Samantha Akkineni Birthday: ಸಮಂತಾ ಅಕ್ಕಿನೇನಿ ನಟನೆಯ ಈ ಐದು ಚಿತ್ರಗಳನ್ನು ಮಿಸ್​ ಮಾಡಿಕೊಳ್ಳದೇ ನೋಡಿ

|

Updated on: Apr 28, 2021 | 3:34 PM

2010ರಲ್ಲಿ ತೆರೆಕಂಡ ‘ಯೇ  ಮಾಯ ಚೇಸಾವೆ’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದ ಸಮಂತಾ ಈಗ ಟಾಲಿವುಡ್​ ಹಾಗೂ ಕಾಲಿವುಡ್​ನಲ್ಲಿ ಬಹುಬೇಡಿಕೆಯ ನಟಿ ಆಗಿದ್ದಾರೆ. ಅವರ ಕೆಲವು ಅದ್ಭುತ ಸಿನಿಮಾಗಳ ಬಗ್ಗೆ ಇಲ್ಲಿವೆ ಮಾಹಿತಿ.

Samantha Akkineni Birthday: ಸಮಂತಾ ಅಕ್ಕಿನೇನಿ ನಟನೆಯ ಈ ಐದು ಚಿತ್ರಗಳನ್ನು ಮಿಸ್​ ಮಾಡಿಕೊಳ್ಳದೇ ನೋಡಿ
ನಟಿ ಸಮಂತಾ ಅಕ್ಕಿನೇನಿ
Follow us on

ನಟಿ ಸಮಂತಾ ಅಕ್ಕಿನೇನಿಗೆ ಇಂದು ಜನ್ಮದಿನದ ಸಂಭ್ರಮ. ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಹಾಗೂ ಸಾಕಷ್ಟು ಸೆಲೆಬ್ರಿಟಿಗಳು ಶುಭಾಶಯಗಳ ಸುರಿಮಳೆ ಸುರಿಸಿದ್ದಾರೆ. 2010ರಲ್ಲಿ ತೆರೆಕಂಡ ‘ಯೇ  ಮಾಯ ಚೇಸಾವೆ’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದ ಸಮಂತಾ ಈಗ ಟಾಲಿವುಡ್​ ಹಾಗೂ ಕಾಲಿವುಡ್​ನಲ್ಲಿ ಬಹುಬೇಡಿಕೆಯ ನಟಿ ಆಗಿದ್ದಾರೆ. ಅವರ ಕೆಲವು ಅದ್ಭುತ ಸಿನಿಮಾಗಳ ಬಗ್ಗೆ ಇಲ್ಲಿವೆ ಮಾಹಿತಿ.

ಈಗ
2012ರಲ್ಲಿ ತೆರೆಗೆ ಬಂದ ‘ಈಗ ಸಿನಿಮಾ ಸೂಪರ್ ಹಿಟ್​ ಆಗಿತ್ತು. ಎಸ್.​ಎಸ್.​ ರಾಜಮೌಳಿ ನಿರ್ದೇಶನದ ಈ ಸಿನಿಮಾದಲ್ಲಿ ಸುದೀಪ್​, ನಾನಿ ಹಾಗೂ ಸಮಂತಾ ಮುಖ್ಯಭೂಮಿಕೆ ನಿರ್ವಹಿಸಿದ್ದರು. ಸುದೀಪ್​ ವಿಲನ್​ ರೋಲ್​ನಲ್ಲಿ ಕಾಣಿಸಿಕೊಂಡಿದ್ದರು. ರಾಜಮೌಳಿ ಸಿನಿಮಾಗಳಲ್ಲಿ ಮಹಿಳಾ ಪಾತ್ರಕ್ಕೂ ತುಂಬಾನೇ ಪ್ರಾಮುಖ್ಯತೆ ಇರುತ್ತದೆ. ಈಗ ಸಿನಿಮಾದಲ್ಲೂ ಸಮಂತಾ ಪಾತ್ರ ತೂಕದ್ದಾಗಿತ್ತು. ಈ ಸಿನಿಮಾ ಬಹುತೇಕರಿಗೆ ಇಷ್ಟವಾಗಿತ್ತು.

