2019ರಲ್ಲಿ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಾದ ವಿವಾದಗಳ ಹಿನ್ನೋಟ
ವಿವಾದಗಳು ಎಲ್ಲಾ ಸಿನಿಮಾ ರಂಗದಲ್ಲೂ ಕಾಮನ್ ಹಾಗೇನೆ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲೂ ಸಾಕಷ್ಟು ವಿವಾದಗಳಾಗಿವೆ. ಆ ಕಾಂಟ್ರವರ್ಸಿಗಳ ಮೇಲೊಂದು ಝಲಕ್ ಇಲ್ಲಿದೆ ನೋಡಿ. ತೆಲುಗಿನ ಕಾಂಟ್ರವರ್ಸಿ ಕಿಂಗ್ ಆರ್ಜಿವಿ: ರಾಮ್ ಗೋಪಾಲ್ ವರ್ಮಾ ದಿ ಕಾಂಟ್ರವರ್ಸಿ ಕಿಂಗ್. ವಿವಾದಗಳಿಲ್ಲದೆ ವರ್ಮಾ ತನ್ನ ಸಿನಿಮಾ ಬಿಡುಗಡೆ ಮಾಡೋದೇ ಇಲ್ಲ. ಈ ವರ್ಷನು ಆರ್ಜಿವಿ ಪುಂಖಾನು ಪುಂಖಾವಾಗಿ ವಿವಾದಗಳನ್ನ ಮೈಮೇಲೆ ಎಳೆದುಕೊಂಡಿದ್ರು. ಅವುಗಳಲ್ಲಿ ಒಂದು ಲಕ್ಷ್ಮೀಸ್ ಎನ್ಟಿಆರ್ ಸಿನಿಮಾ. ತೆಲುಗಿನ ದಂತಕಥೆ ಎನ್ಟಿಆರ್ ಬಾಳಿನಲ್ಲಿ ಎರಡನೇ ಪತ್ನಿಯಾಗಿ ಲಕ್ಷ್ಮೀ […]
Follow us on
ವಿವಾದಗಳು ಎಲ್ಲಾ ಸಿನಿಮಾ ರಂಗದಲ್ಲೂ ಕಾಮನ್ ಹಾಗೇನೆ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲೂ ಸಾಕಷ್ಟು ವಿವಾದಗಳಾಗಿವೆ. ಆ ಕಾಂಟ್ರವರ್ಸಿಗಳ ಮೇಲೊಂದು ಝಲಕ್ ಇಲ್ಲಿದೆ ನೋಡಿ.
ತೆಲುಗಿನ ಕಾಂಟ್ರವರ್ಸಿ ಕಿಂಗ್ ಆರ್ಜಿವಿ: ರಾಮ್ ಗೋಪಾಲ್ ವರ್ಮಾ ದಿ ಕಾಂಟ್ರವರ್ಸಿ ಕಿಂಗ್. ವಿವಾದಗಳಿಲ್ಲದೆ ವರ್ಮಾ ತನ್ನ ಸಿನಿಮಾ ಬಿಡುಗಡೆ ಮಾಡೋದೇ ಇಲ್ಲ. ಈ ವರ್ಷನು ಆರ್ಜಿವಿ ಪುಂಖಾನು ಪುಂಖಾವಾಗಿ ವಿವಾದಗಳನ್ನ ಮೈಮೇಲೆ ಎಳೆದುಕೊಂಡಿದ್ರು. ಅವುಗಳಲ್ಲಿ ಒಂದು ಲಕ್ಷ್ಮೀಸ್ ಎನ್ಟಿಆರ್ ಸಿನಿಮಾ.
ತೆಲುಗಿನ ದಂತಕಥೆ ಎನ್ಟಿಆರ್ ಬಾಳಿನಲ್ಲಿ ಎರಡನೇ ಪತ್ನಿಯಾಗಿ ಲಕ್ಷ್ಮೀ ಪಾರ್ವತಿ ಪ್ರವೇಶ ಮಾಡಿದ್ಮೇಲೆ ಏನೇನಾಯ್ತು? ರಾಜಕೀಯವಾಗಿ ಎನ್ಟಿಆರ್ ಪಥನ ಆಗಿದ್ದೇಗೆ? ಚಂದ್ರಬಾಬು ನಾಯ್ಡು ಪಾತ್ರವೇನು? ಅನ್ನೋದನ್ನ ಆರ್ಜಿವಿ ಸಿನಿಮಾ ಹೇಳಿದ್ರು. ಲೋಕಸಭಾ ಚುನಾವಣೆ ವೇಳೆ ಈ ಸಿನಿಮಾವನ್ನ ಬಿಡುಗಡೆ ಮಾಡಲು ಸ್ಕೆಚ್ ಹಾಕಿದ್ರು. ಆದ್ರೆ, ಚುನಾವಣಾ ಆಯೋಗ ಲಕ್ಷ್ಮೀಸ್ ಎನ್ಟಿಆರ್ ನಿರ್ಮಾಪಕನಿಗೆ ನೋಟೀಸ್ ಕಳುಹಿಸಿತ್ತು. ಹೀಗಾಗಿ ಆಂಧ್ರದಲ್ಲಿ ಲಕ್ಷ್ಮೀಸ್ ಎನ್ಟಿಆರ್ ರಿಲೀಸ್ ಆಗ್ಲೇ ಇಲ್ಲ.
