ರಘು ಬಳಿಕ ಕಾವ್ಯಾಗೂ ಗೊತ್ತಾಗಿದೆ ಬಿಗ್ ಬಾಸ್ ಸೀಕ್ರೆಟ್ ರೂಮ್ ರಹಸ್ಯ
ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ಸೀಕ್ರೆಟ್ ರೂಮ್ನಲ್ಲಿ ಇದ್ದಾರೆ ಎಂಬುದು ಈಗ ಒಬ್ಬೊಬ್ಬರಿಗೆ ತಿಳಿಯುತ್ತಿದೆ. ಈ ಮೊದಲು ರಘು ಅವರಿಗೆ ಅನುಮಾನ ಬಂದಿತ್ತು. ಅಲ್ಲದೇ ಅವರು ಆ ಬಗ್ಗೆ ತಮ್ಮ ಅನಿಸಿಕೆ ತಿಳಿಸಿದ್ದರು. ಈಗ ಕಾವ್ಯ ಶೈವ ಅವರಿಗೂ ಸೀಕ್ರೆಟ್ ರೂಮ್ನ ವಿಚಾರ ಗೊತ್ತಾಗಿದೆ. ಆ ಬಗ್ಗೆ ಅವರು ಮಾತನಾಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಲ್ಲಿ ರಕ್ಷಿತಾ ಶೆಟ್ಟಿ (Rakshitha Shetty) ಮತ್ತು ಧ್ರುವಂತ್ ಅವರನ್ನು ಸೀಕ್ರೆಟ್ ರೂಮ್ನಲ್ಲಿ ಇಡಲಾಗಿದೆ. ಕಳೆದ ವಾರ ಅವರಿಬ್ಬರು ಎಲಿಮಿನೇಟ್ ಆಗಿದ್ದಾರೆ ಎಂದು ತೋರಿಸಲಾಯಿತು. ಆದರೆ ಅವರು ಸೀಕ್ರೆಟ್ ರೂಮ್ಗೆ ತೆರಳಿರುವ ವಿಷಯವನ್ನು ಬಿಗ್ ಬಾಸ್ ಮನೆಯೊಳಗಿನ ಸದಸ್ಯರಿಗೆ ತಿಳಿಸಿಲ್ಲ. ಆದರೂ ಕೂಡ ಆ ರಹಸ್ಯ ಲೀಕ್ ಆಗಿದೆ. ಅದಕ್ಕೆ ಕಾರಣ ಇದೆ. ಎಲ್ಲ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸುವ ಮೂಲಕ ರಘು ಮತ್ತು ಕಾವ್ಯ ಶೈವ (Kavya Shaiva) ಅವರು ಸೀಕ್ರೆಟ್ ರೂಮ್ ರಹಸ್ಯವನ್ನು ಕಂಡುಹಿಡಿದಿದ್ದಾರೆ.
ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಅವರನ್ನು ಸೀಕ್ರೆಟ್ ರೂಮ್ನಲ್ಲಿ ಯಾಕೆ ಇರಿಸಿರಬಹುದು ಎಂಬುದನ್ನು ಕಾವ್ಯ ಶೈವ ಅವರು ಊಹಿಸಿದ್ದಾರೆ. ‘ಅವರಿಬ್ಬರನ್ನು ಸೀಕ್ರೆಟ್ ರೂಮ್ನಲ್ಲಿ ಇಡಲಾಗಿದೆ. ನಮ್ಮ ಆಟವನ್ನು ನೋಡಿ ಅವರು ಹೇಗೆ ಎಕ್ಸ್ಪ್ರೆಸ್ ಮಾಡುತ್ತಾರೆ ಎಂಬುದನ್ನು ತೋರಿಸಲಾಗುತ್ತದೆ’ ಎಂದು ಕಾವ್ಯ ಅವರು ಹೇಳಿದ್ದಾರೆ. ಅಸಲಿಗೆ ಹಾಗೆಯೇ ಆಗುತ್ತಿದೆ.
