
ಸಮಂತಾ ಋತ್ ಪ್ರಭು ದಕ್ಷಿಣದ ಸ್ಟಾರ್ ನಟಿ, ಬಾಲಿವುಡ್ನಲ್ಲೂ ಕೆಲಸ ಮಾಡಿರುವ ಸಮಂತಾ ಪ್ರತಿಭಾವಂತ ನಟಿ. ಅಂದಹಾಗೆ ಅವರು ನಟಿ ಮಾತ್ರವಲ್ಲ ಉದ್ಯಮಿಯೂ ಹೌದು. ಹಲವು ಬೇರೆ ಬೇರೆ ಕಂಪೆನಿಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಸಮಂತಾ ನಟಿಸಿದ ಈ ಹಿಂದಿನ ಸಿನಿಮಾ ‘ಮಾ ಇಂಟಿ ಬಂಗಾರಂ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಮೋಡಿ ಮಾಡಿದ್ದು 100 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಅದರ ಬೆನ್ನಲ್ಲೆ ಇದೀಗ ಸಮಂತಾ ಹೂಡಿಕೆ ಮಾಡಿರುವ ಕಂಪೆನಿಯೊಂದು ಸಹ 100 ಕೋಟಿ ಮೌಲ್ಯ ದಾಟಿದೆ.
ಸಮಂತಾ ಹಲವಾರು ಬ್ರ್ಯಾಂಡ್ಗಳಲ್ಲಿ ಹೂಡಿಕೆ ಮಾಡಿದ್ದಾರೆ. ರಿಯಲ್ ಎಸ್ಟೇಟ್, ಮನರಂಜನೆ, ಫಿಟ್ನೆಸ್, ಡಿಜಿಟಲ್, ಬ್ಯೂಟಿ ಹೀಗೆ ಹಲವು ಕ್ಷೇತ್ರಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ. ಸಮಂತಾ ಸುಗಂಧ ದ್ರವ್ಯ ಬ್ರ್ಯಾಂಡ್ ಆದ ‘ಸೀಕ್ರೆಟ್ ಅಲ್ಕೆಮಿಸ್ಟ್’ನಲ್ಲಿಯೂ ಹೂಡಿಕೆ ಮಾಡಿದ್ದು, ಸಹ ಮಾಲಕಿ ಆಗಿದ್ದಾರೆ. ಈ ಕಂಪೆನಿ ಇದೀಗ ಆದಾಯದಲ್ಲಿ ₹120 ಕೋಟಿ ಗಡಿಯನ್ನು ಮೀರಿದೆ.
‘ಸೀಕ್ರೆಟ್ ಅಲ್ಕೆಮಿಸ್ಟ್’ ಕಳೆದ ಎಂಟು ತಿಂಗಳುಗಳಲ್ಲಿ 8 ಪಟ್ಟು ಬೆಳವಣಿಗೆಯನ್ನು ದಾಖಲಿಸಿದೆ, ಇದು ಅದರ ಆದಾಯವನ್ನು ₹120 ಕೋಟಿ ಗಡಿಗೆ ಕೊಂಡೊಯ್ದಿದೆ ಎಂದು ಕಂಪೆನಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಮಾಹಿತಿ ನೀಡಿದೆ. ಅರೊಮಾಥೆರಪಿ ಆಧಾರಿತ ಸುಗಂಧ ದ್ರವ್ಯದ ಮಾರಾಟ ಕಂಪೆನಿ ಇದಾಗಿದೆ. ಅಂಕಿತ್ ಠಾಡಾನಿ ಮತ್ತು ಆಕಾಶ್ ವಾಲಿಯಾ ಅವರು ಸ್ಥಾಪಿಸಿದ ಈ ಬ್ರ್ಯಾಂಡ್‌ಗೆ, 2024 ರಲ್ಲಿ ಸಮಂತಾ ಸಹ-ಸ್ಥಾಪಕರಾಗಿ ಸೇರಿಕೊಂಡರು. ಈ ಬ್ರ್ಯಾಂಡ್ 2025 ರಲ್ಲಿ ಸುಗಂಧ ದ್ರವ್ಯ ವಿಭಾಗಕ್ಕೆ ಕಾಲಿಟ್ಟಿತು ಮತ್ತು D2C ಚಾನೆಲ್‌ಗಳು, ಅಮೆಜಾನ್, ನೈಕಾ ಮತ್ತು ಫ್ಲಿಪ್‌ಕಾರ್ಟ್‌ನಂತಹ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಹಾಗೂ ಬ್ಲಿಂಕಿಟ್ ಮತ್ತು ಸ್ವಿಗ್ಗಿ ಇನ್ಸ್ಟಾಮಾರ್ಟ್ ನಂತಹ ಕ್ವಿಕ್-ಕಾಮರ್ಸ್ ಸೇವೆಗಳ ಮೂಲಕ ತನ್ನ ಉಪಸ್ಥಿತಿಯನ್ನು ವಿಸ್ತರಿಸಿತು. ಈಗ ಈ ಬ್ರ್ಯಾಂಡ್ ಅದ್ಭುತವಾದ ಲಾಭವನ್ನು ಗಳಿಸುತ್ತಿದೆ.