ಲಕ್ಷ್ಮೀಸ್ ಎನ್ಟಿಆರ್ ತೆಲಂಗಾಣದಲ್ಲೇನೋ ರಿಲೀಸ್ ಆಯ್ತು. ಆದ್ರೆ ಚುನಾವಣೆ ಬಳಿಕವೂ ಆಂಧ್ರದಲ್ಲಿ ಲಕ್ಷ್ಮೀಸ್ ಎನ್ಟಿಆರ್ ಬಿಡುಗಡೆಯಾಗ್ಲಿಲ್ಲ. ಲಕ್ಷ್ಮೀಸ್ ಎನ್ಟಿಆರ್ ವಿವಾದ ಆರುವುದಕ್ಕೂ ಮುನ್ನ ಕಮ್ಮ ರಾಜ್ಯಂಲೋ ಕಡಪ ರೆಡ್ಲೋ ಅನ್ನೋ ಸಿನಿಮಾಗೆ ಕೈ ಹಾಕಿದ್ರು. ಟೈಟಲ್ನಿಂದ್ಲೇ ವಿವಾದಕ್ಕೀಡಾಗಿ, ನಂತ್ರ ಅಮ್ಮ ರಾಜ್ಯಂಲೋ ಕಡಪ ಬಿಡ್ಡಲು ಎಂಬ ಟೈಟಲ್ನೊಂದಿಗೆ ಸಿನಿಮಾ ಕೊನೆಗೂ ರಿಲೀಸ್ ಆಯ್ತು. ಈ ಸಿನಿಮಾದಿಂದ ಪವನ್ ಕಲ್ಯಾಣ್, ಚಂದ್ರಬಾಬು ನಾಯ್ಡು ಹಾಗೂ ಆಂಧ್ರದ ಮುಖ್ಯಮಂತ್ರಿ ಜಗನ್ ಚರಿತ್ರೆಯನ್ನ ತೆರೆಮೇಲೆ ತೆರೆದಿಟ್ಟಿದ್ರು. ಇಂತಹದ್ದೇ ಕೆಲವು ವಿವಾದಗಳಲ್ಲಿ ಸಿಲುಕಿ ಆರ್ಜಿವಿ ಸದಾ ಸುದ್ದಿಯಲ್ಲಿದ್ರು.
ವಿವಾದಗಳಲ್ಲಿ ಬೆಂದ ಸೈರಾ ನರಸಿಂಹ ರೆಡ್ಡಿ: ಸೈರಾ.. ಉಯ್ಯಾಲವಾಡ ನರಸಿಂಹ ರೆಡ್ಡಿಯ ಜೀವನಾಧಾರಿತ ಸಿನಿಮಾ. ಮೆಗಾಸ್ಟಾರ್ ಅಭಿನಯದ 151ನೇ ಸಿನಿಮಾ. ಸೈರಾ ಸಿನಿಮಾ ಬಿಡುಗಡೆಗೂ ಮುನ್ನ ವಿವಾದಗಳ ಸುಳಿಯಲ್ಲಿ ಸಿಲುಕಿತ್ತು. ನರಸಿಂಹ ರೆಡ್ಡಿಯ ತಲೆಮಾರಿನವರಿಗೆ ಚಿತ್ರತಂಡ ಹಣಕೊಡುವುದಾಗಿ ಹೇಳಿತ್ತು. ಬಳಿಕ ಚಿತ್ರತಂಡ ಹಣಕೊಟ್ಟಿಲ್ಲವೆಂದು ನರಸಿಂಹ ರೆಡ್ಡಿಯ 5ನೇ ತಲೆಮಾರಿನವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ರು. ಆದ್ರೂ ವಿವಾದಗಳನ್ನ ಲೆಕ್ಕಿಸದೆ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಯ್ತು.
ರಜನಿ ಪೇಟಾಗೆ ಅಜಿತ್ ವಿಶ್ವಾಸಂ ಟಕ್ಕರ್: ತಮಿಳಿನ ಇಬ್ಬರು ಸೂಪರ್ಸ್ಟಾರ್ಗಳು ಈ ವರ್ಷ ಸುದ್ದಿಯಲ್ಲಿದ್ರು. ಅವ್ರಲ್ಲೊಬ್ರು ತಲೈವಾ ರಜನಿ ಮತ್ತೊಬ್ಬರು ತಲಾ ಅಜಿತ್. ಅಷ್ಟಕ್ಕೂ ಈ ದಿಗ್ಗಜರು ಸುದ್ದಿಯಲ್ಲಿರೋಕೆ ಕಾರಣ ಅವರ ಸಿನಿಮಾ. ರಜನಿ ಹಾಗೂ ಅಜಿತ್ ಕಾದಾಟ ಅವರ ಪೇಟಾ ಹಾಗೂ ವಿಶ್ವಾಸಂ ಸಿನಿಮಾ ಟ್ರೈಲರ್ನಿಂದ್ಲೇ ಶುರುವಾಗಿತ್ತು. ಟ್ರೈಲರ್ನಲ್ಲೇ ಒಬ್ಬರಿಗೊಬ್ಬರು ಟಕ್ಕರ್ ಕೊಟ್ಟಿದ್ರು. ಇಲ್ಲಿಂದ ಇಬ್ಬರ ಅಭಿಮಾನಿಗಳು ಕೂಡ ಕಾದಟ ತಾರಕ್ಕೇರಿತ್ತು. ಪೇಟಾ ಹಾಗೂ ವಿಶ್ವಾಸಂ ಎರಡೂ ಸಿನಿಮಾಗಳು ಸಂಕ್ರಾಂತಿ ಹಬ್ಬದಂದೇ ಥಿಯೇಟರ್ಗೆ ಲಗ್ಗೆ ಇಡ್ತಿರೋ ಈ ಕಿತ್ತಾಟಕ್ಕೆ ಕಾರಣವಾಗಿತ್ತು.