Samantha: ಮುಂಬೈನಲ್ಲಿ 3 ಬೆಡ್​ ರೂಂ ಮನೆ ಖರೀದಿಸಿದ ನಟಿ ಸಮಂತಾ; ಇದರ ಬೆಲೆ ಎಷ್ಟು?

Samantha Ruth Prabhu: ಮುಂಬೈನಲ್ಲಿ ಸಮಂತಾ ಅವರ ಸಿನಿಮಾ ಚಟುವಟಿಕೆಗಳು ಹೆಚ್ಚಾಗಿವೆ. ಇದಕ್ಕೆಲ್ಲ ಅನುಕೂಲ ಆಗಲಿ ಎಂಬ ಕಾರಣಕ್ಕೆ ಅವರು ಅಲ್ಲಿಯೇ ಐಷಾರಾಮಿ ಮನೆ ಖರೀದಿಸಿದ್ದಾರೆ.

Samantha: ಮುಂಬೈನಲ್ಲಿ 3 ಬೆಡ್​ ರೂಂ ಮನೆ ಖರೀದಿಸಿದ ನಟಿ ಸಮಂತಾ; ಇದರ ಬೆಲೆ ಎಷ್ಟು?
ಸಮಂತಾ

Updated on: Feb 08, 2023 | 3:31 PM

ನಟಿ ಸಮಂತಾ ರುತ್​ ಪ್ರಭು (Samantha Ruth Prabhu) ಅವರಿಗೆ ಚಿತ್ರರಂಗದಲ್ಲಿ ಸಖತ್​ ಬೇಡಿಕೆ ಇದೆ. ಮೊದಲು ಅವರು ಹೈದರಾಬಾದ್​ನಲ್ಲಿ ವಾಸಿಸುತ್ತಿದ್ದರು. ಆದರೆ ಇತ್ತೀಚಿಗೆ ಮುಂಬೈನಲ್ಲಿ ಹೆಚ್ಚಾಗಿ ಇರುತ್ತಿದ್ದಾರೆ. ಪತಿ ನಾಗಚೈತನ್ಯಗೆ ವಿಚ್ಛೇದನ ನೀಡಿದ ಬಳಿಕ ಅವರು ಮುಂಬೈ ಕಡೆಗೆ ಮುಖ ಮಾಡಿದರು. ಈಗ ಲೇಟೆಸ್ಟ್​ ಮಾಹಿತಿಯೊಂದು ಕೇಳಿಬಂದಿದೆ. ಮುಂಬೈನಲ್ಲಿ ಸಮಂತಾ ರುತ್​ ಪ್ರಭು ಹೊಸ ಮನೆ ಖರೀದಿಸಿದ್ದಾರೆ ಎಂದು ವರದಿ ಆಗಿದೆ. 3 ಬೆಡ್​ ರೂಂ​ ಇರುವ ಈ ಅಪಾರ್ಟ್​ಮೆಂಟ್​ನಲ್ಲಿ ಅವರೀಗ ವಾಸಿಸುತ್ತಿ​ದಾರೆ. ಇದಕ್ಕಾಗಿ ಅವರು 15 ಕೋಟಿ ರೂಪಾಯಿ ನೀಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಸಮಂತಾ ಅವರು ಸೂರ್ಯಾಸ್ತದ ಫೋಟೋ ಹಂಚಿಕೊಂಡಿದ್ದರು. ಅದು ಅವರ ಹೊಸ ಮನೆಯ (Samantha New Apartment) ಬಾಲ್ಕನಿಯಲ್ಲಿ ತೆಗೆದ ಫೋಟೋ ಎಂದು ಹೇಳಲಾಗುತ್ತಿದೆ.

ಸಮಂತಾ ರುತ್​ ಪ್ರಭು ಅವರು ತೆಲುಗು ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಹಿಂದಿ ಭಾಷೆಯ ಪ್ರಾಜೆಕ್ಟ್​ಗಳನ್ನೂ ಅವರು ಒಪ್ಪಿಕೊಳ್ಳುತ್ತಿದ್ದಾರೆ. ಹಾಗಾಗಿ ಮುಂಬೈನಲ್ಲಿ ಕೆಲಸ ಮಾಡುವುದು ಅಗತ್ಯವಾಗಿದೆ. ಮೀಟಿಂಗ್​ಗಳ ಕಾರಣದಿಂದಲೂ ಮುಂಬೈನಲ್ಲಿ ಅವರ ಚಟುವಟಿಕೆಗಳು ಹೆಚ್ಚಾಗಿವೆ. ಇದಕ್ಕೆಲ್ಲ ಅನುಕೂಲ ಆಗಲಿ ಎಂಬ ಕಾರಣಕ್ಕೆ ಅವರು ಅಲ್ಲಿಯೇ ಐಷಾರಾಮಿ ಮನೆ ಖರೀದಿಸಿದ್ದಾರೆ.

ಇದನ್ನೂ ಓದಿ: ‘ಖುಷಿ’ ಕಥೆಯಲ್ಲಿ ಬದಲಾವಣೆ ಕೇಳಿದ ಸಮಂತಾ; ನೋ ಎಂದ ನಿರ್ದೇಶಕನಿಗೆ ಡೇಟ್ಸ್ ನಿರಾಕರಿಸಿದ ನಟಿ?