ಇದನ್ನೂ ಓದಿ:ಒಟಿಟಿಯಲ್ಲಿಯೂ ದಾಖಲೆಗಳನ್ನು ಬರೆಯುತ್ತಿರುವ ಸಮಂತಾ ಋತ್ ಪ್ರಭು
ಬ್ರ್ಯಾಂಡ್‌ನ ಯಶಸ್ಸಿನ ಬಗ್ಗೆ ಮಾತನಾಡಿರುವ ಸಮಂತಾ ರುತ್ ಪ್ರಭು, ‘₹120 ಕೋಟಿ ಗಡಿ ದಾಟಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಕ್ಷಣವಾಗಿದೆ’ ಎಂದಿದ್ದಾರೆ. ಸಮಂತಾ ಋತ್ ಪ್ರಭು ಅವರು ‘ಸೀಕ್ರೆಟ್ ಅಲ್ಕೆಮಿಸ್ಟ್’ ಮಾತ್ರವೇ ಅಲ್ಲದೆ ಇನ್ನೂ ಹಲವಾರು ಕಂಪೆನಿಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಅವುಗಳಲ್ಲಿ ಮುಖ್ಯವಾದುವುಗಳೆಂದರೆ ‘ಸಖಿ’, ‘ಜೋಯ್’ ಹೆಲ್ತ್ಕೇರ್ ಬ್ರ್ಯಾಂಡ್, ‘ಟ್ರೂಲಿ ಎಸ್ಎಂಎ’, ‘ಮೈಲ್ ಕಲೆಕ್ಟಿವ್ ವೇರ್’, ‘ಗಟಾಚ’ ಹೆಸರಿನ ವೆಲ್ನೆಸ್ ಸಂಸ್ಥೆ, ‘ಏಕಂ’ ಶಿಕ್ಷಣ ಕುರಿತಾದ ಸಂಸ್ಥೆ, ಚೆನ್ನೈ ಸೂಪರ್ ಚಾಂಪ್ಸ್ ಹೆಸರಿನ ತಂಡದ ಮಾಲೀಕರು ಸಹ ಆಗಿರುವ ಸಮಂತಾ, ‘ಟ್ರಲಾಲ’ ಹೆಸರಿನ ನಿರ್ಮಾಣ ಸಂಸ್ಥೆಯ ಮಾಲಕಿಯೂ ಹೌದು. ಇವುಗಳ ಜೊತೆಗೆ ರಿಯಲ್ ಎಸ್ಟೇಟ್ ಮೇಲೂ ಹೂಡಿಕೆ ಮಾಡಿದ್ದಾರೆ.
ಸಮಂತಾ ತಾಯಿ ಆಗಲಿದ್ದು, ಅವರು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ರಾಜ್ ನಿಧಿಮೋರು ಅವರನ್ನು ವಿವಾಹವಾಗಿದ್ದಾರೆ. ಇಬ್ಬರಿಗೂ ಸಹ ಇದು ಎರಡನೇ ಮದುವೆ ಆದರೆ ಮೊದಲ ಮಗು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