ಸಹ ನಟರಿಗೆ ಅಮಿತಾಭ್ ಎಂದಿಗೂ ಕ್ರೆಡಿಟ್​ ಕೊಡುತ್ತಿರಲಿಲ್ಲ; ಪುಸ್ತಕದಲ್ಲಿ ಹೊರಬಿತ್ತು ಬಿಗ್​ ಬಿ ಸ್ವಾರ್ಥ ಮುಖ

ಸಾಕಷ್ಟು ಸೆಲೆಬ್ರಿಟಿಗಳು ತಮ್ಮ ಪರ್ಸನಲ್​ ಲೈಫ್​ ಬಗ್ಗೆ ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಆದರೆ, ರಿಷಿ ಕಪೂರ್ ಯಾವುದರಲ್ಲೂ ಮುಚ್ಚುಮರೆ ಮಾಡಿದವರೇ ಅಲ್ಲ.

ಸಹ ನಟರಿಗೆ ಅಮಿತಾಭ್ ಎಂದಿಗೂ ಕ್ರೆಡಿಟ್​ ಕೊಡುತ್ತಿರಲಿಲ್ಲ; ಪುಸ್ತಕದಲ್ಲಿ ಹೊರಬಿತ್ತು ಬಿಗ್​ ಬಿ ಸ್ವಾರ್ಥ ಮುಖ
ಅಮಿತಾಭ್​ ಬಚ್ಚನ್​
Follow us
ರಾಜೇಶ್ ದುಗ್ಗುಮನೆ
|

Updated on: Apr 28, 2021 | 5:17 PM

ಬಾಲಿವುಡ್​ ಹಿರಿಯ ನಟ ರಿಷಿ ಕಪೂರ್ ಮೃತಪಟ್ಟು ವರ್ಷವಾಗುತ್ತಾ ಬಂದಿದೆ. ಎರಡು ವರ್ಷಗಳಿಂದ ಕ್ಯಾನ್ಸರ್​ ವಿರುದ್ಧ ಹೋರಾಡುತ್ತಿದ್ದ ಅವರು ಕಳೆದ ಏಪ್ರಿಲ್​ 30ರಂದು ಕೊನೆ ಉಸಿರೆಳೆದಿದ್ದರು. ಅವರು ಬರೆದ ‘ಖುಲ್ಲಮ್​ ಖುಲ್ಲ’ ಹೆಸರಿನ ಬಯೋಗ್ರಫಿಯಲ್ಲಿ ತಮ್ಮ ಜೀವನದಲ್ಲಿ ನಡೆದ ಸಾಕಷ್ಟು ವಿಚಾರಗಳ ಬಗ್ಗೆ ಹೇಳಿಕೊಂಡಿದ್ದಾರೆ. ರಿಷಿ ಈ ಪುಸ್ತಕದಲ್ಲಿ ಅಮಿತಾಭ್​ ಬಗ್ಗೆ ಹೇಳಿದ ವಿಚಾರ ಸಾಕಷ್ಟು ಚರ್ಚೆಗೆ ಕಾರಣಾಗಿತ್ತು.

ಸಾಕಷ್ಟು ಸೆಲೆಬ್ರಿಟಿಗಳು ತಮ್ಮ ಪರ್ಸನಲ್​ ಲೈಫ್​ ಬಗ್ಗೆ ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಆದರೆ, ರಿಷಿ ಕಪೂರ್ ಯಾವುದರಲ್ಲೂ ಮುಚ್ಚುಮರೆ ಮಾಡಿದವರೇ ಅಲ್ಲ. ನೀತು ಕಪೂರ್​ ಜತೆಗಿನ ಪ್ರೇಮ ವಿಚಾರದ ಬಗ್ಗೆಯೂ ಪುಸ್ತಕದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

1976ರಲ್ಲಿ ಯಶ್​ ಚೋಪ್ರಾ ಅವರ ‘ಕಭಿ ಕಭಿ’ ಸಿನಿಮಾದಲ್ಲಿ ರಿಷಿ ನಟಿಸುವುದಿಲ್ಲ ಎಂದು ಹೇಳಿದ್ದರಂತೆ. ಈ ಸಿನಿಮಾದಲ್ಲಿ ನನಗಿಂತ ನೀತು ಪಾತ್ರ ಹೆಚ್ಚು ತೂಕ ಹೊಂದಿತ್ತು. ಹೀಗಾಗಿ, ನಾನು ಈ ಸಿನಿಮಾದಲ್ಲಿ ನಟಿಸಬೇಕು ಎಂದರೆ ನೀತು ಪಾತ್ರವನ್ನು ನನಗೆ ನೀಡಿ ಎಂದು ಹೇಳಿದ್ದೆ. ನನ್ನ ಮಾತು ಕೇಳಿ ಯಶ್​ ಅವರು ಕನ್​​ಫ್ಯೂಸ್​ ಆಗಿದ್ದರು ಎಂದು ರಿಷಿ ಬರೆದುಕೊಂಡಿದ್ದಾರೆ.

