ಸಮಂತಾಗೂ ಇಷ್ಟವಾಯ್ತು ‘ಹನುಮಾನ್​’ ಸಿನಿಮಾ; ಮನಸಾರೆ ಹೊಗಳಿದ ನಟಿ

ಸೂಪರ್​ ಹೀರೋ ಕಾನ್ಸೆಪ್ಟ್​ನಲ್ಲಿ ‘ಹನುಮಾನ್​’ ಸಿನಿಮಾ ಮೂಡಿಬಂದಿದೆ. ಹನುಮಂತನ ಕೃಪೆಯಿಂದ ಸೂಪರ್​ ಹೀರೋ ಆಗಿ ಬದಲಾಗುವ ಸಾಮಾನ್ಯ ಹಳ್ಳಿ ಹುಡುಗನ ಕಾಲ್ಪನಿಕ ಕಥೆ ಈ ಸಿನಿಮಾದಲ್ಲಿದೆ. ಸಮಂತಾ ರುತ್ ಪ್ರಭು ಅವರು ಈ ಚಿತ್ರಕ್ಕೆ ಭೇಷ್​ ಎಂದಿದ್ದಾರೆ. ಅವರು ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದ ವಿಡಿಯೋ ವೈರಲ್​ ಆಗಿದೆ.

ಸಮಂತಾಗೂ ಇಷ್ಟವಾಯ್ತು ‘ಹನುಮಾನ್​’ ಸಿನಿಮಾ; ಮನಸಾರೆ ಹೊಗಳಿದ ನಟಿ
ತೇಜ ಸಜ್ಜಾ, ಸಮಂತಾ

Updated on: Jan 18, 2024 | 7:00 PM

ನಟಿ ಸಮಂತಾ ರುತ್​ ಪ್ರಭು (Samantha Ruth Prabhu) ಅವರು ಸದ್ಯಕ್ಕೆ ಬ್ರೇಕ್​ ತೆಗೆದುಕೊಂಡಿದ್ದಾರೆ. ಯಾವುದೇ ಹೊಸ ಸಿನಿಮಾವನ್ನು ಅವರು ಒಪ್ಪಿಕೊಳ್ಳುತ್ತಿಲ್ಲ. ಹಾಗಂತ ಚಿತ್ರರಂಗದಿಂದ ಅವರು ದೂರ ಉಳಿದುಕೊಂಡಿಲ್ಲ. ಬಣ್ಣದ ಲೋಕದಲ್ಲಿ ಏನಾಗುತ್ತಿದೆ ಎಂಬುದನ್ನು ಅವರು ಗಮನಿಸುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂದರೆ ಅವರು ‘ಹನುಮಾನ್​’ ಸಿನಿಮಾ (Hanuman Movie) ವೀಕ್ಷಿಸಿರುವುದು. ಇತ್ತೀಚೆಗೆ ಚಿತ್ರಮಂದಿರಕ್ಕೆ ಬಂದು ಸಮಂತಾ ಅವರು ಈ ಸಿನಿಮಾ ನೋಡಿದ್ದಾರೆ. ತೇಜ ಸಜ್ಜಾ ನಟನೆಯ ಈ ಚಿತ್ರ ಅವರಿಗೆ ತುಂಬ ಇಷ್ಟ ಆಗಿದೆ. ಸೋಶಿಯಲ್​ ಮೀಡಿಯಾ ಮೂಲಕ ಅವರು ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ.

ಸೂಪರ್​ ಹೀರೋ ಕಾನ್ಸೆಪ್ಟ್​ನಲ್ಲಿ ‘ಹನುಮಾನ್​’ ಸಿನಿಮಾ ಮೂಡಿಬಂದಿದೆ. ಹನುಮಂತನ ಕೃಪೆಯಿಂದ ಸೂಪರ್​ ಹೀರೋ ಆಗಿ ಬದಲಾಗುವ ಸಾಮಾನ್ಯ ಹಳ್ಳಿ ಹುಡುಗನ ಕಾಲ್ಪನಿಕ ಕಥೆ ಈ ಸಿನಿಮಾದಲ್ಲಿದೆ. ಅನೇಕ ಸೆಲೆಬ್ರಿಟಿಗಳು ‘ಹನುಮಾನ್​’ ಚಿತ್ರವನ್ನು ನೋಡಿ ಹೊಗಳಿದ್ದಾರೆ. ಶಿವರಾಜ್​ಕುಮಾರ್​, ನಂದಮೂರಿ ಬಾಲಕೃಷ್ಣ ಬಳಿಕ ಸಮಂತಾ ರುತ್ ಪ್ರಭು ಕೂಡ ಈ ಚಿತ್ರಕ್ಕೆ ಭೇಷ್​ ಎಂದಿದ್ದಾರೆ. ಅವರು ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದ ವಿಡಿಯೋ ವೈರಲ್​ ಆಗಿದೆ.

