
ನಟಿ ಸಾಯಿ ಪಲ್ಲವಿಯ (Sai Pallavi) ಹೊಸ ಸಿನಿಮಾ ಘೋಷಣೆಯಾಗಿ ಸಮಯವಾಗಿತ್ತು. ಸಾಯಿ ಪಲ್ಲವಿ ಪ್ರಸ್ತುತ ‘ರಾಮಾಯಣ’ ಸಿನಿಮಾದ ಹೊರತಾಗಿ ಇನ್ಯಾವುದೇ ಸಿನಿಮಾನಲ್ಲಿ ನಟಿಸುತ್ತಿಲ್ಲ. ಬಾಲಿವುಡ್ನ ಇನ್ನೊಂದು ಸಿನಿಮಾನಲ್ಲಿ ನಟಿಸಿದ್ದಾರೆ ಆದರೆ ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ. ಆದರೆ ಇದೀಗ ಸಾಯಿ ಪಲ್ಲವಿಯ ಹೊಸ ಸಿನಿಮಾದ ಬಗ್ಗೆ ಸುದ್ದಿಯೊಂದು ಹೊರಬಿದ್ದಿದೆ. ವಿಶೇಷವೆಂದರೆ ಮೂರನೇ ಬಾರಿ ಸ್ಟಾರ್ ನಟನೊಟ್ಟಿಗೆ ತೆರೆ ಹಂಚಿಕೊಳ್ಳಲು ಮುಂದಾಗಿದ್ದಾರೆ ಸಾಯಿ ಪಲ್ಲವಿ.
ಸಾಯಿ ಪಲ್ಲವಿ ಇದೀಗ ಹೊಸ ತೆಲುಗು ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಸ್ಟಾರ್ ನಟ, ನ್ಯಾಚುರಲ್ ಸ್ಟಾರ್ ನಾನಿ ಈ ಸಿನಿಮಾದ ನಾಯಕ. ಸಾಯಿ ಪಲ್ಲವಿ ಹಾಗೂ ನಾನಿ ಮೊದಲ ಬಾರಿಗೆ ಎಂಸಿಎ (ಮಿಡಲ್ ಕ್ಲಾಸ್ ಅಬ್ಬಾಯಿ) ಸಿನಿಮಾನಲ್ಲಿ ಒಟ್ಟಿಗೆ ನಟಿಸಿದ್ದರು. ಆ ಸಿನಿಮಾ ಹಿಟ್ ಎನಿಸಿಕೊಂಡಿತ್ತು. ಆ ಸಿನಿಮಾನಲ್ಲಿ ಈ ಇಬ್ಬರ ನಡುವಿನ ಕೆಮಿಸ್ಟ್ರಿ ಸಖತ್ ವರ್ಕೌಟ್ ಆಗಿತ್ತು. ಆ ಬಳಿಕ ‘ಶ್ಯಾಮ ಸಿಂಘ ರಾಯ್’ ಸಿನಿಮಾನಲ್ಲಿ ಮತ್ತೆ ಒಟ್ಟಾಗಿ ನಟಿಸಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈಗ ಮೂರನೇ ಬಾರಿ ಸಾಯಿ ಪಲ್ಲವಿ ಹಾಗೂ ನಾನಿ ಒಟ್ಟಿಗೆ ನಟಿಸುತ್ತಿದ್ದಾರೆ.
ಇದನ್ನೂ ಓದಿ:ಸೀತೆ ಪಾತ್ರಧಾರಿ ಸಾಯಿ ಪಲ್ಲವಿ ಎಷ್ಟು ಸಿಂಪಲ್ ನೋಡಿ
ಇತ್ತೀಚೆಗಷ್ಟೆ ಬಿಡುಗಡೆ ಆಗಿ ಸೂಪರ್ ಹಿಟ್ ಆದ ಧನುಶ್ ನಟನೆಯ ‘ಕುಬೇರ’ ಸಿನಿಮಾ ನಿರ್ದೇಶನ ಮಾಡಿದ್ದ ಟಾಲಿವುಡ್ನ ಸ್ಟಾರ್ ನಿರ್ದೇಶಕ ಶೇಖರ್ ಕಮ್ಮುಲ ಅವರು ಈ ಸಿನಿಮಾ ಅನ್ನು ನಿರ್ದೇಶನ ಮಾಡಲಿದ್ದಾರೆ. ಶೇಖರ್ ಕಮ್ಮುಲ ನಿರ್ದೇಶನದ ಸೂಪರ್ ಹಿಟ್ ಸಿನಿಮಾ ‘ಫಿದಾ’ನಲ್ಲಿ ಈಗಾಗಲೇ ಸಾಯಿ ಪಲ್ಲವಿ ನಟಿಸಿದ್ದಾರೆ. ಆದರೆ ನಾನಿಗೆ ಇದು ಶೇಖರ್ ಕಮ್ಮುಲ ಜೊತೆಗೆ ಮೊದಲ ಸಿನಿಮಾ ಆಗಿದೆ. ಇದೊಂದು ಪ್ರಬುದ್ಧ ಪ್ರೇಮಕಥಾ ಸಿನಿಮಾ ಆಗಿರಲಿದೆ ಎನ್ನಲಾಗುತ್ತಿದೆ.
ನಾನಿ ಪ್ರಸ್ತುತ ‘ದಿ ಪ್ಯಾರಡೈಸ್’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಾಯಿ ಪಲ್ಲವಿ ‘ರಾಮಾಯಣ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಳ ಬಳಿಕ ಶೇಖರ್ ಕಮ್ಮುಲ ಅವರ ಹೊಸ ಸಿನಿಮಾ ಪ್ರಾರಂಭ ಆಗಲಿದೆ. ಸಾಯಿ ಪಲ್ಲವಿ, ಆಮಿರ್ ಖಾನ್ ಪುತ್ರನ ಜೊತೆಗೆ ‘ಏಕ್ ದಿನ್’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದಾರೆ. ಆದರೆ ಆ ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ. ಆ ಸಿನಿಮಾ ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ ಆಗಿದೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