ಅಮಿತಾಭ್​ ಬಗ್ಗೆ ರಿಷಿ ಕಪೂರ್​ ವಿಶೇಷವಾಗಿ ಬರೆದಿದ್ದಾರೆ. ಅಮಿತಾಭ್​ ಅವರನ್ನು ಒಂದು ಕಡೆ ಹೊಗಳಿದರೆ ಮತ್ತೊಂದು ಕಡೆ ಅವರ ಋಣಾತ್ಮಕ ಅಂಶಗಳ ಬಗ್ಗೆ ಹೇಳಿಕೊಂಡಿದ್ದಾರೆ. ಅಮಿತಾಭ್​ ಓರ್ವ ಸೂಪರ್ಬ್​ ಹೀರೋ. ಅವರ ಜತೆ ಸಾಕಷ್ಟು ನಟರು ನಟಿಸಿದ್ದಾರೆ. ಅಂದು ಅಮಿತಾಭ್​ ಎದುರು ನಾವೆಲ್ಲ ಚಿಕ್ಕ ಸ್ಟಾರ್​ಗಳಾಗಿದ್ದೆವು. ಆದರೆ, ಯಾವ ನಟರಿಗಿಂತಲೂ ನಾವು ಕಡಿಮೆ ಇರಲಿಲ್ಲ. ಅಮಿತಾಭ್​ ಪಾತ್ರಕ್ಕೆ ಸರಿಯಾಗಿ ನಿಲ್ಲಬೇಕು ಎಂದರೆ ನಾವು ಸಾಕಷ್ಟು ಶ್ರಮವಹಿಸಬೇಕಿತ್ತು ಎಂದು ರಿಷಿ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ಸಿನಿಮಾ ಹಿಟ್​ ಆದಾಗ ಅಮಿತಾಭ್​ ಸಹ ನಟರಿಗೆ ಎಂದಿಗೂ ಕ್ರೆಡಿಟ್​ ಕೊಟ್ಟಿಲ್ಲ. ನಿರ್ದೇಶಕರು, ಕಥೆ ಬರೆದವರನ್ನು ಮಾತ್ರ ಅವರು ಹೊಗಳುತ್ತಿದ್ದರು ಎಂದು ರಿಷಿ ನೇರವಾಗಿಯೇ ಬರೆದುಕೊಂಡಿದ್ದಾರೆ.

ಕಭಿ ಕಭಿ (1976), ಅಮರ್​ ಅಕ್ಬರ್​ ಆ್ಯಂಟೋನಿ (1977), ನಸೀಬ್​ (1981), ಕೂಲಿ (1983), ಅಜೂಬಾ (1991) ಸಿನಿಮಾಗಳಲ್ಲಿ ಅಮಿತಾಭ್​ ಹಾಗೂ ರಿಷಿ ಒಟ್ಟಾಗಿ ನಟಿಸಿದ್ದಾರೆ. ಅಜೂಬಾ ತೆರೆಕಂಡು 27 ವರ್ಷಗಳ ನಂತರ 102 ನಾಟ್​ಔಟ್​ ಸಿನಿಮಾ ಮೂಲಕ 2018ರಲ್ಲಿ ಇಬ್ಬರೂ ಮತ್ತೆ ಒಟ್ಟಾಗಿ ತೆರೆ ಹಂಚಿಕೊಂಡಿದ್ದರು.

ಇದನ್ನೂ ಓದಿ: ಹರಿದ ಜೀನ್ಸ್​ ಪ್ಯಾಂಟ್​ ವಿಚಾರಕ್ಕೆ ಮುಖ್ಯಮಂತ್ರಿಯನ್ನೇ ಎದುರು ಹಾಕಿಕೊಂಡ ಅಮಿತಾಭ್​ ಮೊಮ್ಮಗಳು ನವ್ಯಾ!

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