ಮಗು ಹೊಂದೋದು ಬೇಡ ಎಂದು ನಿರ್ಧರಿಸಿದ್ದ ಸಮಂತಾ; ಮನಸ್ಸು ಬದಲಾಗಿದ್ದೇಕೆ?

ಖ್ಯಾತ ನಟಿ ಸಮಂತಾ ರುತ್ ಪ್ರಭು ತಾಯಿಯಾಗುತ್ತಿರುವ ಸಂತಸದಲ್ಲಿದ್ದಾರೆ. ಮಗು ಇಲ್ಲದಿದ್ದರೂ ಪರವಾಗಿಲ್ಲ ಎಂದುಕೊಂಡಿದ್ದ ತಮಗೆ ಈ ಗರ್ಭಧಾರಣೆ ದೊಡ್ಡ ಸರ್ಪ್ರೈಸ್ ನೀಡಿದೆ ಎಂದು ಹೇಳಿಕೊಂಡಿದ್ದಾರೆ. 'ಮಾ ಇಂಟಿ ಬಂಗಾರಂ' ಸಿನಿಮಾ ಶೂಟಿಂಗ್ ವೇಳೆ ಈ ವಿಷಯ ತಿಳಿದಿದ್ದು, ಕೆಲವೇ ತಿಂಗಳಲ್ಲಿ ಮಗುವಿನ ಆಗಮನವಾಗಲಿದೆ ಎಂದು ತಿಳಿಸಿದ್ದಾರೆ.

ಮಗು ಹೊಂದೋದು ಬೇಡ ಎಂದು ನಿರ್ಧರಿಸಿದ್ದ ಸಮಂತಾ; ಮನಸ್ಸು ಬದಲಾಗಿದ್ದೇಕೆ?
ಸಮಂತಾ
Edited By:

Updated on: Sep 11, 2026 | 8:46 AM

ಮುಖ್ಯಾಂಶಗಳು

  • ಮಗು ಬೇಡ ಅಂದುಕೊಂಡಿದ್ದ ಸಮಂತಾ
  • ದೊರಕಿತು ಬಿಗ್ ಸರ್ಪ್ರೈಸ್
  • ಬಯಲಾಯ್ತು ಪ್ರೆಗ್ನೆನ್ಸಿ ಸತ್ಯ 

ಖ್ಯಾತ ನಟಿ ಸಮಂತಾ ರುತ್ ಪ್ರಭು ತಮ್ಮ ವೈಯಕ್ತಿಕ ಜೀವನದ ಪ್ರಮುಖ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ತೆರೆಕಂಡ ಅವರ ಸಿನಿಮಾ ಯಶಸ್ಸು ಕಂಡಿದೆ. ಈ ನಡುವೆ ಅವರು ತಾಯಿಯಾಗುತ್ತಿರುವ ಸಂತಸದಲ್ಲಿದ್ದಾರೆ. ಮಗುವಿನ ಆಗಮನದ ಬಗ್ಗೆ ಅವರು ನೀಡಿರುವ ಹೇಳಿಕೆ ಈಗ ವೈರಲ್ ಆಗಿದೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಮಂತಾ ಇತ್ತೀಚೆಗೆ ಪ್ರಸಿದ್ಧ ವೆಬ್‌ಸೈಟ್‌ ಒಂದಕ್ಕೆ ಸಂದರ್ಶನ ನೀಡಿದ್ದಾರೆ. ಸಂದರ್ಶನದಲ್ಲಿ ತಮ್ಮ ಗರ್ಭಧಾರಣೆ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ತಮಗೆ ಮಗು ಇಲ್ಲದಿದ್ದರೂ ಪರವಾಗಿಲ್ಲ ಎಂಬ ಯೋಚನೆ ಇತ್ತಂತೆ. ಆದರೆ ಈ ಗರ್ಭಧಾರಣೆಯ ಸುದ್ದಿ ಅವರಿಗೆ ದೊಡ್ಡ ಅಚ್ಚರಿ ತಂದಿದೆ.

