AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮಂತಾ, ಕೀರ್ತಿ ಸುರೇಶ್, ರಕುಲ್​ಗೆ ಮೋಸ ಮಾಡಿದ ಯುವಕನ ಬಂಧನ

Samantha-Keerthy Suresh: ದಕ್ಷಿಣ ಭಾರತದ ಖ್ಯಾತ ನಟಿಯರಾದ ಸಮಂತಾ, ಕೀರ್ತಿ ಸುರೇಶ್, ರಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್ ಇನ್ನೂ ಕೆಲವು ನಟಿಯರಿಗೆ ಮೋಸ ಮಾಡಿರುವ ಯುವಕನನ್ನು ಬಂಧಿಸಲಾಗಿದೆ.

ಸಮಂತಾ, ಕೀರ್ತಿ ಸುರೇಶ್, ರಕುಲ್​ಗೆ ಮೋಸ ಮಾಡಿದ ಯುವಕನ ಬಂಧನ
Samantha-Keerthy
ಮಂಜುನಾಥ ಸಿ.
|

Updated on: Dec 03, 2024 | 1:09 PM

Share

ಇಲ್ಲೊಬ್ಬ ಯುವಕ ಖ್ಯಾತ ನಟಿಯರಿಗೇ ಮೋಸ ಮಾಡಿದ್ದಾನೆ. ಮೋಸ ಮಾಡಿದ್ದು ಮಾತ್ರವಲ್ಲದೆ ಈಗ ಬಂಧನಕ್ಕೂ ಒಳಗಾಗಿದ್ದಾನೆ. ಹಾಗೆಂದು ಈತ ಪ್ರೀತಿಸಿ ಕೈಕೊಟ್ಟಿಲ್ಲ ಬದಲಿಗೆ ಖ್ಯಾತ ನಟಿಯರಿಂದ, ನಟರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ಅವರಿಗೆ ಮೋಸ ಮಾಡಿದ್ದಾನೆ. ಇದೇ ಪ್ರಕರಣದಲ್ಲಿ ಈಗ ಬಂಧನಕ್ಕೆ ಒಳಗಾಗಿದ್ದು, ವಂಚನೆ ಆರೋಪ ಎದುರಿಸುತ್ತಿದ್ದಾನೆ. ಕಾಂತಿ ದತ್ ಎಂಬಾತ ಕೆಲ ವರ್ಷಗಳ ಹಿಂದೆ ಉದ್ಯಮಯೊಂದನ್ನು ಪ್ರಾರಂಭಿಸಿ, ಸಮಂತಾ, ರಕುಲ್ ಪ್ರೀತ್ ಸಿಂಗ್, ಕೀರ್ತಿ ಸುರೇಶ್ ಇನ್ನೂ ಹಲವು ಸೆಲೆಬ್ರಿಟಿಗಳಿಂದ ಭಾರಿ ಮೊತ್ತದ ಹೂಡಿಕೆ ಮಾಡಿಸಿಕೊಂಡಿದ್ದ, ಈಗ ಆತನ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ.

ಕೋವಿಡ್ ಸಮಯದಲ್ಲಿ ಕಾಂತಿ ದತ್ ಮತ್ತು ಸೆಲೆಬ್ರಿಟಿ ಮಾಡೆಲ್ ಮತ್ತು ನಟಿ ಆಗಿರುವ ಶಿಲ್ಪಾ ರೆಡ್ಡಿ ಒಟ್ಟಿಗೆ ಸೇರಿ ಸಸ್ಟೇನ್ ಕಾರ್ಟ್ ಹೆಸರಿನ ಇ ಕಾಮರ್ಸ್ ಕಂಪೆನಿ ತೆರೆದಿದ್ದರು. ಪರಿಸರಕ್ಕೆ ಹಾನಿ ಅಲ್ಲದ ವಸ್ತುಗಳನ್ನು, ಪರಿಸರಕ್ಕೆ ಹಾನಿ ಆಗುವ ಯಾವುದೇ ವಸ್ತುಗಳನ್ನು ಬಳಸದೆ ಗ್ರಾಹಕರಿಗೆ ಡೆಲಿವರಿ ಮಾಡುವ ಸಂಸ್ಥೆ ಇದಾಗಿತ್ತು. ಪರಿಸರದ ಬಗ್ಗೆ ಕಾಳಜಿ ಇದ್ದ ಸಮಂತಾ, ಕೀರ್ತಿ ಸುರೇಶ್, ರಕುಲ್ ಪ್ರೀತ್ ಸಿಂಗ್ ಇನ್ನೂ ಹಲವು ನಟಿಯರು, ನಟರು ಈ ಉದ್ಯಮದಲ್ಲಿ ಹೂಡಿಕೆ ಮಾಡಿದ್ದರು. ಹೂಡಿಕೆ ಮಾಡಲು ಶಿಲ್ಪಾ ರೆಡ್ಡಿ ಸಹ ಕಾರಣವಾಗಿದ್ದರು.

