ರವಿಚಂದ್ರನ್ ಎದುರೇ ರಾಜಾರೋಷವಾಗಿ ಸುಳ್ಳು ಹೇಳಿದ ಗಿಲ್ಲಿ; ಕಂಡು ಹಿಡಿದ ಕ್ರೇಜಿಸ್ಟಾರ್
ಬಿಗ್ ಬಾಸ್ ಮನೆಯಲ್ಲಿ ‘ಪ್ಯಾರ್’ ಸಿನಿಮಾ ಪ್ರಚಾರಕ್ಕೆ ಬಂದಿದ್ದ ಕ್ರೇಜಿಸ್ಟಾರ್ ರವಿಚಂದ್ರನ್, ಸ್ಪರ್ಧಿ ಗಿಲ್ಲಿ ಹೇಳಿದ ಸುಳ್ಳು ಪ್ರೇಮಕಥೆಯನ್ನು ಬಯಲು ಮಾಡಿದ್ದಾರೆ. ‘ರಾಜಾಹುಲಿ’ ಚಿತ್ರದ ಪ್ರೇಮಕಥೆಯನ್ನೇ ತನ್ನದೆಂದು ಹೇಳಿದ ಗಿಲ್ಲಿಯ ಸುಳ್ಳನ್ನು ರವಿಚಂದ್ರನ್ ಸುಲಭವಾಗಿ ಗುರುತಿಸಿದರು. ಈ ಘಟನೆ ಬಿಗ್ ಬಾಸ್ ವೀಕ್ಷಕರ ಗಮನ ಸೆಳೆದಿದ್ದು, ರವಿಚಂದ್ರನ್ ಬುದ್ಧಿವಂತಿಕೆಯನ್ನು ಪ್ರಶಂಸಿಸಲಾಗಿದೆ.

ರವಿಚಂದ್ರನ್ ಅವರು ‘ಪ್ಯಾರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಬಿಗ್ ಬಾಸ್ ಮನೆಯ ರಾಶಿಕಾ ಶೆಟ್ಟಿ ಕೂಡ ಅಭಿನಯಿಸಿದ್ದಾರೆ. ಇಬ್ಬರದ್ದೂ ತಂದೆ-ಮಗಳ ಪಾತ್ರ. ಈ ಸಿನಿಮಾ ಫೆಬ್ರವರಿಯಲ್ಲಿ ರಿಲೀಸ್ ಆಗಲಿದೆ. ಈ ಚಿತ್ರದ ಹಾಡು ಡಿಸೆಂಬರ್ 18ರಂದು ರಿಲೀಸ್ ಆಗಿದೆ. ಈ ಸಿನಿಮಾ ಪ್ರಚಾರಕ್ಕಾಗಿ ಬಿಗ್ ಬಾಸ್ (Bigg Boss) ಮನೆಗೆ ಬಂದಿದ್ದಾರೆ ರವಿಚಂದ್ರನ್. ಈ ವೇಳೆ ಅವರು ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಸಿನಿಮಾದ ಹೆಸರೇ ಹೇಳುವಂತೆ ‘ಪ್ಯಾರ್’ ಇದೊಂದು ಪಕ್ಕಾ ಲವ್ ಸ್ಟೋರಿ ಹೊಂದಿರೋ ಸಿನಿಮಾ. ಈ ಚಿತ್ರ ಪ್ರೇಮಿಗಳ ದಿನಾಚರಣೆಯ ಸಂದರ್ಭದಲ್ಲೇ ತೆರೆಗೆ ಬರುತ್ತಿದೆ. ರಾಶಿಕಾ ಶೆಟ್ಟಿ ಕೂಡ ಸಿನಿಮಾದಲ್ಲಿ ನಟಿಸಿರುವುದರಿಂದ ಚಿತ್ರಕ್ಕೆ ಮೈಲೇಜ್ ಸಿಕ್ಕಿದೆ. ಸಿನಿಮಾದ ಟೈಟಲ್ಗೆ ತಕ್ಕಂತೆ ಚಟುವಟಿಕೆ ಒಂದನ್ನು ನೀಡಲಾಯಿತು.
ಈ ಚಟುವಟಿಕೆಯ ಅನುಸಾರ ಎಲ್ಲರೂ ತಮ್ಮ ಲವ್ಸ್ಟೋರಿನ ಸ್ಪರ್ಧಿಗಳ ಎದುರು ಹೇಳಬೇಕಿತ್ತು. ರವಿಚಂದ್ರನ್ ಅವರ ಮೊದಲ ಪ್ರೇಮಕಥೆ ತುಂಬಾನೇ ಸುಂದರವಾಗಿತ್ತು. ನಂತರ ಎಲ್ಲರೂ ತಮ್ಮ ತಮ್ಮ ಪ್ರೇಮಕಥೆಯನ್ನು ಹೇಳಿಕೊಂಡರು. ಈ ಸಂದರ್ಭದಲ್ಲಿ ಗಿಲ್ಲಿ ಅವರು ಸುಳ್ಳು ಹೇಳಿ ರವಿಚಂದ್ರನ್ ಕೈಲಿ ಸಿಕ್ಕಿ ಬಿದ್ದಿದ್ದಾರೆ.
ಇದನ್ನೂ ಓದಿ: ಕ್ಯಾಪ್ಟನ್ಸಿ ಟಾಸ್ಕ್ಗೆ ನಡೆದಿದೆ ಭಾರೀ ಫೈಟ್; ಗಿಲ್ಲಿನ ಪ್ರಶ್ನೆ ಮಾಡಿದ ಕಾವ್ಯಾ
ಗಿಲ್ಲಿ ಕಾಲೇಜು ಸಮಯದ ಲವ್ಸ್ಟೋರಿ ಹೇಳಿದ್ದಾರೆ. ಬಸ್ ಅಲ್ಲಿ ಹೋಗುವಾಗ ಹುಡುಗಿ ಮೇಲೆ ಲವ್ ಆಗಿದ್ದು, ಅವರ ಹಿಂದೆ ಸುತ್ತಿದ್ದು, ಅವಳನ್ನು ಮಾತನಾಡಿಸಲು ಪ್ರಯತ್ನಿಸಿದ್ದು, ಆ ಬಳಿಕ ಅವಳು ಅಣ್ಣ ಹೇಳಿದ್ದು ಎಲ್ಲವನ್ನೂ ವಿವರಿಸಿದ್ದರು. ಆದರೆ, ಇದು ಸೇಮ್ ಟು ಸೇಮ್ ‘ರಾಜಾಹುಲಿ’ಯಲ್ಲಿ ಬರುವ ಲವ್ಸ್ಟೋರಿ ರೀತಿ ಇತ್ತು. ಇದನ್ನು ರವಿಚಂದ್ರನ್ ಸುಲಭದಲ್ಲಿ ಕಂಡು ಹಿಡಿದರು. ಗಿಲ್ಲಿ ನಟ ಅವರು ಸಾಕಷ್ಟು ಸಿನಿಮಾಗಳನ್ನು ವೀಕ್ಷಿಸಿಕೊಂಡು ಬಂದಿದ್ದಾರೆ. ಅವರು ಸಿನಿಮಾದ ಕಥೆಯನ್ನು ಸಿಚ್ಯುವೇಷನ್ಗೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




