Prabhas: ಫೇಸ್​​ಬುಕ್​ನಲ್ಲಿ ಪ್ರಭಾಸ್​ಗೆ ಎಷ್ಟನೇ ಸ್ಥಾನ? ಬಾಲಿವುಡ್​ ಮಂದಿ ಜೊತೆ ಪೈಪೋಟಿಗೆ ಇಳಿದ ಸೌತ್​ ಸ್ಟಾರ್​

| Updated By: Digi Tech Desk

Updated on: Aug 02, 2021 | 9:56 AM

Prabhas: ಫೇಸ್​ಬುಕ್​ನಲ್ಲಿ 50.7 ಮಿಲಿಯನ್​ ಫಾಲೋವರ್ಸ್​ ಹೊಂದಿರುವ ಸಲ್ಮಾನ್​ ಖಾನ್​ ಅವರು ನಂಬರ್​ ಒನ್​ ಸ್ಥಾನದಲ್ಲಿದ್ದಾರೆ. 2ನೇ ಸ್ಥಾನದಲ್ಲಿ ಅಕ್ಷಯ್​ ಕುಮಾರ್​ ಇದ್ದಾರೆ. ಹಾಗಾದರೆ ಪ್ರಭಾಸ್​ಗೆ ಎಷ್ಟನೇ ಸ್ಥಾನವಿದೆ?

Prabhas: ಫೇಸ್​​ಬುಕ್​ನಲ್ಲಿ ಪ್ರಭಾಸ್​ಗೆ ಎಷ್ಟನೇ ಸ್ಥಾನ? ಬಾಲಿವುಡ್​ ಮಂದಿ ಜೊತೆ ಪೈಪೋಟಿಗೆ ಇಳಿದ ಸೌತ್​ ಸ್ಟಾರ್​
ಪ್ರಭಾಸ್​
Follow us on

Prabhas: ಬಾಹುಬಲಿ ಸರಣಿ ಸಿನಿಮಾಗಳು ಬಿಡುಗಡೆಯಾಗಿ ಯಶಸ್ಸು ಕಂಡ ಬಳಿಕ ನಟ ಪ್ರಭಾಸ್​ (Prabhas) ಅವರು ಕೇವಲ ದಕ್ಷಿಣ ಭಾರತಕ್ಕೆ ಸೀಮಿತವಾಗಿ ಉಳಿದಿಲ್ಲ. ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಅವರು ಮಿಂಚುತ್ತಿದ್ದಾರೆ. ದೇಶಾದ್ಯಂತ ಅವರಿಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಹಿಂದಿ ಭಾಷಿಕರು ಹೆಚ್ಚಿರುವ ಉತ್ತರ ಭಾರತದಲ್ಲೂ ಪ್ರಭಾಸ್​ ಹವಾ ಹೆಚ್ಚಿದೆ. ಹಾಗಾಗಿ ಫೇಸ್​ಬುಕ್​ನಲ್ಲಿ (Facebook) ಅವರಿಗೆ ಫಾಲೋವರ್ಸ್​​ ಸಂಖ್ಯೆ ಏರಿಕೆ ಆಗುತ್ತಿದೆ. ಎಷ್ಟರಮಟ್ಟಿಗೆಂದರೆ, ಬಾಲಿವುಡ್​ನ ಅನೇಕ ಸ್ಟಾರ್​ ನಟರಿಗೆ ಪ್ರಭಾಸ್​ ಪೈಪೋಟಿ ನೀಡುತ್ತಿದ್ದಾರೆ. ಫೇಸ್​ಬುಕ್​ನಲ್ಲಿ ಅತಿಹೆಚ್ಚು ಫಾಲೋವರ್ಸ್​ ಹೊಂದಿರುವ ಟಾಪ್​ 10 ನಟರಲ್ಲಿ ಪ್ರಭಾಸ್​ ಕೂಡ ಸ್ಥಾನ ಪಡೆದುಕೊಂಡಿದ್ದಾರೆ.

