‘ಅಕ್ಕಾ ನೀನು ಅತ್ಯಂತ ಸುಂದರ ವಧು’; ಶೋಭಿತಾ ಬಗ್ಗೆ ಕಮೆಂಟ್ ಮಾಡಿದ ಸಮಂತಾ

ಶೋಭಿತಾ ಹಾಗೂ ನಾಗ ಚೈತನ್ಯ ವಿವಾಹದ ಬಗ್ಗೆ ಕೆಲವು ವದಂತಿ ಹಬ್ಬಿದ್ದವು. ಆ ಪೈಕಿ ಇವರ ಮದುವೆ ಆಲ್ಬಂನ ಶೂಟ್ ಮಾಡಲು ನೆಟ್​ಫ್ಲಿಕ್ಸ್​ನವರಿಗೆ ಹಕ್ಕನ್ನು ನೀಡಿದ್ದಾರೆ ಎಂದು ವರದಿ ಆಗಿತ್ತು. ಇದನ್ನು ಈ ಜೋಡಿ ಅಲ್ಲಗಳೆದಿದ್ದರು.

‘ಅಕ್ಕಾ ನೀನು ಅತ್ಯಂತ ಸುಂದರ ವಧು’; ಶೋಭಿತಾ ಬಗ್ಗೆ ಕಮೆಂಟ್ ಮಾಡಿದ ಸಮಂತಾ
ಶೋಭಿತಾ ಕುಟುಂಬ

Updated on: Dec 04, 2024 | 11:55 AM

ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ್ ಅವರ ವಿವಾಹ ಇಂದು (ಡಿಸೆಂಬರ್ 4) ನೆರವೇರುತ್ತಿದೆ. ಅದ್ದೂರಿಯಾಗಿ ಇವರ ವಿವಾಹ ಅನ್ನಪೂರ್ಣ ಸ್ಟುಡಿಯೋದಲ್ಲಿ ನೆರವೇರುತ್ತಿದೆ. ಈ ಸ್ಟುಡಿಯೋ ಅಕ್ಕಿನೇನಿ ನಾಗಾರ್ಜುನ ಒಡೆತನದಲ್ಲಿ ಇದೆ. ಇವರ ಮದುವೆ ಬಗ್ಗೆ ಸಮಂತಾ ಅವರು ಯಾವುದೇ ಕಮೆಂಟ್ ಮಾಡಿಲ್ಲ. ಆದರೆ, ಈಗ ಸಮಂತಾ ಅವರ ಬಗ್ಗೆ ಮಾತನಾಡಿದ್ದಾರೆ. ಹಾಗಂತ ಇದು ನಾಗ ಚೈತನ್ಯ ಅವರ ಮಾಜಿ ಪತ್ನಿ ಸಮಂತಾ ಅಲ್ಲ.

ಮದುವೆಗೂ ಮುನ್ನದ ಕೆಲವು ಶಾಸ್ತ್ರ ನೆರವೇರಿದೆ. ಈ ಫೋಟೋ ಹಂಚಿಕೊಂಡಿರೋ ಅವರ ಸಹೋದರಿ ಸಮಂತಾ ಧುಲಿಪಾಲ್ , ‘ಅತ್ಯಂತ ಪ್ರಭಾವಶಾಲಿ ವ್ಯಕ್ತಿ. ಅತ್ಯಂತ ಸುಂದರ ಮದುವೆ ಹುಡುಗಿಗೆ ಚಿಯರ್ಸ್. ನಿಮಗೆ ಪ್ರೀತಿ ಅಕ್ಕ’ ಎಂದು ಕರೆದಿರೋ ಅವರು #SoChay ಹ್ಯಾಶ್​ಟ್ಯಾಗ್ ಹಾಕಿದ್ದಾರೆ. ಶೋಭಿತಾ ಅವರು ಶಾಸ್ತ್ರೋಕ್ತವಾಗಿ ವಿವಾಹ ಆಗುತ್ತಿದ್ದಾರೆ. ಅವರು ಈ ಮೊದಲು ಅರಿಶಿಣ ಶಾಸ್ತ್ರ, ಸಂಗೀತ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.

ಶೋಭಿತಾ ಹಾಗೂ ನಾಗ ಚೈತನ್ಯ ವಿವಾಹದ ಬಗ್ಗೆ ಕೆಲವು ವದಂತಿ ಹಬ್ಬಿದ್ದವು. ಆ ಪೈಕಿ ಇವರ ಮದುವೆ ಆಲ್ಬಂನ ಶೂಟ್ ಮಾಡಲು ನೆಟ್​ಫ್ಲಿಕ್ಸ್​ನವರಿಗೆ ಹಕ್ಕನ್ನು ನೀಡಿದ್ದಾರೆ ಎಂದು ವರದಿ ಆಗಿತ್ತು. ಇದನ್ನು ಈ ಜೋಡಿ ಅಲ್ಲಗಳೆದಿದ್ದರು. ನಾವು ಆ ರೀತಿ ಮಾಡಿಲ್ಲ ಎಂದು ಜೋಡಿ ಹೇಳಿಕೊಂಡಿತ್ತು. ಹೀಗಾಗಿ, ಮದುವೆಗೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳು ಇಂದೇ ಹೊರ ಬೀಳುವ ಸಾಧ್ಯತೆ ಇದೆ.

ಇದನ್ನೂ ಓದಿ: ಸಮಂತಾ, ಕೀರ್ತಿ ಸುರೇಶ್, ರಕುಲ್​ಗೆ ಮೋಸ ಮಾಡಿದ ಯುವಕನ ಬಂಧನ

ಸಮಂತಾ ಜೊತೆ ಬೇರ್ಪಟ್ಟ ನಂತರ ನಾಗ ಚೈತನ್ಯ ಒಟ್ಟಾಗಿ ಇದ್ದರು. ಇವರ ಮಧ್ಯೆ ಹೇಗೆ ಪರಿಚಯ ಬೆಳೆಯಿತು ಎಂಬುದು ತಿಳಿದಿಲ್ಲ. ಆದರೆ, ಇಬ್ಬರ ಮಧ್ಯೆ ಒಳ್ಳೆಯ ಗೆಳೆತನ ಬೆಳೆಯಿತು. ಇವರು ಅನೇಕ ಕಡೆಗಳಲ್ಲಿ ಒಟ್ಟಾಗಿ ಸುತ್ತಾಟ ನಡೆಸಿದ್ದಾರೆ. ಇವರು ಈಗ ವಿವಾಹ ಆಗುತ್ತಿದ್ದಾರೆ. ಆಪ್ತರು ಹಾಗೂ ಕುಟುಂಬದವರು ಮದುವೆಗೆ ಬರುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:54 am, Wed, 4 December 24