ಸಮಂತಾ ಸಿನಿ ಪಯಣಕ್ಕೆ 12 ವರ್ಷ; ವಿಶೇಷ ವ್ಯಕ್ತಿಗೆ ಧನ್ಯವಾದ ಹೇಳಿದ ನಟಿ

2021ರಲ್ಲಿ ರಿಲೀಸ್​ ಆದ ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸರಣಿಯಲ್ಲಿ ಸಮಂತಾ ಅವರು ರಾಜಿ ಪಾತ್ರದ ಮೂಲಕ ಮಿಂಚಿದರು. ಅವರ ಪಾತ್ರ ಸಖತ್​ ರೆಬೆಲ್​ ಆಗಿತ್ತು. ಸಮಂತಾ ಬೋಲ್ಡ್​ ಲುಕ್​ ನೋಡಿ ಅನೇಕರು ಅಚ್ಚರಿ ಹೊರಹಾಕಿದ್ದರು.

ಸಮಂತಾ ಸಿನಿ ಪಯಣಕ್ಕೆ 12 ವರ್ಷ; ವಿಶೇಷ ವ್ಯಕ್ತಿಗೆ ಧನ್ಯವಾದ ಹೇಳಿದ ನಟಿ
ಸಮಂತಾ
Edited By:

Updated on: Feb 26, 2022 | 3:13 PM

ಸಿನಿಮಾಗಳಲ್ಲಿ ಕೇವಲ ಪಕ್ಕದ ಮನೆಯ ಹುಡುಗಿ ಪಾತ್ರ ಮಾಡದೆ ಹಲವು ಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ ಸಮಂತಾ (Samantha).  ಅವರಿಗೆ ಚಿತ್ರರಂಗದಲ್ಲಿ ಭಾರೀ ಬೇಡಿಕೆ ಇದೆ. ಇತ್ತೀಚಿನ ವರ್ಷಗಳಲ್ಲಂತೂ ಈ ಬೇಡಿಕೆ ಹೆಚ್ಚುತ್ತಿದೆ. ಈಗ ಸಮಂತಾ ಸಿನಿ ಪಯಣಕ್ಕೆ 12 ವರ್ಷ ತುಂಬಿದೆ. ಈ ವಿಶೇಷ ದಿನಕ್ಕೆ ವಿಶೇಷ ಫೋಟೋ ಹಂಚಿಕೊಂಡು ಅವರು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಈ ಟ್ವೀಟ್​ಅನ್ನು ಅಭಿಮಾನಿಗಳು ರೀಟ್ವೀಟ್​ ಮಾಡಿಕೊಳ್ಳುತ್ತಿದ್ದಾರೆ. ಸಮಂತಾಗೆ ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್​ ಅಭಿನಂದನೆ ತಿಳಿಸುತ್ತಿದ್ದಾರೆ. ‘ಏ ಮಾಯ ಚೇಸಾವೆ’ (Ye Maaya Chesave) ಸಮಂತಾ ಅವರ ಮೊದಲ ಸಿನಿಮಾ. 2010ರ ಫೆಬ್ರವರಿ 26ರಂದು ಈ ಸಿನಿಮಾ ತೆರೆಗೆ ಬಂದಿತ್ತು. ನಾಗ ಚೈತನ್ಯ (Naga Chaitanya) ಜತೆಯಾಗಿ ನಟಿಸಿದ ಈ ಸಿನಿಮಾದಿಂದ ಸಮಂತಾಗೆ ಚಿತ್ರರಂಗದಲ್ಲಿ ಭದ್ರ ಬುನಾದಿ ಸಿಕ್ಕಿತ್ತು. ಮೊದಲ ಸಿನಿಮಾದಲ್ಲೇ ಅವರು ಎಲ್ಲರ ಗಮನ ಸೆಳೆದರು. ಗೌತಮ್​ ವಾಸುದೇವ್​ ಮೆನನ್​ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ಸಮಂತಾ ನಟನೆಗಾಗಿ ‘ಸಿನಿಮಾ ಅವಾರ್ಡ್’, ‘ಫಿಲ್ಮ್​ ಫೇರ್​ ಸೌತ್​’, ‘ನಂದಿ ಅವಾರ್ಡ್ಸ್​’ ಪ್ರಶಸ್ತಿಗಳು ಲಭ್ಯವಾಗಿತ್ತು. ಈ ಸಿನಿಮಾದಿಂದ ಸಮಂತಾ ಬಣ್ಣದ ಬದುಕು ಬದಲಾಯಿತು.

