ಹೊಸ ರಿಯಾಲಿಟಿ ಶೋಗೆ ಹೋಸ್ಟ್ ಆದ ಅಕ್ಷಯ್ ಕುಮಾರ್; ಗೆದ್ದವರಿಗೆ ಕೋಟಿ ಕೋಟಿ ಹಣ?
ಇಂಗ್ಲಿಷ್ನ ಜನಪ್ರಿಯ 'ವೀಲ್ಸ್ ಆಫ್ ಫಾರ್ಚೂನ್' ಗೇಮ್ ಶೋ ಭಾರತಕ್ಕೆ ಬರಲಿದೆ. ಸೋನಿ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗುವ ಈ ರಿಯಾಲಿಟಿ ಶೋಗೆ ಅಕ್ಷಯ್ ಕುಮಾರ್ ನಿರೂಪಕರಾಗಿ ಆಯ್ಕೆಯಾಗಿದ್ದಾರೆ. ಕೋಟಿ ರೂಪಾಯಿ ಬಹುಮಾನ ಗೆಲ್ಲುವ ಅವಕಾಶವಿರುವ ಈ ಕಾರ್ಯಕ್ರಮವನ್ನು ಹೈಗೇಟ್ ಎಂಟರ್‌ಟೈನ್‌ಮೆಂಟ್ ನಿರ್ಮಿಸುತ್ತಿದೆ. ಅಮೆರಿಕದಲ್ಲಿ 8000ಕ್ಕೂ ಹೆಚ್ಚು ಸಂಚಿಕೆಗಳನ್ನು ಪೂರೈಸಿರುವ ಈ ಶೋ ಬಗ್ಗೆ ಕುತೂಹಲ ಹೆಚ್ಚಿದೆ.

ವಿಶ್ವಾದ್ಯಂತ ಹಲವು ರಿಯಾಲಿಟಿ ಶೋಗಳು ಪ್ರಸಾರ ಕಾಣುತ್ತಿವೆ. ಇಂಗ್ಲಿಷ್ನಲ್ಲಿ ಪ್ರಸಾರ ಕಾಣುವ ಅನೇಕ ರಿಯಾಲಿಟಿ ಶೋಗಳನ್ನು ಈಗ ಭಾರತಕ್ಕೆ ತರಲಾಗುತ್ತಿದೆ. ಬಿಗ್ ಬಾಸ್, ಶಾರ್ಕ್ ಟ್ಯಾಂಕ್ ಇಂಡಿಯಾ ಸೇರಿದಂತೆ ಅನೇಕ ರಿಯಾಲಿಟಿ ಶೋಗಳು ಬೇರೆ ದೇಶಗಳಿಂದ ಎರವಲು ಪಡೆದಿದ್ದು. ಈಗ ಸೋನಿ ಪಿಕ್ಚರ್ಸ್ ನೆಟ್ವರ್ಕ್ ಇಂಡಿಯಾ ‘ವೀಲ್ಸ್ ಆಫ ಫಾರ್ಚೂನ್’ ಹೆಸರಿನ ರಿಯಾಲಿಟಿ ಶೋ ಆರಂಭಿಸುತ್ತಿದೆ. ಈ ಶೋನ ಅಕ್ಷಯ್ ಕುಮಾರ್ ನಡೆಸಿಕೊಡಲಿದ್ದಾರೆ.
ಸೋನಿ ಪಿಕ್ಚರ್ಸ್ನಲ್ಲಿ ‘ಶಾರ್ಕ್ ಟ್ಯಾಂಕ್’ ಪ್ರಸಾರ ಕಂಡಿದೆ. ‘ಕೌನ್ ಬನೇಗಾ ಕರೋಡ್ಪತಿ’ ಕೂಡ ಪ್ರಸಾರ ಕಾಣೋದು ಸೋನಿಯಲ್ಲಿ. ಈಗ ವೀಲ್ಸ್ ಆಫ್ ಫಾರ್ಚೂನ್ ಶೋ ಬರುತ್ತಿದೆ. ಶೋನ ಗೆದ್ದವರಿಗೆ ಕೋಟಿ ರೂಪಾಯಿವರೆಗೆ ಹಣ ಸಿಗೋ ನಿರೀಕ್ಷೆ ಇದೆ. ಈ ಆಟ ಯಾವ ರೀತಿಯಲ್ಲಿ ಇರುತ್ತದೆ ಎಂಬ ಕುತೂಹಲ ಇದೆ.
ವೀಲ್ಸ್ ಆಫ್ ಫಾರ್ಚೂನ್ ಅಮೇರಿಕದ ಗೇಮ್ ಶೋ. ಇದನ್ನು ಮೊದಲು ಬಾರಿಗೆ ಆರಂಭಿಸಿದ್ದು 1975ರಲ್ಲಿ. ಅಲ್ಲಿಂದ ಇಲ್ಲಿಯವರೆಗೂ ಶೋ ವಿವಿಧ ಹಂತದಲ್ಲಿ, ವಿವಿಧ ವಾಹಿನಿಗಳಲ್ಲಿ ಪ್ರಸಾರ ಕಾಣುತ್ತಲೇ ಬರುತ್ತಿದೆ. ಈ ಶೋನ ಭಾರತಕ್ಕೆ ತರಲು ಹೈಗೇಟ್ ಎಂಟರ್ಟೈನ್ಮೆಂಟ್ ಪರವಾನಿಗೆ ಪಡೆದಿದ್ದು, ಇದೇ ಸಂಸ್ಥೆ ಶೋನ ನಿರ್ಮಾಣ ಮಾಡಲಿದೆ.
View this post on Instagram
ಪದಗಳ ಪಜಲ್, ದೈತ್ಯ ಕಾರ್ನಿವಾಲ್ ತಿರುಗಿಸೋದು ಸೇರಿದಂತೆ ವಿವಿಧ ಗೇಮ್ಗಳನ್ನು ಇದರಲ್ಲಿ ಇರಲಿವೆ. ಇಂಗ್ಲಿಷ್ನಲ್ಲಿ ಈಗಾಗಲೇ 8 ಸಾವಿರಕ್ಕೂ ಹೆಚ್ಚು ಎಪಿಸೋಡ್ಗಳು ಪ್ರಸಾರ ಕಂಡಿರೋದು ಇದರ ಹೆಚ್ಚುಗಾರಿಕೆ. ಭಾರತಕ್ಕೆ ತಕ್ಕಂತೆ ನಿಯಮ ಬದಲಿಸಿಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: ‘ಇದು ಸಮಾಜಕ್ಕೂ ಅಪಾಯಕಾರಿ’; ಅಕ್ಷಯ್ ಕುಮಾರ್ ವಿಡಿಯೋ ಬಗ್ಗೆ ಕೋರ್ಟ್ ಕಳವಳ
ಅಂದಹಾಗೆ, ಅಕ್ಷಯ್ ಕುಮಾರ್ ಅವರು ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರು ದಿನಕ್ಕೆ 2-3 ಸಿನಿಮಾಗಳನ್ನು ಶೂಟ್ ಮಾಡಿದ ಉದಾಹರಣೆ ಕೂಡ ಇದೆ. ಇವುಗಳ ಜೊತೆ ಅವರು ಈಗ ರಿಯಾಲಿಟಿ ಶೋ ಕೂಡ ಒಪ್ಪಿಕೊಂಡಿದ್ದಾರೆ. ಇದಕ್ಕಾಗಿ ಅವರು ಒಂದರಿಂದ ಎರಡು ದಿನ ಮೀಸಲಿಡಬೇಕಾಗುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




