AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೂಟಿಂಗ್ ಮುಗಿಸಿ ಮರಳಿದ ಸಮಂತಾ: ಕೈಯಲ್ಲಿರುವ ಬ್ಯಾಗ್ ಬೆಲೆ ಎಷ್ಟು ಗೊತ್ತೆ?

Samantha: ನಟಿ ಸಮಂತಾ ಶೂಟಿಂಗ್ ಮುಗಿಸಿ ಹೈದರಾಬಾದ್​ಗೆ ಮರಳಿದ್ದು, ಅವರು ಕೈಯಲ್ಲಿ ಹಿಡಿದಿರುವ ಬ್ಯಾಗು ಎಲ್ಲರ ಗಮನ ಸೆಳೆದಿದೆ. ಬ್ಯಾಗಿನ ಬೆಲೆ ಎಷ್ಟು ಲಕ್ಷಗಳು ಗೊತ್ತೆ?

ಶೂಟಿಂಗ್ ಮುಗಿಸಿ ಮರಳಿದ ಸಮಂತಾ: ಕೈಯಲ್ಲಿರುವ ಬ್ಯಾಗ್ ಬೆಲೆ ಎಷ್ಟು ಗೊತ್ತೆ?
ಸಮಂತಾ
ಮಂಜುನಾಥ ಸಿ.
|

Updated on: Jul 13, 2023 | 10:42 PM

Share

ನಟಿ ಸಮಂತಾ (Samantha) ಕೊನೆಗೂ ತಮ್ಮ ಅತ್ಯಂತ ಬ್ಯುಸಿ ಶೆಡ್ಯೂಲ್ ಮುಗಿಸಿ ಹೈದರಾಬಾದ್​ಗೆ ಮರಳಿದ್ದಾರೆ. ಅವರೇ ಹೇಳಿಕೊಂಡಿದ್ದಂತೆ ಕಳೆದ ಆರು ತಿಂಗಳು ಅವರ ಪಾಲಿನ ಅತ್ಯಂತ ಕಷ್ಟದ, ಶ್ರಮದ ಆರು ತಿಂಗಳಾಗಿತ್ತಂತೆ. ಹಾಗೋ ಹೀಗೋ ಕಷ್ಟಪಟ್ಟು ಶೂಟಿಂಗ್ (Shooting) ಮುಗಿಸಿರುವ ಸಮಂತಾ, ಈಗ ಹೈದರಾಬಾದ್​ಗೆ ಮರಳಿದ್ದು, ಮುಂದಿನ ಒಂದು ವರ್ಷದ ಕಾಲ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಸರಳವಾದ ಕಪ್ಪು ಬಣ್ಣದ ಟೀ-ಶರ್ಟ್, ಪ್ಯಾಂಟ್ ಧರಿಸಿ ಬಂದ ಸಮಂತಾರ ಕೈಯಲ್ಲಿದ್ದ ಬ್ಯಾಗು ಎಲ್ಲರ ಗಮನ ಸೆಳೆದಿದೆ. ಮೇಲ್ನೋಟಕ್ಕೆ ಸರಳವಾಗಿ ಕಂಡರು ಆ ಬ್ಯಾಗಿನ ಬೆಲೆ ಕೆಲವು ಲಕ್ಷಗಳು. ಸಾಮಾನ್ಯ ಕಾರೊಂದನ್ನು ಖರೀದಿಸಬಹುದಾದ ಬೆಲೆ ತೆತ್ತು ಸಮಂತಾ ಆ ಪುಟ್ಟ ಬ್ಯಾಗು ಖರೀದಿಸಿದ್ದಾರೆ. ಸಮಂತಾ ತೋಳಿನಲ್ಲಿ ತೂಗಾಡುತ್ತಿದ್ದ ಪುಟ್ಟ ಬ್ಯಾಗನ್ನು ತಯಾರಿಸಿದ್ದು ವಿಶ್ವದ ಟಾಪ್ ಬ್ಯಾಗ್ ಕಂಪೆನಿಗಳಲ್ಲಿ ಒಂದಾದ ‘ಚಾನೆಲ್’.

ಚಾನೆಲ್​ ಕಂಪೆನಿಯ ಹ್ಯಾಂಡ್ ಬ್ಯಾಗುಗಳ ಬೆಲೆ ಪ್ರಾರಂಭವಾಗುವುದೇ 1 ಲಕ್ಷ ರೂಪಾಯಿಗಳಿಂದ. ಚಾನೆಲ್​ನ ದುಬಾರಿ ಬ್ಯಾಗಿನ ಬೆಲೆ ಸುಮಾರು 20 ಲಕ್ಷವನ್ನೂ ದಾಟುತ್ತದೆ. ಸಮಂತಾ ಕೈಯಲ್ಲಿದ್ದಿದ್ದು ಚಾನೆಲ್​ನ 5 ಲಕ್ಷ ರೂ ಮೌಲ್ಯದ ಬ್ಯಾಗು ಎನ್ನಲಾಗುತ್ತಿದೆ. ಒಂದು ಹ್ಯಾಚ್​ಬ್ಯಾಕ್ ಕಾರು ಖರೀದಿಸಬಹುದಾದ ಬೆಲೆಗೆ ಬ್ಯಾಗು ಕೊಂಡಿದ್ದಾರೆ ಸಮಂತಾ.

