Samantha: ಸಮಂತಾ ಪವರ್​ಫುಲ್​ ವರ್ಕೌಟ್; ವೈರಲ್​ ಆಗುತ್ತಿದೆ ಹೊಸ ವಿಡಿಯೋ

ಸಮಂತಾ ಅವರು ಅಕ್ಟೋಬರ್​ ತಿಂಗಳಲ್ಲಿ ವಿಚ್ಛೇದನ ಪಡೆದುಕೊಂಡರು. ನಂತರ ಋಷಿಕೇಶಕ್ಕೆ ಅವರು​ ತೆರಳಿದ್ದರು. ಆ ಬಳಿಕ ದುಬೈಗೂ ತೆರಳಿ ರಜೆಯ ಮಜವನ್ನು ಆನಂದಿಸಿದರು. ಡಿಸೆಂಬರ್ ಅಂತ್ಯದ ವೇಳೆಗೆ ಸಮಂತಾ ಗೋವಾ ಟ್ರಿಪ್​ ತೆರಳಿದ್ದರು.

Samantha: ಸಮಂತಾ ಪವರ್​ಫುಲ್​ ವರ್ಕೌಟ್; ವೈರಲ್​ ಆಗುತ್ತಿದೆ ಹೊಸ ವಿಡಿಯೋ
ಸಮಂತಾ
Edited By:

Updated on: Jan 08, 2022 | 7:54 PM

ಸಮಂತಾ ಅವರು ನಾಗ ಚೈತನ್ಯ ಜತೆ ವಿಚ್ಛೇದನ ಪಡೆದುಕೊಂಡು ಕೆಲ ತಿಂಗಳು ಕಳೆದಿದೆ. ಡಿವೋರ್ಸ್​ ಪಡೆದ ನಂತರದಲ್ಲಿ ಸಮಂತಾ ಸುಮ್ಮನೆ ಕೂತಿಲ್ಲ. ಬೇಸರವನ್ನು ಬದಿಗಿಟ್ಟು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ದೇಶ ವಿದೇಶದಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಇದರ ಜತೆಗೆ ಅವರು ವರ್ಕೌಟ್​ ಮಾಡುವುದನ್ನು ಎಂದಿಗೂ ಮರೆಯುತ್ತಿಲ್ಲ. ನಿತ್ಯ ಅವರು ಜಿಮ್​ನಲ್ಲಿ ಸಮಯ ಕಳೆಯುತ್ತಾರೆ. ಈ ಫೋಟೋಗಳನ್ನು ಅವರನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಈಗ ಅವರು ಹಂಚಿಕೊಂಡಿರುವ ಹೊಸ ವಿಡಿಯೋ ಸಾಕಷ್ಟು ವೈರಲ್​ ಆಗಿದೆ. ಇದನ್ನು ನೋಡಿದ ಅಭಿಮಾನಿಗಳು ನಿಜಕ್ಕೂ ಖುಷಿ ಪಟ್ಟಿದ್ದಾರೆ.

ಸಮಂತಾ ಅವರು ಅಕ್ಟೋಬರ್​ ತಿಂಗಳಲ್ಲಿ ವಿಚ್ಛೇದನ ಪಡೆದುಕೊಂಡರು. ನಂತರ ಋಷಿಕೇಶಕ್ಕೆ ಅವರು​ ತೆರಳಿದ್ದರು. ಆ ಬಳಿಕ ದುಬೈಗೂ ತೆರಳಿ ರಜೆಯ ಮಜವನ್ನು ಆನಂದಿಸಿದರು. ಡಿಸೆಂಬರ್ ಅಂತ್ಯದ ವೇಳೆಗೆ ಸಮಂತಾ ಗೋವಾ ಟ್ರಿಪ್​ ತೆರಳಿದ್ದರು. ಇವೆಲ್ಲವುಗಳ ಮಧ್ಯೆ ಸಮಂತಾ ಹಲವು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಹಲವು ಕಥೆಗಳನ್ನು ಅವರು ಕೇಳಿದ್ದು, ಅಧಿಕೃತ ಘೋಷಣೆ ಬಾಕಿ ಇದೆ. ಓರ್ವ ನಟಿಯಾಗಿ ಎಷ್ಟು ಫಿಟ್​ನೆಸ್​ ಕಾಯ್ದುಕೊಳ್ಳಬೇಕೋ ಅದನ್ನು ಸಮಂತಾ ಮಾಡುತ್ತಿದ್ದಾರೆ.