2021ರಲ್ಲಿ ರಿಲೀಸ್​ ಆದ ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸರಣಿಯಲ್ಲಿ ಸಮಂತಾ ಅವರು ರಾಜಿ ಪಾತ್ರದ ಮೂಲಕ ಮಿಂಚಿದರು. ಅವರ ಪಾತ್ರ ಸಖತ್​ ರೆಬೆಲ್​ ಆಗಿತ್ತು. ಸಮಂತಾ ಬೋಲ್ಡ್​ ಲುಕ್​ ನೋಡಿ ಅನೇಕರು ಅಚ್ಚರಿ ಹೊರಹಾಕಿದ್ದರು. ಆ ಬಳಿಕ ‘ಪುಷ್ಪ’ ಸಿನಿಮಾದ ‘ಹೂ ಅಂತಿಯಾ ಮಾವ.. ಊಹೂ ಅಂತಿಯಾ ಮಾವ..’ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಖ್ಯಾತಿ ಹೆಚ್ಚಿಸಿಕೊಂಡರು. ಈಗ ಸಮಂತಾ ಬಳಿ ಹಲವು ಆಫರ್​ಗಳಿವೆ. ಸಮಂತಾ ದಿನ ಕಳೆದಂತೆ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ.

‘ಶಾಕುಂತಲಂ’, ‘ಯಶೋಧಾ’ ಸೇರಿ ಕೆಲ ಸಿನಿಮಾಗಳಲ್ಲಿ ಸಮಂತಾ ನಟಿಸುತ್ತಿದ್ದಾರೆ. ಭಿನ್ನ ಪಾತ್ರಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ. ನಟಿಯಾಗಿ ಮಾತ್ರವಲ್ಲದೆ, ‘ತೆಲುಗು ಬಿಗ್​ ಬಾಸ್​ ಸೀಸನ್​ 4’ ಹಾಗೂ ‘ಸ್ಯಾಮ್​ ಜ್ಯಾಮ್​’ ಶೋಗಳನ್ನು ಸಮಂತಾ ನಿರೂಪಣೆ ಮಾಡಿದ್ದರು. ಕಳೆದ ವರ್ಷ ಪತಿ ನಾಗ ಚೈತನ್ಯ ಅವರಿಂದ ಸಮಂತಾ ದೂರವಾದರು. ಆದರೂ, ಅವರು ಕುಗ್ಗಲಿಲ್ಲ. ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನವನ್ನು ಅವರು ಮಿಶ್ರಣ ಮಾಡಲಿಲ್ಲ. ಹಲವು ಸಿನಿಮಾಗಳನ್ನು ಒಪ್ಪಿಕೊಳ್ಳುವ ಮೂಲಕ ಅಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಂಡರು.

ಚಿತ್ರರಂಗದಲ್ಲಿ 12 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಮಂತಾ ವಿಶೇಷ ಫೋಟೋ ಪೋಸ್ಟ್​ ಮಾಡಿದ್ದಾರೆ. ಈ ಫೋಟೋದಲ್ಲಿ 12 ವರ್ಷದ ದೀರ್ಘ ಪಯಣವನ್ನು ಮೆಲಕು ಹಾಕಿರುವ ಅವರು, ನಿಷ್ಠಾವಂತ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ: Samantha: ಕೀಳು ಭಾಷೆಯಲ್ಲಿ ಸಮಂತಾಗೆ ಪ್ರಶ್ನಿಸಿದ ಅಭಿಮಾನಿ; ನಟಿಯ ಉತ್ತರ ಏನಿತ್ತು?

ಅಂಗಡಿ ಉದ್ಘಾಟನೆ ಮಾಡೋಕೆ ಬಂದ್ರೆ ನಟಿ ಸಮಂತಾ ಪಡೆಯುವ ಸಂಭಾವನೆ ಎಷ್ಟು?