ನಟ ನಾಗ ಚೈತನ್ಯ (Naga Chaitanya) ಮತ್ತು ನಟಿ ಸಮಂತಾ ರುತ್ ಪ್ರಭು ಅವರು ವಿಚ್ಛೇದನ ಪಡೆದಿದ್ದು ಬೇಸರದ ಸಂಗತಿ. ಅವರಿಬ್ಬರು ದೂರಾಗಿದ್ದಕ್ಕೆ ಕಾರಣ ಏನು ಎಂಬುದು ಸದ್ಯಕ್ಕಂತೂ ನಿಗೂಢವಾಗಿಯೇ ಉಳಿದುಕೊಂಡಿದೆ. ಡಿವೋರ್ಸ್ ಪಡೆದ ಬಳಿಕ ಸಮಂತಾ (Samantha) ಅವರು ಸಿಂಗಲ್ ಆಗಿದ್ದಾರೆ. ಆದರೆ ನಾಗ ಚೈತನ್ಯ ಅವರು ಏಕಾಂಗಿ ಆಗಿಲ್ಲ. ಅವರ ಜೀವನದಲ್ಲಿ ಬೇರೆ ನಟಿಯ ಎಂಟ್ರಿ ಆಗಿದೆ. ನಟಿ ಶೋಭಿತಾ ಧುಲಿಪಾಲ (Sobhita Dhulipala) ಜೊತೆ ಅವರು ಆಗಾಗ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರೂ ಜೊತೆಯಾಗಿ ವಾಸಿಸುತ್ತಿದ್ದಾರೆ ಎಂಬ ಗುಮಾನಿ ಇದೆ. ಈಗ ಶೋಭಿತಾ ಧುಲಿಪಾಲ ಮತ್ತು ನಾಗ ಚೈತನ್ಯ ಅವರು ಜೊತೆಯಾಗಿರುವ ಇನ್ನೊಂದು ಫೋಟೋ ವೈರಲ್ ಆಗಿದೆ.
ನಾಗ ಚೈತನ್ಯ ಮತ್ತು ಶೋಭಿತಾ ಧುಲಿಪಾಲ ಅವರ ನಡುವೆ ಆಪ್ತತೆ ಬೆಳೆದಿದೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಆದರೆ ಅವರಿಬ್ಬರು ತಮ್ಮ ಸಂಬಂಧದ ಬಗ್ಗೆ ಓಪನ್ ಆಗಿ ಇನ್ನೂ ಮಾತನಾಡಿಲ್ಲ. ತಮ್ಮಿಬ್ಬರ ನಡುವೆ ಇರುವ ಸಂಬಂಧ ಏನು ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ. ಹಾಗಿದ್ದರೂ ಕೂಡ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಆಗಾಗ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಶೋಭಿತಾ ಧುಲಿಪಾಲ ಅವರು ಹಿಂದಿ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಅವರಿಗೆ 31 ವರ್ಷ ವಯಸ್ಸು. ಸಮಂತಾ ಮತ್ತು ನಾಗ ಚೈತನ್ಯ ಡಿವೋರ್ಸ್ ಪಡೆದ ಬಳಿಕ ನಾಗ ಚೈತನ್ಯ ಜೊತೆ ಶೋಭಿತಾ ಧುಲಿಪಾಲ ಹೆಸರು ತಳುಕು ಹಾಕಿಕೊಂಡಿತು. ವಿದೇಶದ ಹೋಟೆಲ್ಗಳಲ್ಲಿ ಅವರಿಬ್ಬರು ಜೊತೆಯಾಗಿ ಕಾಲ ಕಳೆದಿರುವುದಕ್ಕೆ ಸಾಕ್ಷಿ ಕೂಡ ಸಿಕ್ಕಿದೆ.
ಇದನ್ನೂ ಓದಿ; ನಾಗ ಚೈತನ್ಯ ಮಾಡಿದ ಪರಸ್ತ್ರೀ ಸಹವಾಸದಿಂದಲೇ ಸಮಂತಾ ವಿಚ್ಛೇದನ? ವೈರಲ್ ವಿಡಿಯೋ ಸಾಕ್ಷಿ
ಕೆಲವು ತಿಂಗಳ ಹಿಂದೆ ಲಂಡನ್ನ ರೆಸ್ಟೋರೆಂಟ್ವೊಂದರಲ್ಲಿ ನಾಗ ಚೈತನ್ಯ ಮತ್ತು ಶೋಭಿತಾ ಧುಲಿಪಾಲ ಅವರು ಒಟ್ಟಿಗೆ ಇದ್ದಿದ್ದು ಜಗಜ್ಜಾಹೀರಾಯಿತು. ಆದರೂ ಸಹ ಅವರಿಬ್ಬರು ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿಲ್ಲ. ನಾಗ ಚೈತನ್ಯ ಅವರಿಗೆ ‘ಧೂತ’ ವೆಬ್ ಸಿರೀಸ್ ಮೂಲಕ ಗೆಲುವು ಸಿಕ್ಕಿದೆ. ‘ತಂಡೇಲ್’ ಸಿನಿಮಾದ ಬಿಡುಗಡೆಯಾಗಿ ಅವರು ಕಾದಿದ್ದಾರೆ. ಆ ಸಿನಿಮಾದಲ್ಲಿ ಅವರು ಸಾಯಿ ಪಲ್ಲವಿ ಜೊತೆ ನಟಿಸಿದ್ದಾರೆ. ಬಿಡುಗಡೆಗೂ ಮುನ್ನವೇ ಈ ಸಿನಿಮಾಗೆ ಭರ್ಜರಿ ಡಿಮ್ಯಾಂಡ್ ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.