 ತೇರಿ
2016ರಲ್ಲಿ ರಿಲೀಸ್​ ಆ್ಯಕ್ಷನ್​ ಡ್ರಾಮಾ ಸಿನಿಮಾ ತೇರಿ. ದಳಪತಿ ವಿಜಯ್​, ಆ್ಯಮಿ ಜಾಕ್ಸನ್​ ಹಾಗೂ ಸಮಂತಾ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅಟ್ಲೀ ಕುಮಾರ್​ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಿದ್ದರು. ಈ ಸಿನಿಮಾ ಕಾಲಿವುಡ್​ನಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು.

 ಮೆರ್ಸಲ್​
2017ರಲ್ಲಿ ತೆರೆಗೆ ಬಂದಿದ್ದ ಮೆರ್ಸಲ್​ ಸಿನಿಮಾದಲ್ಲಿ ಸಮಂತಾ ನಟಿಸಿದ್ದರು.  ದಳಪತಿ ವಿಜಯ್​ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು.  ಮಾಸ್​ ಆ್ಯಕ್ಷನ್​ನಿಂದ ಕೂಡಿದ್ದ ಮೆರ್ಸಲ್ ಬಾಕ್ಸ್​ ಆಫೀಸ್​ನಲ್ಲಿ ದೊಡ್ಡ ಮಟ್ಟದ ಗಳಿಕೆ ಮಾಡಿತ್ತು. ಈ ಮೂಲಕ ಸಮಂತಾ ಹಿಟ್​ ಲಿಸ್ಟ್​ನಲ್ಲಿ ಈ ಚಿತ್ರ ಕೂಡ ಸೇರಿಕೊಂಡಿದೆ.

ರಂಗಸ್ಥಳಂ
ಸುಕುಮಾರ್​ ನಿರ್ದೇಶನ ರಂಗಸ್ಥಳಂ 2018ರಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಬಾಕ್ಸ್​ ಆಫೀಸ್​ನಲ್ಲೂ ಸಿನಿಮಾ ಒಳ್ಳೆಯ ಕಮಾಯಿ ಮಾಡಿತ್ತು. ರಾಮ್​ ಚರಣ್​ ಹಾಗೂ ಸಮಂತಾ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಕತೆ ಹಳ್ಳಿ ಹಿನ್ನೆಲೆಯಲ್ಲಿ ಸಾಗುತ್ತದೆ. ಹೀಗಾಗಿ, ಈ ಸಿನಿಮಾದಲ್ಲಿ ಸಮಂತಾ ಡಿಗ್ಲಾಮ್​ ಲುಕ್​ನಲ್ಲಿ ಮಿಂಚಿದ್ದರು.

 ಸೂಪರ್​ ಡಿಲಕ್ಸ್​
ಸೂಪರ್​ ಡಿಲಕ್ಸ್​ ತುಂಬಾನೇ ಭಿನ್ನವಾಗಿ ಮೂಡಿ ಬಂದಿದ್ದ ಚಿತ್ರ. 2019ರಲ್ಲಿ ತೆರೆಗೆ ಬಂದ ಕಾಮಿಡಿ ಕ್ರೈಂ ಥ್ರಿಲ್ಲರ್​ ಚಿತ್ರದಲ್ಲಿ ಸಮಂತಾ, ವಿಜಯ್​ ಸೇತುಪತಿ ಹಾಗೂ ಫಹಾದ್​ ಫಾಸಿಲ್​ ಮುಖ್ಯಭೂಮಿಕೆಯಲ್ಲಿ ಮಿಂಚಿದ್ದರು. ನಾಲ್ಕು ಭಿನ್ನ ಕಥೆಗಳು ಕ್ಲೈಮ್ಯಾಕ್ಸ್​ನಲ್ಲಿ ಒಂದು ಕಡೆ ಬಂದು ಸೇರುತ್ತವೆ.

ಇದನ್ನೂ ಓದಿ: Samantha Akkineni : ಆಟೋ ಚಾಲಕಿ ಕವಿತಾ ಗೆ 12 ಲಕ್ಷ ರೂ. ಕಾರು ಕೊಡಿಸಿದ ನಟಿ ಸಮಂತಾ