Shruti Haasan: ಬಾಯ್​ಫ್ರೆಂಡ್​ ಜೊತೆ ಕಮಲ್​ ಹಾಸನ್​ ಪುತ್ರಿ ಶ್ರುತಿ ಮೋಜು ಮಸ್ತಿ; ಫೋಟೋ ವೈರಲ್​

Shruti Haasan Viral Pic: ಚಿತ್ರ ಕಲಾವಿದ ಸಂತನು ಹಜಾರಿಕ ಮತ್ತು ಶ್ರುತಿ ಹಾಸನ್​ ಒಂದೇ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಪ್ರಿಯಕರನ ಕೆನ್ನೆ ಗಿಂಡುತ್ತ, ಕೂದಲು ಸವರುತ್ತ ಮುದ್ದಿಸುವ ಭಂಗಿಯಲ್ಲಿ ಶ್ರುತಿ ಸೆಲ್ಫೀ ತೆಗೆದುಕೊಂಡಿದ್ದಾರೆ.

Shruti Haasan: ಬಾಯ್​ಫ್ರೆಂಡ್​ ಜೊತೆ ಕಮಲ್​ ಹಾಸನ್​ ಪುತ್ರಿ ಶ್ರುತಿ ಮೋಜು ಮಸ್ತಿ; ಫೋಟೋ ವೈರಲ್​
ಶ್ರುತಿ ಹಾಸನ್​ ಮತ್ತು ಪ್ರಿಯಕರ ಸಂತನು
Edited By:

Updated on: May 13, 2021 | 4:08 PM

ನಟಿ ಶ್ರುತಿ ಹಾಸನ್​ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಅವರು ನಟಿಸಿರುವ ‘ವಕೀಲ್​ ಸಾಬ್​’ ಸಿನಿಮಾ ಲಾಕ್​ಡೌನ್​ನಿಂದಾಗಿ ಹೇಳಿಕೊಳ್ಳುವಂತಹ ಯಶಸ್ಸು ಕಾಣಲಿಲ್ಲ. ಹಾಗಂತ ಶ್ರುತಿಗೆ ಅವಕಾಶಗಳ ಕೊರತೆ ಆಗಿಲ್ಲ. ಪ್ರಭಾಸ್​ ನಟನೆಯ, ಪ್ರಶಾಂತ್​ ನೀಲ್​ ನಿರ್ದೇಶನದ ‘ಸಲಾರ್​’ ಚಿತ್ರಕ್ಕೆ ಶ್ರುತಿ ನಾಯಕಿ. ಸದ್ಯ ಲಾಕ್​ಡೌನ್​ ಕಾರಣದಿಂದ ಆ ಸಿನಿಮಾ ಕೆಲಸಗಳು ನಿಂತಿವೆ. ಹಾಗಾದರೆ ಈಗ ಶ್ರುತಿ ಏನು ಮಾಡುತ್ತಿದ್ದಾರೆ? ಅದಕ್ಕೆ ಉತ್ತರ ಸಿಕ್ಕಿದೆ. ಸದ್ಯ ಅವರು ಬಾಯ್​ ಫ್ರೆಂಡ್​ ಜೊತೆ ಮೋಜು-ಮಸ್ತಿ ಮಾಡುತ್ತಿದ್ದಾರೆ.

ಶ್ರುತಿ ಹಾಸನ್​ ತಮ್ಮ ಪ್ರಿಯಕರ ಸಂತನು ಹಜಾರಿಕ ಜೊತೆ ಕಾಲ ಕಳೆಯುತ್ತಿದ್ದಾರೆ. ಹಾಗಂತ ಇದು ಗಾಸಿಪ್​ ಅಲ್ಲ. ಸ್ವತಃ ಶ್ರುತಿ ಹಾಸನ್​ ಅವರು ಈ ಬಗ್ಗೆ ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳ ಮೂಲಕ ಮಾಹಿತಿ ನೀಡಿದ್ದಾರೆ. ಅಲ್ಲದೆ ಬಾಯ್​ಫ್ರೆಂಡ್​ ಜೊತೆ ತುಂಬ ಆಪ್ತವಾಗಿರುವ ಫೋಟೋಗಳನ್ನು ಅವರು ಶೇರ್​ ಮಾಡಿಕೊಂಡಿದ್ದಾರೆ.