ಇನ್ನೊಂದು ಸಂಗತಿಯನ್ನು ಕಾವ್ಯ ಶೈವ ಅವರು ಸರಿಯಾಗಿ ಊಹಿಸಿದ್ದಾರೆ. ‘ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಅವರು ಸರಿಯಾಗಿ ಪರಸ್ಪರ ಮಾತನಾಡುತ್ತಿರಲಿಲ್ಲ. ಈಗ ಅವರಿಬ್ಬರನ್ನು ಒಂದೇ ರೂಮ್ನಲ್ಲಿ ಇರಿಸಿದಾಗ ಅವರು ಏನು ಮಾತನಾಡಿಕೊಳ್ಳುತ್ತಾರೆ ಎಂಬುದನ್ನು ತೋರಿಸಲಾಗುತ್ತದೆ’ ಎಂದಿದ್ದಾರೆ ಕಾವ್ಯ ಶೈವ. ಅವರ ಊಹೆ ಬಹುತೇಕ ನಿಜವಾಗಿದೆ.
ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಅವರು ಸೀಕ್ರೆಟ್ ರೂಮ್ನಲ್ಲಿ ಕುಳಿತು ಎಲ್ಲರ ಆಟವನ್ನು ನೋಡುತ್ತಿದ್ದಾರೆ. ಆಟದ ಹಲವು ವಿಷಯಗಳನ್ನು ನಿರ್ಧರಿಸಲು ಅವರಿಗೆ ಬಿಗ್ ಬಾಸ್ ಕೆಲವು ಅಧಿಕಾರಗಳನ್ನು ನೀಡಿದ್ದಾರೆ. ಅದರಂತೆಯೇ ಆಟ ನಡೆಯುತ್ತಿದೆ. ಅವರಿಬ್ಬರು ವಾಪಸ್ ಬಿಗ್ ಬಾಸ್ ಮನೆಯ ಒಳಗೆ ಎಂಟ್ರಿ ನೀಡಲಿದ್ದಾರೆ. ಆಗ ಆಟಕ್ಕೆ ಟ್ವಿಸ್ಟ್ ಸಿಗಲಿದೆ. ಆದರೆ ಅದಕ್ಕೂ ಮುನ್ನ ಸೀಕ್ರೆಟ್ ರೂಮ್ ರಹಸ್ಯ ಕೆಲವರಿಗೆ ಗೊತ್ತಾಗಿದೆ.
ಇದನ್ನೂ ಓದಿ: ಸೀಕ್ರೆಟ್ ರೂಮ್ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ: ಕಂಗಾಲಾದ ಧ್ರುವಂತ್
ಅವರಿಬ್ಬರು ಎಲಿನೇಟ್ ಆಗಿದ್ದಾರೆ ಎಂದು ತೋರಿಸಿದ ದಿನವೇ ರಘು ಅವರಿಗೆ ಅನುಮಾನ ಬಂದಿತ್ತು. ‘ಇನ್ನೂ ಸೌಂಡ್ ಬಂದಿಲ್ಲ. ಏನೋ ಟ್ವಿಸ್ಟ್ ಇದೆ. ಪ್ರತಿ ಬಾರಿ ಈ ಸಮಯಕ್ಕೆ ತಕ್ಷಣ ಸೌಂಡ್ ಬರುತ್ತದೆ. ಬ್ಯಾಕ್ ಸ್ಟೇಜ್ ಇಂದ ಹೋಗಿ ಮಾತನಾಡಿಸುತ್ತಾರೆ. ಅವರ ವಿಟಿ ಹಾಕುತ್ತಾರೆ. ಜನರೆಲ್ಲ ಕೂಗಾಡುತ್ತಾರೆ. ಆದರೆ ಇವತ್ತು ಸ್ವಲ್ಪವೂ ಸೌಂಡ್ ಬಂದಿಲ್ಲ’ ಎಂದು ರಘು ಅವರು ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