ಇದನ್ನೂ ಓದಿ
Naga Chaitanya: ‘ಸಮಂತಾ ಸಿಕ್ಕರೆ ತಬ್ಬಿಕೊಳ್ತೀನಿ, ಟ್ಯಾಟೂ ತೆಗೆಸಲ್ಲ’: ಹಳೇ ಹೆಂಡತಿ ಬಗ್ಗೆ ನಾಗ ಚೈತನ್ಯ ನೇರ ಮಾತು
Samantha: ನಾಗ ಚೈತನ್ಯ ಜತೆ ವಾಸಿಸಿದ್ದ ಮನೆಯನ್ನು ದುಬಾರಿ ಬೆಲೆ ಕೊಟ್ಟು ಖರೀದಿಸಿದ ಸಮಂತಾ; ಏನಿದು ಸೆಂಟಿಮೆಂಟ್​?
Samantha: ‘ನಾಗ ಚೈತನ್ಯಗೆ ಡಿವೋರ್ಸ್​ ನೀಡಿದ ಬಳಿಕ ಕಷ್ಟ ಆಯ್ತು’; ಕಡೆಗೂ ನಿಜ ಒಪ್ಪಿಕೊಂಡ ಸಮಂತಾ
‘ಊ ಅಂಟಾವಾ ಮಾವ..’ ಎಂದು ಸಖತ್ ಆಗಿ ಸ್ಟೆಪ್ ಹಾಕಿದ ಸಮಂತಾ-ಅಕ್ಷಯ್ ಕುಮಾರ್

ವೈಯಕ್ತಿಕ ಜೀವನದಲ್ಲಿ ಸಮಂತಾ ಅವರು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ವಿಚ್ಛೇದನ ಪಡೆಯುತ್ತಿದ್ದಂತೆಯೇ ಅವರಿಗೆ ಅನಾರೋಗ್ಯ ಕಾಡಲು ಶುರುವಾಯಿತು. ಇನ್ನೂ ಅವರು ಅದರಿಂದ ಪೂರ್ತಿಯಾಗಿ ಗುಣಮುಖರಾಗಿಲ್ಲ. ಅದರ ನಡುವೆಯೂ ಸಿನಿಮಾ ಕೆಲಸಗಳನ್ನು ಮುಗಿಸುತ್ತಾ, ವರ್ಕೌಟ್​ ಮಾಡುತ್ತಾ ಆ್ಯಕ್ಟೀವ್ ಆಗಿರಲು ಪ್ರಯತ್ನಿಸುತ್ತಿದ್ದಾರೆ.

‘ಶಾಕುಂತಲಂ’ ರಿಲೀಸ್ ದಿನಾಂಕ ಮುಂದಕ್ಕೆ:

ಸಮಂತಾ ನಟನೆಯ ‘ಶಾಕುಂತಲಂ’ ಸಿನಿಮಾಗಾಗಿ ಅಭಿಮಾನಿಗಳು ಕಾದಿದ್ದಾರೆ. ಫೆಬ್ರವರಿ 17ರಂದು ಈ ಚಿತ್ರ ರಿಲೀಸ್ ಆಗಲಿದೆ ಎಂದು ಚಿತ್ರತಂಡದವರು ಘೋಷಣೆ ಮಾಡಿದ್ದರು. ಚಿತ್ರದ ಟ್ರೇಲರ್ ಕೂಡ ರಿಲೀಸ್ ಮಾಡಲಾಯಿತು. ಆದರೆ ಸಿನಿಮಾದ ಬಿಡುಗಡೆಗೆ ಇನ್ನು 10 ದಿನ ಇರುವಾಗ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿದೆ.

ಇದನ್ನೂ ಓದಿ: ಇನ್ನಷ್ಟು ಹದಗೆಟ್ಟಿತಾ ಸಮಂತಾ ಆರೋಗ್ಯ?

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಸಮಂತಾ ನಟನೆಯ ‘ಶಾಕುಂತಲಂ’ ಸಿನಿಮಾ ಕಳೆದ ವರ್ಷ ನವೆಂಬರ್​ನಲ್ಲೇ ರಿಲೀಸ್ ಆಗಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಈಗ ಈ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದೆ. ಪದೇಪದೇ ವಿಳಂಬ ಆಗುತ್ತಿರುವುದಕ್ಕೆ ಫ್ಯಾನ್ಸ್ ಬೇಸರ ಹೊರಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಹೊಸ ದಿನಾಂಕ ಘೋಷಣೆ ಆಗಲಿದೆ. ಇದಲ್ಲದೇ ‘ಖುಷಿ’ ಚಿತ್ರದಲ್ಲೂ ಸಮಂತಾ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ ವಿಜಯ್​ ದೇವರಕೊಂಡ ಹೀರೋ. ಕಾರಣಾಂತರಗಳಿಂದ ಆ ಸಿನಿಮಾದ ಕೆಲಸಗಳು ಕೂಡ ತಡವಾಗುತ್ತಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us