AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಹಿಟ್ ಸಿನಿಮಾನಲ್ಲಿ ನಟಿಸಿದ್ದಕ್ಕೆ ಪಶ್ಚಾತಾಪವಿದೆ: ಸೈಫ್ ಅಲಿ ಖಾನ್

ಸಾಮಾನ್ಯವಾಗಿ ಸಿನಿಮಾ ನಟ-ನಟಿಯರು ಯಾವುದಾದರೂ ಫ್ಲಾಫ್ ಸಿನಿಮಾಗಳಲ್ಲಿ ಅಥವಾ ವಿವಾದಾತ್ಮಕ ಸಿನಿಮಾಗಳಲ್ಲಿ ನಟಿಸಿದ್ದಕ್ಕೆ ಪಶ್ಚಾತ್ತಾಪ ಪಟ್ಟುಕೊಳ್ಳುತ್ತಾರೆ. ಆ ಸಿನಿಮಾನಲ್ಲಿ ನಟಿಸಬಾರದಿತ್ತು ಎಂದುಕೊಳ್ಳುತ್ತಾರೆ. ಆದರೆ ಸೈಫ್ ಅಲಿ ಖಾನ್, ತಾವು ನಟಿಸಿದ ಹಿಟ್ ಸಿನಿಮಾ ಒಂದರ ಬಗ್ಗೆ ಪಶ್ಚಾತಾಪ ಪಡುತ್ತಿದ್ದಾರಂತೆ. ಯಾವುದು ಆ ಸಿನಿಮಾ? ಸೈಫ್ ಅಲಿ ಖಾನ್​​ಗೆ ಪಶ್ಚಾತಾಪ ಏಕೆ?

ಆ ಹಿಟ್ ಸಿನಿಮಾನಲ್ಲಿ ನಟಿಸಿದ್ದಕ್ಕೆ ಪಶ್ಚಾತಾಪವಿದೆ: ಸೈಫ್ ಅಲಿ ಖಾನ್
Sai Ali Khan
ಮಂಜುನಾಥ ಸಿ.
|

Updated on: Sep 11, 2026 | 1:20 PM

Share

ಮುಖ್ಯಾಂಶಗಳು

  • ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್
  • ಹಳೆಯ ಸಿನಿಮಾನಲ್ಲಿ ನಟಿಸಿದ್ದಕ್ಕೆ ಸೈಫ್​ ಗೆ ಪಶ್ಚಾತಾಪ ಇದೆ
  • ಯಾವುದು ಆ ಹಿಟ್ ಸಿನಿಮಾ, ಸೈಫ್​ಗೆ ಪಶ್ಚಾತಾಪ ಏಕೆ?

ಸೋತ ಸಿನಿಮಾನಲ್ಲಿ (Cinema) ನಟಿಸಿದ ಬಗ್ಗೆ ನಟ-ನಟಿಯರು ಪಶ್ಚಾತ್ತಾಪ ವ್ಯಕ್ತಪಡಿಸುವುದು ಸಾಮಾನ್ಯ, ಆದರೆ ಬಾಲಿವುಡ್ ನಟ ಸೈಫ್ ಅಲಿ ಖಾನ್, ಹಿಟ್ ಸಿನಿಮಾನಲ್ಲಿ ನಟಿಸಿದ್ದಕ್ಕೂ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ. ಆ ಸಿನಿಮಾನಲ್ಲಿ ನಾನು ನಟಿಸಬಾರದಿತ್ತು ಎಂದಿದ್ದಾರೆ. ಅದುವೇ 2012ರಲ್ಲಿ ಬಿಡುಗಡೆ ಆಗಿದ್ದ ‘ಕಾಕ್​​ಟೇಲ್’. ಆ ಸಿನಿಮಾನಲ್ಲಿ ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ಮತ್ತು ಡಿಯಾನಾ ಪೆಂಟಿ ನಟನೆ ಮಾಡಿದ್ದರು. ಸಿನಿಮಾ ಸೂಪರ್ ಹಿಟ್ ಆಗಿತ್ತು. ಆದರೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಸೈಫ್ ಅಲಿ ಖಾನ್, ಆ ಸಿನಿಮಾನಲ್ಲಿ ನಾನು ನಟಿಸಬಾರದಿತ್ತು ಎಂದಿದ್ದಾರೆ.

