ಸಿನಿಮಾ ಶೂಟಿಂಗ್ಗೆ ಬರಲು ಎರಡು ಷರತ್ತು ಹಾಕಿದ ಪವನ್ ಕಲ್ಯಾಣ್
Pawan Kalyan: ಚುನಾವಣೆ ಗೆದ್ದು ಉಪಮುಖ್ಯ ಮಂತ್ರಿ ಆದ ಬಳಿಕ ಚಿತ್ರರಂಗದಿಂದ ದೂರಾಗಿದ್ದಾರೆ ಪವನ್ ಕಲ್ಯಾಣ್. ಅವರ ಹೊಸ ಸಿನಿಮಾಗಳ ಚಿತ್ರೀಕರಣ ನಿಂತು ವರ್ಷವೇ ಆಗಿದೆ. ಇದೀಗ ಸಿನಿಮಾ ಶೂಟಿಂಗ್ ಪ್ರಾರಂಭ ಮಾಡುವ ಸೂಚನೆ ನೀಡಿದ್ದು, ಎರಡು ಷರತ್ತುಗಳನ್ನು ಪವನ್ ಹಾಕಿದ್ದಾರೆ.
ಪವನ್ ಕಲ್ಯಾಣ್ ಅವರು ಆಂಧ್ರ ಪ್ರದೇಶ ರಾಜಕೀಯದಲ್ಲಿ ಬ್ಯುಸಿ ಆಗಿದ್ದಾರೆ. ಅವರು ಆಂಧ್ರದ ಉಪಮುಖ್ಯಮಂತ್ರಿ ಆಗಿದ್ದಾರೆ. ಹೀಗಾಗಿ, ಸಿನಿಮಾಗಳ ಕಡೆಗೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಯಾವುದೇ ಪ್ರಕೃತಿ ವಿಕೋಪ ಆದರೆ ಅವರು ಅಲ್ಲಿಗೆ ತೆರಳಿ ಪರಿಹಾರ ನೀಡುವ ಕೆಲಸ ಮಾಡಬೇಕಿದೆ. ಈ ಮಧ್ಯೆ ಪವನ್ ಕಲ್ಯಾಣ್ ಅವರು ಸಿನಿಮಾ ಶೂಟಿಂಗ್ಗೆ ಒಪ್ಪಿದ್ದು, ಎರಡು ಷರತ್ತುಗಳನ್ನು ಹಾಕಿದ್ದಾಗಿ ವರದಿ ಆಗಿದೆ.
‘ಹರಿ ಹರ ವೀರಮಲ್ಲು’, ‘ಒಜಿ’ ಹಾಗೂ ‘ಉಸ್ತಾದ್’ ಸಿನಿಮಾಗಳಲ್ಲಿ ಪವನ್ ಕಲ್ಯಾಣ್ ತೊಡಗಿಕೊಂಡಿದ್ದಾರೆ. ಯಾವುದಾದರೂ ಚಿತ್ರವನ್ನು ಅರ್ಧಕ್ಕೆ ನಿಲ್ಲಿಸೋಣ ಎಂದರೆ ಈಗಾಗಲೇ ಒಂದಷ್ಟು ಹಂತದ ಶೂಟಿಂಗ್ ಪೂರ್ಣಗೊಂಡಿದೆ. ಈ ಕಾರಣದಿಂದ ಅವರು ಈ ಚಿತ್ರದ ಶೂಟ್ನ ಮಾಡಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ, ನಿರ್ಮಾಪಕರಿಗೆ ಅವರು ಕೆಲ ಷರತ್ತು ಹಾಕಿದ್ದಾರೆ.
