AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪವನ್ ಕಲ್ಯಾಣ್​​ಗೆ ಧನ್ಯವಾದ ಹೇಳಿದ ಅಲ್ಲು ಅರ್ಜುನ್; ನಡೆಯಿತು ಅಚ್ಚರಿಯ ಬೆಳವಣಿಗೆ

‘ಪುಷ್ಪ 2’ ಬಿಗ್ ಬಜೆಟ್ ಸಿನಿಮಾ. ನಿರ್ಮಾಪಕರು ಲಾಭ ಕಾಣಬೇಕು ಎಂದರೆ ಸಿನಿಮಾ ಹೆಚ್ಚಿನ ಕಲೆಕ್ಷನ್ ಮಾಡಬೇಕು. ಹೀಗಾಗಿ, ಟಿಕೆಟ್ ದರ ಹೆಚ್ಚಿಸಲು ಅವರ ಸರ್ಕಾರ ಅವಕಾಶ ನೀಡಿದೆ. ಅಲ್ಲು ಅರ್ಜುನ್ ಹಾಗೂ ಪವನ್ ಕಲ್ಯಾಣ್ ಮಧ್ಯೆ ಮುನಿಸಿದೆ. ಇದನ್ನು ಮರೆತು ಇವರು ಚಿತ್ರಕ್ಕಾಗಿ ಪರಸ್ಪರ ಬೆಂಬಲಕ್ಕೆ ನಿಂತಿದ್ದಾರೆ.

ಪವನ್ ಕಲ್ಯಾಣ್​​ಗೆ ಧನ್ಯವಾದ ಹೇಳಿದ ಅಲ್ಲು ಅರ್ಜುನ್; ನಡೆಯಿತು ಅಚ್ಚರಿಯ ಬೆಳವಣಿಗೆ
ಅಲ್ಲು ಅರ್ಜುನ್-ಪವನ್ ಕಲ್ಯಾಣ್
ರಾಜೇಶ್ ದುಗ್ಗುಮನೆ
|

Updated on: Dec 03, 2024 | 9:57 AM

Share

ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಕಾರಣದಿಂದಲೇ ಸಿನಿಮಾಗೆ ಭರ್ಜರಿ ಹೈಪ್ ಸೃಷ್ಟಿ ಆಗಿದೆ. ಆಂಧ್ರಪ್ರದೇಶ ಭಾಗದಲ್ಲಿ ಸಿನಿಮಾ ಟಿಕೆಟ್ ದರ ಹೆಚ್ಚಿಸಲು ಒಪ್ಪಿಗೆ ಕೊಡಲಾಗಿದೆ. ಈ ವಿಚಾರವಾಗಿ ಅಲ್ಲು ಅರ್ಜುನ್ ಅವರು ಪೋಸ್ಟ್ ಮಾಡಿದ್ದಾರೆ. ಈ ವೇಳೆ ಅವರು ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೂ ಧನ್ಯವಾದ ಹೇಳಿದ್ದಾರೆ.