ಇದನ್ನೂ ಓದಿ:Samantha: ಮತ್ತೆ ಸಮಂತಾಗೆ ಅನಾರೋಗ್ಯ; ಶೂಟಿಂಗ್ ಬಂದ್​ ಮಾಡಿ 1 ವರ್ಷ ಯಾರ ಕೈಗೂ ಸಿಗಲ್ಲ ಸ್ಟಾರ್​ ನಟಿ

ದಕ್ಷಿಣ ಭಾರತದ ದುಬಾರಿ ನಟಿಯರಲ್ಲಿ ಒಬ್ಬರಾದ ಸಮಂತಾ ಬಳಿ ಈ ರೀತಿಯ ಹಲವು ದುಬಾರಿ ಬ್ಯಾಗುಗಳಿವೆ. ಉಡುಗೆಗಳಿಗೂ ಭಾರಿ ಮೊತ್ತವನ್ನೇ ಸಮಂತಾ ವ್ಯಯಿಸುತ್ತಾರೆ. ಇತ್ತೀಚೆಗೆ ಇಂಗ್ಲೀಷ್ ಸಿಟಾಡೆಲ್ ಪ್ರೀಮಿಯರ್​ನಲ್ಲಿ ಭಾಗವಹಿಸಿದಾಗ ಸಮಂತಾ ತೊಟ್ಟಿದ್ದಿದ್ದು 2 ಲಕ್ಷಕ್ಕೂ ಹೆಚ್ಚು ಬೆಲೆಯ ಉಡುಗೆಯನ್ನು. ಹಲವು ಐಶಾರಾಮಿ ಕಾರುಗಳು, ರಿಯಲ್ ಎಸ್ಟೇಟ್ ಉದ್ಯಮಗಳನ್ನು ಸಹ ಸಮಂತಾ ಹೊಂದಿದ್ದಾರೆ.

ಸತತ ಅನಾರೋಗ್ಯಕ್ಕೆ ಈಡಾಗುತ್ತಿರುವ ಸಮಂತಾ, ಸಿನಿಮಾಗಳಿಂದ ಬಿಡುವು ಪಡೆಯಲು ತೀರ್ಮಾನಿಸಿದ್ದು, ತಮ್ಮ ಆರೋಗ್ಯವನ್ನು ಪರಿಪೂರ್ಣವಾಗಿ ಸುಧಾರಿಸಿಕೊಂಡ ಬಳಿಕವೇ ಸಿನಿಮಾಕ್ಕೆ ಮರಳುವ ಮನಸ್ಸು ಮಾಡಿದಂತಿದೆ. ಆಟೋಇಮ್ಯೂನ್ ಸಮಸ್ಯೆಯಿಂದ ಬಳಲುತ್ತಿರುವ ಸಮಂತಾರಿಗೆ ಆಗಾಗ್ಗೆ ಅನಾರೋಗ್ಯ ಕಾಡುತ್ತಲೇ ಇರುತ್ತದೆ. ಇದೇ ಕಾರಣಕ್ಕೆ ತಮ್ಮ ರೋಗನಿರೋಧಕ ಶಕ್ತಿಯನ್ನು ವೃದ್ಧಿ ಮಾಡಿಕೊಳ್ಳುವ ಥೆರಪಿಯನ್ನು ಸಮಂತಾ ಮಾಡಿಸಿಕೊಳ್ಳುತ್ತಿದ್ದಾರೆ.

ಸಮಂತಾ ಪ್ರಸ್ತುತ ವಿಜಯ್ ದೇವರಕೊಂಡ ನಟನೆಯ ‘ಖುಷಿ’ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾದ ಚಿತ್ರೀಕರಣ, ಡಬ್ಬಿಂಗ್ ಎಲ್ಲವನ್ನೂ ಮುಗಿಸಿದ್ದಾರೆ. ಹಿಂದಿಯ ವೆಬ್ ಸರಣಿ ‘ಸಿಟಾಡೆಲ್’ ನಲ್ಲೂ ಸಮಂತಾ, ಬಾಲಿವುಡ್ ನಟ ವರುಣ್ ಧವನ್ ಜೊತೆ ನಟಿಸಿದ್ದು ವೆಬ್ ಸರಣಿಯ ಚಿತ್ರೀಕರಣ ಇತ್ತೀಚೆಗಷ್ಟೆ ಮುಗಿಸಿದ್ದಾರೆ. ವೆಬ್ ಸರಣಿ ಬಿಡುಗಡೆ ದಿನಾಂಕವನ್ನು ಇನ್ನಷ್ಟೆ ಘೋಷಣೆ ಮಾಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!