AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹನುಮಾನ್’ ನಂತರ ಟಾಲಿವುಡ್​ನಲ್ಲಿ ಮತ್ತೊಂದು ಹನುಮ ಭಕ್ತನ ಸಿನಿಮಾ

Hanuman: ಹನುಮಂತನ ಭಕ್ತನ ಕತೆಯುಳ್ಳ ಸೂಪರ್ ಹೀರೋ ಸಿನಿಮಾ ‘ಹನುಮಾನ್’ ಹಿಟ್ ಆಗುತ್ತಿದ್ದಂತೆ, ಅದೇ ಮಾದರಿಯ ಕತೆಯುಳ್ಳ ಇನ್ನೊಂದು ಸಿನಿಮಾದ ಶೂಟಿಂಗ್​ ಚುರುಕುಗೊಂಡಿದೆ.

‘ಹನುಮಾನ್’ ನಂತರ ಟಾಲಿವುಡ್​ನಲ್ಲಿ ಮತ್ತೊಂದು ಹನುಮ ಭಕ್ತನ ಸಿನಿಮಾ
ಮಂಜುನಾಥ ಸಿ.
|

Updated on: Jan 17, 2024 | 9:03 PM

Share

ಇತ್ತೀಚೆಗಷ್ಟೆ ಬಿಡುಗಡೆ ಆದ ತೆಲುಗಿನ ಪ್ಯಾನ್ ಇಂಡಿಯಾ (Pan India) ಸಿನಿಮಾ ‘ಹನುಮಾನ್’ (Hanuman) ಗಮನ ಸೆಳೆಯುತ್ತಿದೆ. ಸೂಪರ್ ಹಿಟ್ ಆಗುವತ್ತ ಮುನ್ನುಗ್ಗುತ್ತಿದೆ. ಆಂಧ್ರ-ತೆಲಂಗಾಣಗಳಲ್ಲಿ ಮಾತ್ರವೇ ಅಲ್ಲದೆ, ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಿಯೂ ಸಿನಿಮಾ ಉತ್ತಮ ಪ್ರದರ್ಶನವನ್ನೇ ಕಾಣುತ್ತಿದೆ. ‘ಹನುಮಾನ್’ ಸಿನಿಮಾ ಹನುಮಂತನ ಭಕ್ತನೊಬ್ಬನ ಕತೆಯಾಗಿದ್ದು, ಸೂಪರ್ ಹೀರೋ ಸಿನಿಮಾ ಆಗಿದೆ. ಸಿನಿಮಾದ ವಿಎಫ್​ಎಕ್ಸ್, ಗ್ರಾಫಿಕ್ಸ್​ ಬಗ್ಗೆ ಮೆಚ್ಚುಗೆ ಕೇಳಿ ಬರುತ್ತಿದೆ. ‘ಹನುಮಾನ್’ ಸಿನಿಮಾ ಹಿಟ್ ಆಗುತ್ತಿದ್ದಂತೆ ಟಾಲಿವುಡ್​ನಲ್ಲಿ ‘ಸ್ವಯಂಭು’ ಹೆಸರಿನ ಸಿನಿಮಾ ಕುರಿತು ಚರ್ಚೆ ಆರಂಭವಾಗಿದೆ.

ನಿಖಿಲ್ ಸಿದ್ಧಾರ್ಥ್ ಹಾಗೂ ಸಂಯುಕ್ತ ಮೆನನ್ ನಟಿಸುತ್ತಿರುವ ‘ಸ್ವಯಂಭು’ ಸಿನಿಮಾದ ಮುಹೂರ್ತ ಕಳೆದ ವರ್ಷವೇ ನಡೆದಿದೆ. ಈ ಸಿನಿಮಾ ಸಹ ಹನುಮಾನ್ ಭಕ್ತನೊಬ್ಬನ ಕತೆಯನ್ನು ಒಳಗೊಂಡಿದೆ. ಆದರೆ ಕೆಲವು ಕಾರಣಗಳಿಂದ ಈ ಸಿನಿಮಾ ತಡವಾಗಿತ್ತು. ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿ, ಮುಹೂರ್ತ ಆಗಿತ್ತು. ಆದರೆ ಪ್ರಾಜೆಕ್ಟ್ ಬಹಳ ನಿಧಾನವಾಗಿ ಸಾಗುತ್ತಿತ್ತು. ಇದೀಗ ‘ಹನುಮಾನ್’ ಸಿನಿಮಾ ಹಿಟ್ ಆದ ಬೆನ್ನಲ್ಲೆ ಈ ಸಿನಿಮಾಕ್ಕೆ ವೇಗ ದೊರೆತಿದೆ.