ಕರ್ನಾಟಕದಲ್ಲಿ ಟಿಕೆಟ್ ದರವನ್ನು ಬೇಕಾಬಿಟ್ಟಿ ಹೆಚ್ಚಿಸಲಾಗುತ್ತದೆ. ಆದರೆ, ಆಂಧ್ರ, ತೆಲಂಗಾಣ ಹಾಗೂ ತಮಿಳುನಾಡು ಭಾಗದಲ್ಲಿ ಆ ರೀತಿ ಇಲ್ಲ. ಅಲ್ಲಿ ಸರ್ಕಾರ ಒಪ್ಪಿಗೆ ಕೊಟ್ಟರೆ ಮಾತ್ರ ಸಿನಿಮಾ ಟಿಕೆಟ್ ಬೆಲೆ ಹೆಚ್ಚಿಸಬಹುದು. ಅದೂ ಸರ್ಕಾರ ನಿಗದಿ ಮಾಡಿದ ಮಿತಿಯಲ್ಲೇ ಇರಬೇಕು. ಈಗ ಆಂಧ್ರ ಪ್ರದೇಶದಲ್ಲಿ ‘ಪುಷ್ಪ 2’ ಚಿತ್ರಕ್ಕೆ ಟಿಕೆಟ್ ಬೆಲೆ ಹೆಚ್ಚಿಸಲು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಪವನ್ ಕಲ್ಯಾಣ್ ಅವರು ಚಿತ್ರರಂಗದವರು. ಅವರಿಗೆ ಚಿತ್ರರಂಗದಲ್ಲಾಗುವ ಬೆಳವಣಿಗೆಗಳ ಬಗ್ಗೆ ಅರಿವಿದೆ. ಯಾವ ಕ್ರಮ ಸಿನಿಮಾ ರಂಗಕ್ಕೆ ಸಹಕಾರಿ ಆಗುತ್ತದೆ ಎನ್ನುವುದು ತಿಳಿದಿದೆ. ‘ಪುಷ್ಪ 2’ ಬಿಗ್ ಬಜೆಟ್ ಸಿನಿಮಾ. ನಿರ್ಮಾಪಕರು ಲಾಭ ಕಾಣಬೇಕು ಎಂದರೆ ಸಿನಿಮಾ ಹೆಚ್ಚಿನ ಕಲೆಕ್ಷನ್ ಮಾಡಬೇಕು. ಹೀಗಾಗಿ, ಟಿಕೆಟ್ ದರ ಹೆಚ್ಚಿಸಲು ಅವರ ಸರ್ಕಾರ ಅವಕಾಶ ನೀಡಿದೆ. ಅಲ್ಲು ಅರ್ಜುನ್ ಹಾಗೂ ಪವನ್ ಕಲ್ಯಾಣ್ ಮಧ್ಯೆ ಮುನಿಸಿದೆ. ಇದನ್ನು ಮರೆತು ಇವರು ಚಿತ್ರಕ್ಕಾಗಿ ಪರಸ್ಪರ ಬೆಂಬಲಕ್ಕೆ ನಿಂತಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರೋ ಅಲ್ಲು ಅರ್ಜುನ್, ‘ಟಿಕೆಟ್ ಬೆಲೆ ಹೆಚ್ಚಿಸಲು ಅವಕಾಶ ನೀಡಿದ ಆಂಧ್ರ ಸರ್ಕಾರಕ್ಕೆ ಧನ್ಯವಾದ. ಈ ಪ್ರಗತಿಪರ ನಿರ್ಧಾರವು ತೆಲುಗು ಚಿತ್ರರಂಗದ ಬೆಳವಣಿಗೆ ಮತ್ತು ಏಳಿಗೆಗೆ ನೀವು ತೋರುತ್ತಿರುವ ಬದ್ಧತೆಯನ್ನು ತೋರಿಸುತ್ತದೆ’ ಎಂದಿದ್ದಾರೆ ಅಲ್ಲು ಅರ್ಜುನ್.

‘ಚಿತ್ರರಂಗದ ಕಲ್ಯಾಣಕ್ಕೆ ಸಹಕರಿಸಿದ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ಧನ್ಯವಾದ’ ಎಂದು ಅವರು ಬರೆದುಕೊಂಡಿದ್ದಾರೆ. ಸದ್ಯ ಈ ಟ್ವೀಟ್ ವೈರಲ್ ಆಗಿದೆ.

ಇದನ್ನೂ ಓದಿ: ‘ನಿನ್ನ ಬಿಟ್ಟು ಯಾರನ್ನೂ ನೋಡಿಲ್ಲ’: ರಶ್ಮಿಕಾ ಬಗ್ಗೆ ಅಲ್ಲು ಅರ್ಜುನ್ ರೊಮ್ಯಾಂಟಿಕ್ ಮಾತು

ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾಗೆ ಸುಕುಮಾರ್ ನಿರ್ದೇಶನ ಇದೆ. ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಡಾಲಿ ಧನಂಜಯ್ ಮೊದಲಾದವರು ನಟಿಸಿದ್ದಾರೆ. ಡಿಸೆಂಬರ್ 5ರಂದು ಸಿನಿಮಾ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.