ಫೇಸ್​ಬುಕ್​ನಲ್ಲಿ 50.7 ಮಿಲಿಯನ್​ ಫಾಲೋವರ್ಸ್​ ಹೊಂದಿರುವ ಸಲ್ಮಾನ್​ ಖಾನ್​ ಅವರು ನಂಬರ್​ ಒನ್​ ಸ್ಥಾನದಲ್ಲಿದ್ದಾರೆ. 2ನೇ ಸ್ಥಾನದಲ್ಲಿರುವ ಅಕ್ಷಯ್​ ಕುಮಾರ್​ ಅವರನ್ನು 48 ಮಿಲಿಯನ್​ ಮಂದಿ ಫಾಲೋ ಮಾಡುತ್ತಿದ್ದಾರೆ. 42.6 ಮಿಲಿಯನ್​ ಫಾಲೋವರ್ಸ್​ ಸಂಪಾದಿಸಿಕೊಂಡಿರುವ ಶಾರುಖ್​ ಖಾನ್​ಗೆ ಮೂರನೇ ಸ್ಥಾನ. ನಾಲ್ಕರಿಂದ 8ನೇ ಸ್ಥಾನಗಳನ್ನು ಅನುಕ್ರಮವಾಗಿ ಅಮಿತಾಭ್​ ಬಚ್ಚನ್​, ಕಪಿಲ್​ ಶರ್ಮಾ, ಹೃತಿಕ್​ ರೋಷನ್​ ಟೈಗರ್​ ಶ್ರಾಫ್​, ಅಜಯ್​ ದೇವಗನ್​ ಹೊಂದಿದ್ದಾರೆ.

ಟಾಪ್​ 10ರ ಪಟ್ಟಿಯಲ್ಲಿ ಪ್ರಭಾಸ್​ಗೆ 9ನೇ ಸ್ಥಾನ. ಫೇಸ್​ಬುಕ್​ನಲ್ಲಿ ಅವರನ್ನು 24 ಮಿಲಿಯನ್​ ಜನರು ಫಾಲೋ ಮಾಡುತ್ತಿದ್ದಾರೆ. 10ನೇ ಸ್ಥಾನದಲ್ಲಿರುವ ನಟ ಶಾಹಿದ್​ ಕಪೂರ್​ಗೆ 23 ಮಿಲಿಯನ್​ ಫಾಲೋವರ್ಸ್​ ಇದ್ದಾರೆ. ಆ ಮೂಲಕ ಟಾಪ್​ 10ರಲ್ಲಿ ಸ್ಥಾನ ಪಡೆದ ದಕ್ಷಿಣ ಭಾರತದ ಏಕೈಕ ನಟ ಎಂಬ ಖ್ಯಾತಿಗೆ ಪ್ರಭಾಸ್​ ಪಾತ್ರರಾಗಿದ್ದಾರೆ.

ಸದ್ಯ ಪ್ರಭಾಸ್​ ಕೈಯಲ್ಲಿ ಹಲವು ಸಿನಿಮಾಗಳಿವೆ. ಪ್ರಶಾಂತ್​ ನೀಲ್​ ನಿರ್ದೇಶನದ ‘ಸಲಾರ್​’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಈ ಪ್ರಾಜೆಕ್ಟ್​ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಬಾಲಿವುಡ್​ ನಿರ್ದೇಶಕ ಓಂ ರಾವುತ್​ ಆ್ಯಕ್ಷನ್​-ಕಟ್​ ಹೇಳುತ್ತಿರುವ ‘ಆದಿಪುರುಷ್​’ ಚಿತ್ರದಲ್ಲಿ ಪ್ರಭಾಸ್​ ರಾಮನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪೂಜಾ ಹೆಗ್ಡೆ ಜೊತೆ ಅಭಿನಯಿಸಿರುವ ‘ರಾಧೆ ಶ್ಯಾಮ್​’ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ಹಲವು ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಸಿನಿಮಾ 2022ರ ಜ.14ರಂದು ರಿಲೀಸ್​ ಆಗಲಿದೆ.

ಇದನ್ನೂ ಓದಿ:

ಸಲಾರ್​ ಚಿತ್ರದಲ್ಲಿ 2 ಪ್ರಮುಖ ಬದಲಾವಣೆ; ಪ್ರಭಾಸ್​, ಪ್ರಶಾಂತ್​ ನೀಲ್​ ಬಳಗದಲ್ಲಿ ಏನು ನಡೀತಿದೆ?

ಬಾಹುಬಲಿ ಬಜೆಟ್​ ಮೀರಿಸಲಿದೆ ಪ್ರಭಾಸ್​, ಅಮಿತಾಭ್​, ದೀಪಿಕಾ ಪಡುಕೋಣೆ ಕಾಂಬಿನೇಷನ್​ ಸಿನಿಮಾ   

Published On - 8:19 am, Mon, 2 August 21