ನಿಖಿಲ್ ಸಿದ್ಧಾರ್ಥ್ ಇತ್ತೀಚೆಗೆ ಇದೇ ಮಾದರಿಯ ಸಿನಿಮಾಗಳನ್ನೇ ಒಂದರ ಹಿಂದೊಂದರಂತೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಶ್ರೀಕೃಷ್ಣನ ಕತೆಯನ್ನು ಒಳಗೊಂಡ ‘ಕಾರ್ತಿಕೇಯ 2’ ಸಿನಿಮಾದಲ್ಲಿ ನಿಖಿಲ್ ನಟಿಸಿದ್ದರು. ಆ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಇದೀಗ ‘ಸ್ವಯಂಭು’ ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭ ಮಾಡಿರುವ ಸಿದ್ಧಾರ್ಥ್, ಸಿನಿಮಾದ ಅಪ್​ಡೇಟ್ ಅನ್ನು ನಿರ್ಮಾಣ ಸಂಸ್ಥೆ ಹಂಚಿಕೊಂಡಿದೆ.

ಇದನ್ನೂ ಓದಿ:ಶಿವರಾಜ್​ಕುಮಾರ್​ ಬಳಿಕ ‘ಹನುಮಾನ್​’ ಸಿನಿಮಾ ನೋಡಲಿರುವ ಸಂಸದ ತೇಜಸ್ವಿ ಸೂರ್ಯ

ನಿಖಿಲ್ ಕುದುರೆ ಓಡಿಸುತ್ತಿರುವ ವಿಡಿಯೋ ಒಂದನ್ನು ಕಾಕಿನಾಡ ಟಾಕೀಸ್ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ‘ನಮ್ಮ ‘ಸ್ವಯಂಭು’ ಸಿನಿಮಾದ ಚಿತ್ರೀಕರಣ ಸಾಗಿದೆ. ಸಿನಿಮಾದ ಕೆಲವು ಮುಖ್ಯ ಭಾಗಗಳ ಚಿತ್ರೀಕರಣ ಈಗಾಗಲೇ ಮುಗಿದಿದೆ. ಈ ಸಿನಿಮಾದಲ್ಲಿ ನಿಖಿಲ್, ಹನುಮಾನ್ ಭಕ್ತನ ಪಾತ್ರದಲ್ಲಿ ನಟಿಸುತ್ತಿದ್ದಾರೆ’ ಎಂದು ಮಾಹಿತಿ ಹಂಚಿಕೊಳ್ಳಲಾಗಿದೆ. ಈ ಸಿನಿಮಾಕ್ಕೆ ಕನ್ನಡದ ರವಿ ಬಸ್ರೂರು ಸಂಗೀತ ನೀಡಿರುವುದು ವಿಶೇಷ. ಈ ಸಿನಿಮಾ ರಾಜರ ಕಾಲದಲ್ಲಿ ನಡೆಯುವ ಕತೆಯನ್ನು ಒಳಗೊಂಡಿದೆ.

ನಿಖಿಲ್ ಸಿದ್ಧಾರ್ಥ್, ದೇವರು, ದೇಶ, ಧರ್ಮ ಈ ರೀತಿಯ ವಿಷಯಗಳನ್ನೇ ಸಿನಿಮಾಕ್ಕೆ ಇತ್ತೀಚೆಗೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ‘ಕಾರ್ತಿಕೇಯ’ ಸಿನಿಮಾದ ಮೂಲಕ ಗೆಲುವು ಸಾಧಿಸಿದ ನಿಖಿಲ್, ಅದಾದ ಬಳಿಕ ಸುಭಾಷ್ ಚಂದ್ರ ಭೋಸ್ ರ ಕುರಿತ ಅಂಶಗಳನ್ನು ಹೊಂದಿದ್ದ ‘ಸ್ಪೈ’ ಸಿನಿಮಾದಲ್ಲಿ ನಟಿಸಿದ್ದರು. ಸುಭಾಷ್ ಚಂದ್ರ ಭೋಸ್​ರ ಜೀವನ ಕುರಿತ ಫೈಲ್​ಗಳನ್ನು ತರುವ ಗೂಢಚಾರಿಯ ಪಾತ್ರ ಅವರದ್ದು. ಇದೀಗ ಸ್ವಾತಂತ್ರ್ಯ ಹೋರಾಟದ ಕತೆಯುಳ್ಳ ‘ದಿ ಇಂಡಿಯಾ ಹೌಸ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ಹನುಮಂತನ ಭಕ್ತನ ಸಿನಿಮಾ ‘ಸ್ವಯಂಭು’ನಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