾನಲ್ಲಿ ನಟಿಸಿದ್ದು, ಆ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us