ಸಮಂತಾ ಮತ್ತು ಅವರ ಪತಿ ರಾಜ್ ಈ ಬಗ್ಗೆ ಹಿಂದೆ ಚರ್ಚಿಸಿದ್ದರು. ಮಗು ಬೇಕು ಅಥವಾ ಬೇಡ ಎಂಬ ವಿಚಾರದಲ್ಲಿ ಇಬ್ಬರೂ ಸ್ಪಷ್ಟತೆಯಿಂದಿದ್ದರು. ಮಗು ಇಲ್ಲದಿದ್ದರೂ ಜೀವನ ನಡೆಸಲು ಸಿದ್ಧರಾಗಿದ್ದರು. ಹೀಗಾಗಿ ಸಮಂತಾ ಈ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಂಡಿರಲಿಲ್ಲ.

‘ಮಾ ಇಂಟಿ ಬಂಗಾರಂ’ ಚಿತ್ರದ ಶೂಟಿಂಗ್ ವೇಳೆ ಘಟನೆಯೊಂದು ನಡೆಯಿತು. ‘ತಸ್ಸಡಿಯಾ’ ಹಾಡಿನ ಚಿತ್ರೀಕರಣದ ಸಂದರ್ಭದಲ್ಲಿ ಸಮಂತಾ ಅನಾರೋಗ್ಯಕ್ಕೆ ಒಳಗಾಗಿದ್ದರು. ತಪಾಸಣೆ ನಡೆಸಿದಾಗ ತಾವು ಗರ್ಭಿಣಿ ಎಂಬ ವಿಷಯ ತಿಳಿಯಿತು. ಈ ಸುದ್ದಿ ಅವರಿಗೆ ಅಪಾರ ಸಂತೋಷ ತಂದಿದೆ.

ಮಗುವಿನ ಆಗಮನದಿಂದ ಜೀವನದಲ್ಲಿ ಬದಲಾವಣೆ ಬರಲಿದೆ ಎಂದು ಸಮಂತಾ ಕಾಯುತ್ತಿದ್ದಾರೆ. ಮಗು ಬಂದ ಮೇಲೆ ಬದುಕು ಸಂಪೂರ್ಣವಾಗಿ ಬದಲಾಗುತ್ತದೆ ಎಂದು ಹಲವರು ಹೇಳಿದ್ದಾರೆ. ಈ ಹೊಸ ಅನುಭವಕ್ಕಾಗಿ ಅವರು ಕಾತುರದಿಂದ ಕಾಯುತ್ತಿದ್ದಾರೆ. ಕೆಲವೇ ತಿಂಗಳುಗಳಲ್ಲಿ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ.

ಇದನ್ನೂ ಓದಿ: ‘ಪ್ರೆಗ್ನೆನ್ಸಿ ಬಳಿಕ ದೇಹದ ತೂಕ 11 ಕೆಜಿ ಹೆಚ್ಚಿದೆ’; ಅಭಿಮಾನಿಗಳ ಎದುರು ಹೇಳಿಕೊಂಡ ಸಮಂತಾ

ಸಮಂತಾ ಕಳೆದ ವರ್ಷ ರಾಜ್ ಅವರನ್ನು ವಿವಾಹವಾಗಿದ್ದರು. ಇಬ್ಬರೂ ಜೊತೆಯಾಗಿ ಹಲವು ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ್ದಾರೆ. ಎಲ್ಲವೂ ಸರಿಯಾಗಿ ನಡೆದರೆ ಈ ಜೋಡಿ ಶೀಘ್ರದಲ್ಲೇ ಮತ್ತೆ ಒಂದಾಗಲಿದೆ. ‘ಮಾ ಇಂಟಿ ಬಂಗಾರಂ’ ಚಿತ್ರದ ಸೀಕ್ವೆಲ್‌ನಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡುವ ಸಾಧ್ಯತೆಯಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:12 am, Fri, 11 September 26

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us