AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹನುಮಾನ್​’ ಸಿನಿಮಾ ನೋಡಿ ಭೇಷ್​ ಎಂದ ಬಾಲಯ್ಯ; ಹೆಚ್ಚಿತು ಚಿತ್ರತಂಡದ ಬಲ

ಬಾಲಯ್ಯ ಅವರಿಗಾಗಿ ‘ಹನುಮಾನ್​’ ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಅವರ ಜೊತೆ ಚಿತ್ರತಂಡದವರು ಕೂಡ ಇದ್ದರು. ನಿರ್ದೇಶನ, ಛಾಯಾಗ್ರಹಣ, ವಿಎಫ್​ಎಕ್ಸ್​, ಸಂಗೀತ ಮುಂತಾದ ವಿಭಾಗವನ್ನು ಬಾಲಯ್ಯ ಶ್ಲಾಘಿಸಿದ್ದಾರೆ. ಎಲ್ಲ ಕಲಾವಿದರ ನಟನೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಸಿನಿಮಾ ಗೆದ್ದಿದ್ದಕ್ಕೆ ಅವರು ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

‘ಹನುಮಾನ್​’ ಸಿನಿಮಾ ನೋಡಿ ಭೇಷ್​ ಎಂದ ಬಾಲಯ್ಯ; ಹೆಚ್ಚಿತು ಚಿತ್ರತಂಡದ ಬಲ
‘ಹನುಮಾನ್​’ ಚಿತ್ರತಂಡದ ಜೊತೆ ಬಾಲಯ್ಯ
ಮದನ್​ ಕುಮಾರ್​
|

Updated on: Jan 18, 2024 | 12:23 PM

Share

ಚಿತ್ರಮಂದಿರಗಳಲ್ಲಿ ಹನುಮಾನ್​’ ಸಿನಿಮಾ (Hanuman Movie) ಸದ್ದು ಮಾಡುತ್ತಿದೆ. ಸೂಪರ್​ ಹೀರೋ ಕಾನ್ಸೆಪ್ಟ್​ ಹೊಂದಿರುವ ಈ ಚಿತ್ರವನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಯುವ ನಟ ತೇಜ ಸಜ್ಜಾ (Teja Sajja) ಅವರು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಈಗಾಗಲೇ ಶಿವರಾಜ್​ಕುಮಾರ್​ ಅವರು ಈ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಅವರು ಚಿತ್ರ ನೋಡುವುದಾಗಿ ಹೇಳಿದ್ದಾರೆ. ಈಗ ಟಾಲಿವುಡ್​ನ ಸ್ಟಾರ್​ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರು ‘ಹನುಮಾನ್​’ ಚಿತ್ರ ನೋಡಿ ಭೇಷ್​ ಎಂದಿದ್ದಾರೆ. ಅವರ ಬೆಂಬಲದಿಂದಾಗಿ ಸಿನಿಮಾ ತಂಡಕ್ಕೆ ಹೊಸ ಚೈತನ್ಯ ಬಂದಂತೆ ಆಗಿದೆ.

ಬಾಕ್ಸ್​ ಆಫೀಸ್​ನಲ್ಲಿ ‘ಹನುಮಾನ್​’ ಸಿನಿಮಾ ಉತ್ತಮವಾಗಿ ಕಲೆಕ್ಷನ್​ ಮಾಡುತ್ತಿದೆ. ಅದರ ಜೊತೆಗೆ ಸೆಲೆಬ್ರಿಟಿಗಳ ಮೆಚ್ಚುಗೆ ಸಿಗುತ್ತಿರುವುದರಿಂದ ಗಳಿಕೆ ಹೆಚ್ಚುತ್ತಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆ ಆದ ಈ ಸಿನಿಮಾವನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ವಿಶೇಷವಾಗಿ ಆಂಜನೇಯನ ಭಕ್ತರಿಗೆ ಈ ಸಿನಿಮಾ ಮೆಚ್ಚುಗೆ ಆಗುತ್ತಿದೆ. ‘ಈ ಸಿನಿಮಾ ಗೆಲ್ಲುತ್ತದೆ ಅಂತ ನನಗೆ ಮೊದಲೇ ಭರವಸೆ ಇತ್ತು’ ಎಂದು ಬಾಲಯ್ಯ ಹೇಳಿದ್ದಾರೆ.

ಇದನ್ನೂ ಓದಿ: ‘ಹನುಮಾನ್’ ಸಿನಿಮಾ ನೋಡಿ ಶಿವಣ್ಣ ಹೇಳಿದ್ದು ಹೀಗೆ

ಬಾಲಯ್ಯ ಅವರಿಗಾಗಿ ‘ಹನುಮಾನ್​’ ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಅವರ ಜೊತೆ ಚಿತ್ರತಂಡದವರು ಕೂಡ ಇದ್ದರು. ‘ಸಿನಿಮಾ ತುಂಬ ಚೆನ್ನಾಗಿದೆ. ಇದರಲ್ಲಿ ಒಳ್ಳೆಯ ಕಂಟೆಂಟ್​ ಇದೆ. ಅದನ್ನು ನಿರ್ದೇಶಕರು ಉತ್ತಮವಾಗಿ ಪ್ರಸ್ತುತಪಡಿಸಿದ್ದಾರೆ. ಕಣ್ಣಿಗೆ ಹಬ್ಬದಂತಿದೆ. ಆಂಜನೇಯ ಸ್ವಾಮಿ, ಶ್ರೀರಾಮನ ಕೃಪೆ ಇದೆ’ ಎಂದು ಹೇಳಿರುವ ಬಾಲಯ್ಯ ಅವರು ನಿರ್ದೇಶನ, ಛಾಯಾಗ್ರಹಣ, ವಿಎಫ್​ಎಕ್ಸ್​, ಸಂಗೀತ ಮುಂತಾದ ವಿಭಾಗವನ್ನು ಶ್ಲಾಘಿಸಿದ್ದಾರೆ.

ಈ ಸಿನಿಮಾದಲ್ಲಿ ತೇಜ ಸಜ್ಜಾ ಅವರಿಗೆ ಜೋಡಿಯಾಗಿ ಅಮೃತಾ ಐಯ್ಯರ್​ ನಟಿಸಿದ್ದಾರೆ. ಕನ್ನಡದ ನಟ ರಾಜ್​ ದೀಪಕ್​ ಶೆಟ್ಟಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ವರಲಕ್ಷ್ಮೀ ಶರತ್​ ಕುಮಾರ್​ ಅವರು ಹೀರೋ ಅಕ್ಕನ ಪಾತ್ರದಲ್ಲಿ ಮಿಂಚಿದ್ದಾರೆ. ಎಲ್ಲ ಕಲಾವಿದರ ನಟನೆಗೆ ಬಾಲಯ್ಯ ಮೆಚ್ಚುಗೆ ಸೂಚಿಸಿದ್ದಾರೆ. ‘ಹನುಮಾನ್​’ ಸಿನಿಮಾ ಗೆದ್ದಿದ್ದಕ್ಕೆ ಅವರು ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ತಾವು ಎರಡನೇ ಪಾರ್ಟ್​ಗಾಗಿ ಕಾದಿರುವುದಾಗಿ ಅವರು ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್