ಆದರೆ ಎರಡು ತಿಂಗಳ ಹಿಂದೆಯಷ್ಟೆ ಈ ಸಂಸ್ಥೆಯ ಸಹ ಸಂಸ್ಥಾಪಕಿ ಆಗಿದ್ದ ಶಿಲ್ಪಾ ರೆಡ್ಡಿ, ತಾವು ಸಸ್ಟೇನ್ ಕಾರ್ಟ್ ಸಂಸ್ಥೆಯಿಂದ ಹೊರಗೆ ಬರುತ್ತಿರುವುದಾಗಿ ಘೋಷಣೆ ಮಾಡಿದರು. ಅಲ್ಲದೆ ತಮ್ಮನ್ನು ನಂಬಿ ಹಣ ಈ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿರುವ ಎಲ್ಲ ಸೆಲೆಬ್ರಿಟಿಗಳಿಗೂ ಅವರು ಕ್ಷಮೆ ಕೋರಿದರು. ಅಲ್ಲದೆ ಸಂಸ್ಥೆಯ ಸಹ ಸಂಸ್ಥಾಪಕ ಕಾಂತಿ ದತ್ ಜೊತೆಗೆ ತಮಗೆ ಇನ್ನು ಮುಂದೆ ಯಾವುದೇ ವೈಯಕ್ತಿಕ ಮತ್ತು ವ್ಯಾವಹಾರಿಕ ಸಂಬಂಧ ಇರುವುದಿಲ್ಲ ಎಂದು ಸಹ ಹೇಳಿದ್ದರು.

ಇದನ್ನೂ ಓದಿ:ಪಾರ್ಟಿಯಲ್ಲಿ ವರುಣ್ ಧವನ್ ಜೊತೆ ಸಮಂತಾ ಮಸ್ತ್ ಡ್ಯಾನ್ಸ್

ಇದೀಗ ಕಾಂತಿ ದತ್ ಅನ್ನು ವಂಚನೆ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ. ಸಮಂತಾ, ಕೀರ್ತಿ ಸುರೇಶ್, ರಕುಲ್ ಪ್ರೀತ್ ಸಿಂಗ್ ಮಾತ್ರವೇ ಅಲ್ಲದೆ ಇನ್ನೂ ಹಲವು ಸೆಲೆಬ್ರಿಟಿಗಳಿಗೆ ಈ ವ್ಯಕ್ತಿ ಮೋಸ ಮಾಡಿದ್ದಾನೆ ಎನ್ನಲಾಗಿದೆ. ಬಂಧನಕ್ಕೆ ಕೆಲವು ದಿನಗಳ ಮುಂಚೆಯಷ್ಟೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಕಾಂತಿ ದತ್, ಸಸ್ಟೇನ್ ಕಾರ್ಟ್ ಕಂಪೆನಿ ಕಟ್ಟಲು ಬಹಳ ಕಷ್ಟಪಟ್ಟಿದ್ದಾಗಿ, ಅದನ್ನು ಉಳಿಸಿಕೊಳ್ಳಲು ಸಹ ಬಹಳ ಕಷ್ಟಪಟ್ಟಿದ್ದಾಗಿ ಹೇಳಿಕೊಂಡಿದ್ದರು. ಸತತ ಶ್ರಮದ ಹೊರತಾಗಿಯೂ ಸಂಸ್ಥೆ ನಷ್ಟದಲ್ಲಿ ನಡೆಯುತ್ತಿದ್ದು, ಸಂಸ್ಥೆಯನ್ನು ಮುಚ್ಚಲೇ ಬೇಕಾಗಿದೆ’ ಎಂದಿದ್ದರು. ಸಂದೇಶ ಹಂಚಿಕೊಂಡ ಕೆಲವೇ ದಿನಗಳಲ್ಲಿ ಕಾಂತಿ ದತ್ ಬಂಧನವಾಗಿದೆ.

ಇದೇ ವ್ಯಕ್ತಿ ಟ್ರಿಟಿಯಾ ಜುವೆಲರೀಸ್ ಹೆಸರಿನ ಆಭರಣ ಬ್ರ್ಯಾಂಡ್ ಅನ್ನು ಸಹ ಹೊಂದಿದ್ದು, ಈ ಸಂಸ್ಥೆಯ ಮೇಲೂ ಸಾಕಷ್ಟು ಸೆಲೆಬ್ರಿಟಿಗಳಿಂದ ಹೂಡಿಕೆ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದೀಗ ಈತನ ಬಂಧನಕ್ಕೂ ಸಹ ಸೆಲೆಬ್ರಿಟಿಯೊಬ್ಬರು ನೀಡಿರುವ ದೂರು ಕಾರಣ ಎನ್ನಲಾಗುತ್ತಿದೆ. ಕಾಜಲ್ ಅಗರ್ವಾಲ್, ಪರಿಣೀತಿ ಚೋಪ್ರಾ ಇನ್ನೂ ಹಲವರು ಈತನ ಸಂಸ್ಥೆಯಲ್ಲಿ ಹೂಡಿಕ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