ಚಿತ್ರ ಕಲಾವಿದ ಸಂತನು ಹಜಾರಿಕ ಮತ್ತು ಶ್ರುತಿ ಹಾಸನ್​ ಒಂದೇ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಪ್ರಿಯಕರನ ಕೆನ್ನೆ ಗಿಂಡುತ್ತ, ಕೂದಲು ಸವರುತ್ತ ಮುದ್ದಿಸುವ ಭಂಗಿಯಲ್ಲಿ ಶ್ರುತಿ ಸೆಲ್ಫೀ ತೆಗೆದುಕೊಂಡಿದ್ದಾರೆ. ಈ ಫೋಟೋ ಕಂಡು ಶ್ರುತಿ ಅಭಿಮಾನಿಗಳು ಮಾತ್ರವಲ್ಲದೆ ಸೆಲೆಬ್ರಿಟಿಗಳು ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ಶ್ರುತಿ ಸ್ನೇಹಿತೆ ನಟಿ ತಮನ್ನಾ ಭಾಟಿಯಾ ಅವರು ‘ಕ್ಯೂಟೀಸ್​’ ಎಂದು ಕಮೆಂಟ್​ ಮಾಡಿದ್ದಾರೆ.

ಶ್ರುತಿ ಹಾಸನ್​ಗೆ ಸದ್ಯ ಕೈ ತುಂಬ ಆಫರ್​ಗಳಿವೆ. ಸ್ಟಾರ್​ ನಟ ಕಮಲ್​ ಹಾಸನ್​ ಪುತ್ರಿ ಆಗಿದ್ದರೂ ಕೂಡ ಅವರು ತಂದೆ-ತಾಯಿ ಬಳಿ ಹಣ ಕೇಳುವುದಿಲ್ಲವಂತೆ. ‘ನಾನು ಇಂಡಿಪೆಂಡೆಂಟ್​ ಮಹಿಳೆ. ನನ್ನ ತಂದೆ ನಟ-ರಾಜಕಾರಣಿ ಹೌದು. ಆದರೆ, ನನ್ನ ಬಿಲ್​ಗಳನ್ನು ನಾನೇ ಪೇ ಮಾಡುತ್ತೇನೆ. ನನ್ನ ತಂದೆ ತಾಯಿ ಬಳಿ ಯಾವಾಗಲೂ ಆರ್ಥಿಕ ಸಹಾಯ ಕೇಳಿಲ್ಲ. ನನಗೆ ಹಣಕಾಸಿನ ತೊಂದರೆ ಇದೆ. ಹೀಗಾಗಿ, ಶೂಟಿಂಗ್​ನಲ್ಲಿ ಪಾಲ್ಗೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಶೂಟಿಂಗ್​​ ಮಾಡುವಾಗ ಮಾಸ್ಕ್​ ಇಲ್ಲದೆ ಕಾಣಿಸಿಕೊಳ್ಳುವುದಕ್ಕೆ ತುಂಬಾನೇ ಭಯವಾಗುತ್ತದೆ. ಆದಾಗ್ಯೂ ಒಪ್ಪಿಕೊಂಡ ಪ್ರಾಜೆಕ್ಟ್​ಗಳನ್ನು ಮುಗಿಸಲೇಬೇಕಾದ ಅನಿವಾರ್ಯತೆ ಇದೆ. ಖರ್ಚುಗಳನ್ನು ನಿಭಾಯಿಸಲು ಕೆಲಸ ಮಾಡುವುದೊಂದೇ ಆಯ್ಕೆ’ ಎಂದು ಶ್ರುತಿ ಇತ್ತೀಚೆಗೆ ಹೇಳಿದ್ದರು.

ಇದನ್ನೂ ಓದಿ:

ಕೆಲಸ ಮಾಡುವುದು ಬಿಟ್ಟು ಬೇರೆ ಯಾವುದೇ ಆಯ್ಕೆ ಉಳಿದಿಲ್ಲ; ಆರ್ಥಿಕ ಸಂಕಷ್ಟದಲ್ಲಿ ಶ್ರುತಿ ಹಾಸನ್

ಕಮಲ್​ ಹಾಸನ್​ ಚುನಾವಣಾ ಸೋಲಿನ ನಂತರ ನನ್ನ ತಂದೆ ಫೈಟರ್​ ಎಂದ ಶ್ರುತಿ ಹಾಸನ್​

Published On - 3:58 pm, Thu, 13 May 21

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us