‘ಕಾಕ್​​ಟೇಲ್’ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸುವುದರ ಜೊತೆಗೆ ಅದರ ಸಹನಿರ್ಮಾಪಕರೂ ಆಗಿದ್ದರು ಸೈಫ್ ಅಲಿ ಖಾನ್. ಇದೀಗ ‘ಗಲ್ಫ್ ನ್ಯೂಸ್’ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಸೈಫ್ ಅಲಿ ಖಾನ್, ‘ಕಾಕ್‌ಟೈಲ್’ ಚಿತ್ರದಲ್ಲಿ ‘ಗೌತಮ್’ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದು ಆ ಪಾತ್ರಕ್ಕಾಗಿ ಅಲ್ಲ, ಬದಲಿಗೆ ಸಿನಿಮಾ ಹೇಗಾದರೂ ಮಾಡಿ ಸೆಟ್ಟೇರಲಿ ಎಂಬ ಕಾರಣಕ್ಕಾಗಿ ಎಂದಿದ್ದಾರೆ. ‘ನಾನು ಆ ಪಾತ್ರವನ್ನು ಮಾಡಿದೆ ಏಕೆಂದರೆ ನಾವು ಅದನ್ನು ನಿರ್ಮಿಸುತ್ತಿದ್ದೆವು. ನೂರಕ್ಕೆ ನೂರು ಪ್ರತಿಶತ ಅದು ತಪ್ಪೇ ಆಗಿತ್ತು, ಮತ್ತು ಅದು ಪ್ರಗತಿಪರ ಅಲ್ಲದ ಸ್ಕ್ರಿಪ್ಟ್ ಆಯ್ಕೆಯಾಗಿತ್ತು. ನಾನು ಆ ಪಾತ್ರಕ್ಕಾಗಿ ಅದನ್ನು ಮಾಡಲಿಲ್ಲ, ಬದಲಿಗೆ ಸಿನಿಮಾ ನಿರ್ಮಾಣಗೊಳ್ಳಬೇಕು ಎಂಬ ಕಾರಣಕ್ಕೆ ಮಾಡಿದೆ. ನಾವು ವಿವಿಧ ಕಾರಣಗಳಿಗಾಗಿ ಕೆಲಸಗಳನ್ನು ಮಾಡುತ್ತೇವೆ. ಅತ್ಯಾಕರ್ಷಕ ಪಾತ್ರ ಯಾವುದೆಂದರೆ ಅದು ವೆರೋನಿಕಾ ಪಾತ್ರ ಎಂಬುದು ನನಗೆ ಚೆನ್ನಾಗಿ ತಿಳಿದಿತ್ತು’ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ಬಾಲಿವುಡ್‌ನದ್ದು ಕುರಿ ಹಿಂಡಿನ ಬುದ್ಧಿ ಎಂದ ಕರೀನಾ; ನಟಿಯ ಓಪನ್ ಮಾತು

ಸಿನಿಮಾ ಬಿಡುಗಡೆ ಆಗಿ ದಶಕಕ್ಕೂ ಹೆಚ್ಚು ಸಮಯ ಆಗಿದ್ದು, ಈಗ ‘ಕಾಕ್​​ಟೇಲ್’ ಸಿನಿಮಾದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ‘ವೆರೊನಿಕಾ’ ಹೆಸರಿನ ಪಾತ್ರದಲ್ಲಿ ನಟಿಸಿದ್ದರು. ಅದೊಂದು ಒಳ್ಳೆಯ ಪಾತ್ರ ಆಗಿತ್ತು. ಆದರೆ ಸೈಫ್ ಅಲಿ ಖಾನ್ ವೆರೊನಿಕಾ ಜೊತೆಗೆ ಇದ್ದರೂ ಸಹ ಡಿಯಾನಾ ಪೆಂಟಿ ನಟಿಸಿದ್ದ ಮೀರಾ ಪಾತ್ರವನ್ನು ಮದುವೆ ಆಗುವ ಕತೆಯನ್ನು ಸಿನಿಮಾ ಒಳಗೊಂಡಿತ್ತು. ಈಗ ಈ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಮೀರಾ ಪಾತ್ರ ‘ಸಂಸ್ಕಾರಿ’ ಎಂಬ ಒಂದೇ ಕಾರಣಕ್ಕೆ ಸೈಫ್ ಪಾತ್ರವಾದ ಗೌತಮ್ ಆಕೆಯನ್ನು ಆಯ್ಕೆ ಮಾಡಿದ್ದು ತಪ್ಪು, ವೆರೊನಿಕಾ ಆಧುನಿಕ ಮಹಿಳೆ ಆಗಿದ್ದರೂ ಸಹ ಆಕೆಯದ್ದು ಮೆಚ್ಯೂರ್ಡ್ ವ್ಯಕ್ತಿತ್ವ, ಮಾನವೀಯ ವ್ಯಕ್ತಿತ್ವ, ಆದರೆ ಆಕೆ ಕೇವಲ ಬೋಲ್ಡ್, ಮಾಡರ್ನ್ ಎಂಬ ಕಾರಣಕ್ಕೆ ಆಕೆಯನ್ನು ವಿಲನ್ ಅಥವಾ ಅಪ್ರಮುಖ ಎಂದು ಚಿತ್ರಿಸಲಾಗಿದೆ ಎಂಬ ಟೀಕೆಗಳು ಕೇಳಿ ಬಂದಿವೆ.

ಇತ್ತೀಚೆಗಷ್ಟೆ ‘ಕಾಕ್​​ಟೇಲ್ 2’ ಸಿನಿಮಾ ಸಹ ಬಿಡುಗಡೆ ಆಗಿದೆ. ಸಿನಿಮಾನಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ, ಕೃತಿ ಸನೋನ್ ಮತ್ತು ನಟ ಶಾಹಿದ್ ಕಪೂರ್ ಒಟ್ಟಿಗೆ ನಟಿಸಿದ್ದರು. ಬಾಕ್ಸ್ ಆಫೀಸ್​​ನಲ್ಲಿ ಸಾಧಾರಣ ಯಶಸ್ಸನ್ನಷ್ಟೆ ಈ ಸಿನಿಮಾ ಕಂಡಿತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ
ವಿ. ಸೋಮಣ್ಣ ಕಾರು ಮುತ್ತಿಗೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಯತ್ನ
ವಿ. ಸೋಮಣ್ಣ ಕಾರು ಮುತ್ತಿಗೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಯತ್ನ