AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೈತ್ರಾ ಕುಂದಾಪುರ ಕಣ್ಣೀರು ಫೇಕಾ? ಹೌದೆನ್ನಲು ಸಾಕ್ಷಿ ತಂದ ನೆಟ್ಟಿಗರು

ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಲ್ಲಿ ಈ ವಾರ ತೋರಿದ ವರ್ತನೆ ಚರ್ಚೆಗೆ ಗ್ರಾಸವಾಗಿದೆ. ರಜತ್ ‘ಸುಳ್ಳಿ’ ಎಂದಿದ್ದಕ್ಕೆ ಅವರು ಕಳೆದ ಸೀಸನ್‌ನಂತೆ ಭಾವನಾತ್ಮಕ ದೃಶ್ಯ ಸೃಷ್ಟಿಸಿದರು. ಕಣ್ಣೀರು ಹಾಕಿ, ಕುಂಕುಮ ಹಚ್ಚಿಕೊಳ್ಳುವ ಮೂಲಕ ಗಮನ ಸೆಳೆಯಲು ಯತ್ನಿಸಿದರು ಎನ್ನಲಾಗುತ್ತಿದೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚೈತ್ರಾ ಅವರ ವರ್ತನೆ ಬಗ್ಗೆ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಚೈತ್ರಾ ಕುಂದಾಪುರ ಕಣ್ಣೀರು ಫೇಕಾ? ಹೌದೆನ್ನಲು ಸಾಕ್ಷಿ ತಂದ ನೆಟ್ಟಿಗರು
ಚೈತ್ರಾ
ರಾಜೇಶ್ ದುಗ್ಗುಮನೆ
|

Updated on: Dec 19, 2025 | 11:41 AM

Share

ಚೈತ್ರಾ ಕುಂದಾಪುರ ಅವರು ಎರಡನೇ ಬಾರಿಗೆ ಬಿಗ್ ಬಾಸ್ ಮನೆ ಸೇರಿದ್ದಾರೆ. ಈ ಸೀಸನ್​ ಅಲ್ಲಿ ಅತಿಥಿಯಾಗಿ ದೊಡ್ಮನೆಗೆ ತೆರಳಿದ್ದ ಅವರು ನಂತರ ಸ್ಪರ್ಧಿ ಆದರು. ಈಗ ಅವರು ದೊಡ್ಮನೆಯಲ್ಲಿ ಉತ್ತಮವಾಗಿ ಆಟ ಆಡುತ್ತಿದ್ದಾರೆ. ಆದರೆ, ಈ ವಾರ ಅವರು ನಡೆದುಕೊಂಡ ರೀತಿ ಚರ್ಚೆಗೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳು ವೈರಲ್ ಆಗಿವೆ. ಕಳೆದ ಸೀಸನ್​ ಆಟವನ್ನೇ ಚೈತ್ರಾ ರಿಪೀಟ್ ಮಾಡುತ್ತಿದ್ದಾರೆ ಎಂದು ಅನೇಕರು ಹೇಳಿದ್ದಾರೆ.

ಚೈತ್ರಾ ಕುಂದಾಪುರ ಅವರು ಕಳೆದ ಸೀಸನ್​ ಅಲ್ಲಿ ಅನೇಕ ಬಾರಿ ಅತ್ತಿದ್ದು ಇದೆ. ಈ ಸಂದರ್ಭದಲ್ಲಿ ಅವರು ದೇವರಿಗೆ ದೀಪ ಹಚ್ಚಿ ಕುಂಕುಮವನ್ನು ಹಣೆಗೆ ಇಟ್ಟುಕೊಳ್ಳುತ್ತಿದ್ದರು. ಅವರು ಬಂದು ಕೆಲ ವಾರ ಕಳೆದಿದ್ದರು ಈ ರೀತಿ ಎಂದಿಗೂ ಮಾಡಿರಲಿಲ್ಲ. ಆದರೆ, ಈ ವಾರ ಅವರು ಆ ರೀತಿ ನಡೆದುಕೊಂಡಿದ್ದಾರೆ. ಇದಕ್ಕೆ ಕಾರಣ ಆಗಿದ್ದು ರಜತ್ ಅವರ ಮಾತು.

ರಜತ್ ಅವರು ಈ ವಾರ ಚೈತ್ರಾ ಕುಂದಾಪುರ ಜೊತೆ ಜಗಳ ಆಡಿದರು. ಆಟದ ಮಧ್ಯೆ ಅವರನ್ನು ಸುಳ್ಳಿ ಎಂದು ಕರೆದರು. ಕಳೆದ ಸೀಸನ್​ ಅಲ್ಲಿ ಅನೇಕರು ಚೈತ್ರಾ ಅವರನ್ನು ಸುಳ್ಳಿ ಎಂದು ಕರೆದಿದ್ದು ಇದೆ. ಈ ಬಾರಿಯೂ ಅದೇ ಟ್ಯಾಗ್​ನಿಂದ ಚೈತ್ರಾನ ಕರೆದಿದ್ದಕ್ಕೆ ಅವರಿಗೆ ಬೇಸರ ಆಗಿದೆ. ಅವರು ಗಳಗಳನೆ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ರವಿಚಂದ್ರನ್ ಎದುರೇ ರಾಜಾರೋಷವಾಗಿ ಸುಳ್ಳು ಹೇಳಿದ ಗಿಲ್ಲಿ; ಕಂಡು ಹಿಡಿದ ಕ್ರೇಜಿಸ್ಟಾರ್

ಗಿಲ್ಲಿ ಹಾಗೂ ರಜತ್ ಅವರು ಸೋಫಾ ಏರಿಯಾದಲ್ಲಿ ಕುಳಿತಿದ್ದರು. ಈ ಸಂದರ್ಭದಲ್ಲಿ ಚೈತ್ರಾ ಕುಂದಾಪುರ ಅವರು ದೇವರ ಎದುರು ಬಂದು ಕಣ್ಣೀರು ಹಾಕಿದ್ದಾರೆ. ಕುಂಕುಮ ಹಚ್ಚಿಕೊಳ್ಳುವಾಗ ಅವರು ಗಿಲ್ಲಿ ಹಾಗೂ ರಜತ್ ಕಡೆ ನೋಡಿದ್ದಾರೆ. ಅವರು ತಮ್ಮನ್ನೇ ನೋಡುತ್ತಿದ್ದಾರೆ ಎಂಬುದನ್ನು ಚೈತ್ರಾ ಖಚಿತ ಮಾಡಿಕೊಂಡಂತಿತ್ತು. ಈ ವಿಷಯವನ್ನು ರಾಶಿಕಾ ಕೂಡ ದೊಡ್ಮನೆಯಲ್ಲಿ ಚರ್ಚೆ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.