- Kannada News Photo gallery Priyanka Chopra Daughter malti marie chopra jonas Here is her Cute Photos
ಈಕೆ ಸ್ಟಾರ್ ನಟಿಯ ಮಗಳು; ಯಾರೆಂದು ಪತ್ತೆ ಹಚ್ಚುತ್ತೀರಾ?
ಮಕ್ಕಳು ಜನಿಸಿದ ಬಳಿಕ ಕೆಲವು ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ಳುತ್ತಾರೆ. ಇನ್ನೂ ಕೆಲವರು ಅವರ ಮುಖ ತೋರಿಸಲು ಹಿಂದೇಟು ಹಾಕುತ್ತಾರೆ. ಈಗ ಸ್ಟಾರ್ ನಟಿಯ ಮಗಳ ಫೋಟೋ ವೈರಲ್ ಆಗಿದೆ.
Updated on: Jan 18, 2024 | 11:47 AM

ಮಕ್ಕಳು ಜನಿಸಿದ ಬಳಿಕ ಕೆಲವು ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ಳುತ್ತಾರೆ. ಇನ್ನೂ ಕೆಲವರು ಅವರ ಮುಖ ತೋರಿಸಲು ಹಿಂದೇಟು ಹಾಕುತ್ತಾರೆ. ಈಗ ಸ್ಟಾರ್ ನಟಿಯ ಮಗಳ ಫೋಟೋ ವೈರಲ್ ಆಗಿದೆ.

ಇವಳು ನಟಿ ಪ್ರಿಯಾಂಕಾ ಚೋಪ್ರಾ ಮಗಳು ಮಾಲ್ತಿ ಮೇರಿ ಜೋನಸ್ ಚೋಪ್ರಾ. ಇವಳ ಫೋಟೋಗಳನ್ನು ನಟಿ ಪ್ರಿಯಾಂಕಾ ಚೋಪ್ರಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಪ್ರಿಯಾಂಕಾ ಚೋಪ್ರಾ ಹಾಗೂ ಮೇರಿ ದೇವಸ್ಥಾನಕ್ಕೆ ತೆರಳಿದ್ದಾರೆ. ಅಲ್ಲಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ನಿಕ್ ಕೂಡ ಭಾಗಿ ಆಗಿದ್ದರು. ಭಕ್ತಿಯಿಂದ ದೇವರ ಎದುರು ಇವರು ನಿಂತಿದ್ದಾರೆ.

ಪ್ರಿಯಾಂಕಾ ಚೋಪ್ರಾ ಅವರು ನಿಕ್ ಜೋನಸ್ನ ಮದುವೆ ಆದ ಬಳಿಕ ಹಿಂದೂ ಹಾಗೂ ಕ್ರೈಸ್ತ ಧರ್ಮ ಎರಡೂ ಸಂಪ್ರದಾಯವನ್ನು ಫಾಲೋ ಮಾಡುತ್ತಿದ್ದಾರೆ. ಹಿಂದೂ ಹಬ್ಬಗಳನ್ನು ಅವರು ಆಚರಿಸುತ್ತಾರೆ.

ಪ್ರಿಯಾಂಕಾ ಚೋಪ್ರಾ ಅವರು ಬಾಡಿಗೆ ತಾಯ್ತನದ ಮೂಲಕ ಮಗಳನ್ನು ಪಡೆದರು. ಅವಧಿಗೂ ಮೊದಲೇ ಮಾಲ್ತಿ ಜನಿಸಿದಳು. ಈಗ ಅವಳು ಆರೋಗ್ಯವಾಗಿದ್ದಾಳೆ.

ಸದ್ಯ ಪ್ರಿಯಾಂಕಾ ಅಮೆರಿಕದಲ್ಲಿ ಸೆಟಲ್ ಆಗಿದ್ದಾರೆ. ಮಗಳ ಆರೈಕೆಯ ಜೊತೆ ಸಿನಿಮಾ ಕೆಲಸಗಳಲ್ಲೂ ಅವರು ತೊಡಗಿಕೊಂಡಿದ್ದಾರೆ. ಹಲವು ಇಂಗ್ಲಿಷ್ ಸೀರಿಸ್ ಹಾಗೂ ಸಿನಿಮಾಗಳನ್ನು ಮಾಡುತ್ತಿದ್ದಾರೆ.




