ಖ್ಯಾತ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರಿಗೆ ಅನಾರೋಗ್ಯ ಕಾಡುತ್ತಲೇ ಇದೆ. ಕೆಲವು ತಿಂಗಳ ಕಾಲ ಕೊಂಚ ಚೇತರಿಸಿಕೊಂಡು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದ ಅವರು ಈಗ ಮತ್ತೆ ಸಮಸ್ಯೆ ಎದುರಿಸುತ್ತಿದ್ದಾರೆ. Myositis ಕಾಯಿಲೆಗೆ ಸಮಂತಾ (Samantha) ಅವರು ಹೆಚ್ಚಿನ ಚಿಕಿತ್ಸೆ ಪಡೆಯುವುದು ಅನಿವಾರ್ಯ ಆಗಿದೆ. ಹಾಗಾಗಿ ಅವರು ಶೀಘ್ರದಲೇ ಅಮೆರಿಕಕ್ಕೆ ತೆರಳಲಿದ್ದಾರೆ. ಅದಕ್ಕೂ ಮುನ್ನ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ಹಿಂದೆ ಕೂಡ ಅವರು Myositis ಕಾಯಿಲೆ ಗುಣವಾಗದೇ ಇದ್ದಾಗ ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಈಗ ಅವರು ವೆಲ್ಲೂರಿನ ಶ್ರೀ ಲಕ್ಷ್ಮೀ ನಾರಾಯಣಿ ಗೋಲ್ಡನ್ ಟೆಂಪಲ್ಗೆ (Sri Lakshmi Narayani Golden Temple) ತೆರಳಿದ್ದಾರೆ. ಅದರ ಬಗ್ಗೆ ಸ್ವತಃ ಸಮಂತಾ ಅಪ್ಡೇಟ್ ನೀಡಿದ್ದಾರೆ.
ಸ್ನೇಹಿತರ ಜೊತೆಗೂಡಿ ಸಮಂತಾ ಅವರು ಕಾರಿನಲ್ಲಿ ಪ್ರಯಾಣ ಮಾಡಿದ್ದಾರೆ. ಈ ವೇಳೆ ಅವರು ತಮ್ಮ ಇಷ್ಟದ ಹಾಡುಗಳನ್ನು ಕೇಳುತ್ತಾ ಎಂಜಾಯ್ ಮಾಡಿದ್ದಾರೆ. ಪ್ರಯಾಣದ ಒಂದಷ್ಟು ವಿವರಗಳ ಬಗ್ಗೆ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸಮಂತಾ ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.
ಇದನ್ನೂ ಓದಿ: ಶೂಟಿಂಗ್ ಮುಗಿಸಿ ಮರಳಿದ ಸಮಂತಾ: ಕೈಯಲ್ಲಿರುವ ಬ್ಯಾಗ್ ಬೆಲೆ ಎಷ್ಟು ಗೊತ್ತೆ?
Myositis ಕಾಯಿಲೆಯಿಂದ ಸಮಂತಾ ಅವರು ಅನುಭವಿಸಿದ ಸಮಸ್ಯೆಗಳು ಒಂದೆರಡಲ್ಲ. ಅದರಿಂದ ಚೇತರಿಸಿಕೊಳ್ಳಲು ಅವರಿಗೆ ಹಲವು ತಿಂಗಳುಗಳು ಬೇಕಾದವು. ಆದರೆ ಮತ್ತೆ ಅವರಿಗೆ ಆ ಸಮಸ್ಯೆ ಮರುಕಳಿಸಿದೆ. ಹಾಗಾಗಿ ಪುನಃ ಬ್ರೇಕ್ ತೆಗೆದುಕೊಂಡು ಹೆಚ್ಚಿನ ಚಿಕಿತ್ಸೆ ಪಡೆಯಲು ಅವರು ನಿರ್ಧರಿಸಿದ್ದಾರೆ. ಚಿತ್ರರಂಗದಿಂದ ಅವರು ಹಲವು ತಿಂಗಳ ಕಾಲ ಬ್ರೇಕ್ ಪಡೆಯಲಿದ್ದಾರೆ ಎಂಬುದು ಇತ್ತೀಚೆಗೆ ಖಚಿತವಾಯಿತು. ಸಮಂತಾ ಅವರು ಸದ್ಯಕ್ಕೆ ಯಾವುದೇ ಹೊಸ ಪ್ರಾಜೆಕ್ಟ್ಗಳನ್ನು ಒಪ್ಪಿಕೊಳ್ಳುತ್ತಿಲ್ಲ.
ಇದನ್ನೂ ಓದಿ: Samantha: ‘ಎಂದೆಂದಿಗೂ ನಿಮ್ಮನ್ನು ಪ್ರೀತಿಸುತ್ತೇನೆ’: ಸ್ಪೆಷಲ್ ವ್ಯಕ್ತಿ ಬಗ್ಗೆ ನಟಿ ಸಮಂತಾ ಮಾತು
ವಿಜಯ್ ದೇವರಕೊಂಡ ಜೊತೆ ‘ಖುಷಿ’ ಸಿನಿಮಾದಲ್ಲಿ ಸಮಂತಾ ಅವರು ನಟಿಸಿದ್ದಾರೆ. ಅಲ್ಲದೇ, ‘ಸಿಟಾಡೆಲ್’ ವೆಬ್ ಸಿರೀಸ್ನ ಇಂಡಿಯನ್ ವರ್ಷನ್ನಲ್ಲೂ ಅವರು ಅಭಿನಯಿಸಿದ್ದಾರೆ. ಈ ಚಿತ್ರಗಳ ಕೆಲಸಗಳ ಜೊತೆ ಕೆಲವು ಜಾಹೀರಾತುಗಳ ಚಿತ್ರೀಕರಣವನ್ನೂ ಅವರು ಮುಗಿಸಿಕೊಟ್ಟು ಅಮೆರಿಕಕ್ಕೆ ತೆರಳಲು ಸಜ್ಜಾಗಿದ್ದಾರೆ. ಸಿನಿಮಾ ಮತ್ತು ವೆಬ್ ಸಿರೀಸ್ನ ಪ್ರಚಾರ ಕಾರ್ಯದಲ್ಲಿ ಸಮಂತಾ ಭಾಗಿ ಆಗುವುದು ಬಹುತೇಕ ಅನುಮಾನ ಎನ್ನಲಾಗುತ್ತದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.