ಸಮಂತಾ ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ತುಂಬಾನೇ ಶ್ರಮವಹಿಸಿ ವರ್ಕೌಟ್​ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅವರ ಫ್ಯಾನ್​ಪೇಜ್​ಗಳು ವಿಡಿಯೋವನ್ನು ಶೇರ್​ ಮಾಡಿಕೊಳ್ಳುತ್ತಿವೆ.

ಐದು ಭಾಷೆಗಳಲ್ಲಿ ತೆರೆಗೆ ಬಂದ ‘ಪುಷ್ಪ’ ಸಿನಿಮಾ ಗೆದ್ದು ಬೀಗಿದೆ. ಕೊರೊನಾ ಮೂರನೇ ಅಲೆ ಕಾಣಿಸಿಕೊಳ್ಳುವ ಮೊದಲೇ ಸಿನಿಮಾ ವಿಶ್ವಾದ್ಯಂತ 300 ಕೋಟಿ ರೂಪಾಯಿ ಬಾಚಿಕೊಂಡಿದೆ. ಇದರಿಂದ ನಿರ್ದೇಶಕ ಸುಕುಮಾರ್ ಹಾಗೂ ನಟ ಅಲ್ಲು ಅರ್ಜುನ್  ಬತ್ತಳಿಕೆಗೆ ಮತ್ತೊಂದು ಗೆಲುವು ದಾಖಲಾಗಿದೆ. ಸಿನಿಮಾ ಗೆಲುವಿನಲ್ಲಿ ಚಿತ್ರದ ವಿಶೇಷ ಹಾಡು ‘ಹೂ ಅಂತೀಯಾ ಮಾವ..’ ಪಾತ್ರ ಕೂಡ ದೊಡ್ಡದಿದೆ. ಈ ಹಾಡಿಗೆ ಡ್ಯಾನ್ಸ್​ ಮಾಡೋದು ಅಷ್ಟು ಸುಲಭದ ಮಾತಾಗಿರಲಿಲ್ಲ. ಸಮಂತಾ ಇದನ್ನು ವಿಡಿಯೋ ಮೂಲಕ ವಿವರಿಸಿದ್ದಾರೆ.

ಸಮಂತಾ ‘ಹೂ ಅಂತೀಯಾ ಮಾವ..’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸಿನಿಮಾ ರಿಲೀಸ್​ಗೆ ತಿಂಗಳು ಇರುವ ಸಂದರ್ಭದಲ್ಲಿ ಈ ಹಾಡಿನಲ್ಲಿ ನಟಿಸೋಕೆ ಸಮಂತಾ ಒಪ್ಪಿಕೊಂಡಿದ್ದರು. ಹೀಗಾಗಿ, ಪ್ರ್ಯಾಕ್ಟೀಸ್​ ಮಾಡೋಕೂ ಹೆಚ್ಚು ಅವಕಾಶ ಇರಲಿಲ್ಲ. ಆದಾಗ್ಯೂ ಸಮಂತಾ ಹೆಚ್ಚು ಸಮಯ ವ್ಯಯಿಸಿ ಈ ಹಾಡಿನ ಹೆಜ್ಜೆ ಕಲಿತಿದ್ದಾರೆ. ಪ್ರ್ಯಾಕ್ಟೀಸ್​ ಹೇಗಿತ್ತು ಮತ್ತು ಸ್ಟೆಪ್​ ಹೇಳಿಕೊಟ್ಟವರು ಯಾರು ಎಂಬುದನ್ನು ವಿವರಿಸಿದ್ದಾರೆ.

ಇದನ್ನೂ ಓದಿ: ‘ನೀವಿಲ್ಲದಿದ್ದರೆ ನಾನೇನು ಮಾಡುತ್ತಿದ್ದೆ’;  ಜೀವನದ ಇಬ್ಬರು ಪ್ರಮುಖ ವ್ಯಕ್ತಿಗಳನ್ನು ಪರಿಚಯಿಸಿದ ಸಮಂತಾ 

ಮತ್ತೆ ಸದ್ದು ಮಾಡಿದ ಸಮಂತಾ; ಒಂದು ಗಂಟೆಯಲ್ಲಿ 20 ಲಕ್ಷ ವೀಕ್ಷಣೆ ಕಂಡ ವಿಡಿಯೋ ಸಾಂಗ್​

 

TV9 Web

TV9 Kannada

Read More
Loading...
Unable to load recommendations.
Follow Us