ತೆಲುಗು ಸಿನಿಮಾಗಳಿಗೆ ಬಹುತೇಕ ಹೈದರಾಬಾದ್ನಲ್ಲಿ ಸೆಟ್ ಹಾಕಲಾಗುತ್ತದೆ. ಆದರೆ, ಆಂಧ್ರದಿಂದ ಹೈದರಾಬಾದ್ಗೆ ನಿತ್ಯ ತೆರಳೋದು ಪವನ್ ಕಲ್ಯಾಣ್ಗೆ ಕಷ್ಟ ಆಗುತ್ತದೆ. ಹೀಗಾಗಿ, ಆಂಧ್ರದ ಮಂಗಲಗಿರಿಯಲ್ಲೇ ಸೆಟ್ ಹಾಕಲು ಪವನ್ ಸೂಚಿಸಿದ್ದಾರೆ. ಅಂದರೆ ಮಾತ್ರ ಅವರು ಶೂಟ್ನಲ್ಲಿ ಭಾಗಿ ಆಗಲಿದ್ದಾರೆ. ಮತ್ತೊಂದು ಷರತ್ತು ಸಿನಿಮಾ ತಂಡದವರ ಚಿಂತೆಗೆ ಕಾರಣ ಆಗಿದೆ.
ಒಂದು ಸಿನಿಮಾದ ಶೂಟಿಂಗ್ ಬೇಗ ಪೂರ್ಣಗೊಳ್ಳಬೇಕು ಎಂದರೆ ಪ್ರಮುಖ ಪಾತ್ರಧಾರಿಗಳು ಕನಿಷ್ಠ 9-10 ಗಂಟೆ ಶೂಟ್ ಮಾಡಬೇಕು. ಆದರೆ, ಪವನ್ ಕಲ್ಯಾಣ್ ಅವರು ನಿತ್ಯ ಎರಡರಿಂದ ಮೂರು ಗಂಟೆ ಮಾತ್ರ ನೀಡೋದಾಗಿ ಹೇಳಿದ್ದಾರೆ. ಉಳಿದ ಸಮಯದಲ್ಲಿ ಅವರು ರಾಜ್ಯದ ಕೆಲಸಗಳನ್ನು ನೋಡಿಕೊಳ್ಳಲಿದ್ದಾರೆ.
ಇದನ್ನೂ ಓದಿ:ಪವನ್ ಕಲ್ಯಾಣ್ಗೆ ಧನ್ಯವಾದ ಹೇಳಿದ ಅಲ್ಲು ಅರ್ಜುನ್; ನಡೆಯಿತು ಅಚ್ಚರಿಯ ಬೆಳವಣಿಗೆ
ಪವನ್ ಕಲ್ಯಾಣ್ ಅವರು ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ಅವರಿಗೆ ಸಿನಿಮಾ ರಂಗ ತೊರೆಯುವ ಉದ್ದೇಶ ಇದೆ. ಆದರೆ, ಒಪ್ಪಿಕೊಂಡ ಸಿನಿಮಾಗಳನ್ನು ಮಾಡಲೇಬೇಕಾದ ಅನಿವಾರ್ಯತೆ ಇದೆ. ಸದ್ಯ ಹೈದರಾಬಾದ್ನಲ್ಲಿ ಈಗಾಗಲೇ ಸಿನಿಮಾದ ಸೆಟ್ಗಳನ್ನು ಹಾಕಲಾಗಿತ್ತು ಎನ್ನಲಾಗಿದೆ. ಆದರೆ, ಪವನ್ ಕಲ್ಯಾಣ್ ಕೋರಿಕೆಯಂತೆ ಈಗ ಈ ಭಾಗದಲ್ಲಿ ಸೆಟ್ ಹಾಕಬೇಕಿದೆ. ಇದು ನಿರ್ಮಾಪಕರಿಗೆ ಹೊರೆ ಆಗಲಿದೆ.
ಸದ್ಯ ‘ಹರಿ ಹರ ವೀರಮಲ್ಲೂ’ ಪೂರ್ಣಗೊಳ್ಳುವ ಹಂತದಲ್ಲಿ ಇದೆ. ‘ಉಸ್ತಾದ್’ ಚಿತ್ರಕ್ಕೆ ಇನ್ನೂ ಮೂರು ತಿಂಗಳು ಶೂಟಿಂಗ್ ಬಾಕಿ ಇದೆ. ಇದನ್ನು ಪವನ್ ಕಲ್ಯಾಣ್ ಹೇಗೆ ಪೂರ್ಣಗೊಳಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:25 pm, Tue, 3 December 24