ಇದನ್ನೂ ಓದಿ: ‘ಹನುಮಾನ್​’ ಸಿನಿಮಾ ನೋಡಿ ಭೇಷ್​ ಎಂದ ಬಾಲಯ್ಯ; ಹೆಚ್ಚಿತು ಚಿತ್ರತಂಡದ ಬಲ

ನಟನೆಯಿಂದ ಬ್ರೇಕ್​ ತೆಗೆದುಕೊಂಡಿದ್ದರೂ ಕೂಡ ಸಮಂತಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಆ ಮೂಲಕ ಅಭಿಮಾನಿಗಳ ಜೊತೆ ಅವರು ಸಂಪರ್ಕದಲ್ಲಿ ಇದ್ದಾರೆ. ‘ಹನುಮಾನ್​’ ವಿಮರ್ಶೆಯನ್ನು ಅವರು ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ತಿಳಿಸಿದ್ದಾರೆ. ‘ನಮ್ಮನ್ನು ಪುನಃ ಮಕ್ಕಳಂತೆ ಫೀಲ್​ ಮಾಡಿಸುವ ಸಿನಿಮಾಗಳೇ ಅತ್ಯುತ್ತಮ ಸಿನಿಮಾಗಳು’ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಹನುಮಾನ್​’ ಚಿತ್ರವನ್ನು ಮಾಸ್ಟರ್​ಪೀಸ್​ ಎಂದು ಹೊಗಳಿದ ಕೇಂದ್ರ ಸಚಿವ ಅನುರಾಗ್​ ಠಾಕೂರ್​

‘ಹನುಮಾನ್​’ ಸಿನಿಮಾದ ದೃಶ್ಯಗಳು, ಕಾಮಿಡಿ, ಸಂಗೀತ, ಎಲ್ಲ ನಟರ ಅಭಿನಯ ಮುಂತಾದ ವಿಚಾರಗಳನ್ನು ಸಮಂತಾ ಇಷ್ಟಪಟ್ಟಿದ್ದಾರೆ. ನಿರ್ದೇಶಕ ಪ್ರಶಾಂತ್​ ವರ್ಮಾ ಅವರ ಕೆಲಸಕ್ಕೆ ಅವರು ಮೆಚ್ಚುಗೆ ಸೂಚಿಸಿದ್ದಾರೆ. ‘ಹನುಮಾನ್​’ ಚಿತ್ರದ ಮುಂದಿನ ಚಾಪ್ಟರ್​ಗಾಗಿ ತಾವು ಕಾಯುತ್ತಿರುವುದಾಗಿ ಹೇಳಿದ್ದಾರೆ. ಮುಖ್ಯ ಪಾತ್ರ ಮಾಡಿರುವ ತೇಜ ಸಜ್ಜಾಗೆ ಸಮಂತಾ ಕಡೆಯಿಂದ ಫುಲ್​ ಮಾರ್ಕ್ಸ್​ ಸಿಕ್ಕಿದೆ. ವರಲಕ್ಷ್ಮಿ ಶರತ್​ಕುಮಾರ್​, ವಿಲನ್​ ಪಾತ್ರ ಮಾಡಿದ ವಿನಯ್​ ರೈ ಅವರಿಗೆ ಸಮಂತಾ ಚೆಪ್ಪಾಳೆ ತಟ್ಟಿದ್ದಾರೆ. ಇನ್ನು, ಕೇಂದ್ರ ಸಚಿವ ಅನುರಾಗ್​ ಠಾಕೂರ್​ ಕೂಡ ಈ ಚಿತ್ರತಂಡದ ಕೆಲಸವನ್ನು ಶ್ಲಾಘಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us