ಕಂಗೊಳಿಸುವ ವೇದಿಕೆ ಮೇಲೆ ಅಭಿಷೇಕ್​-ಅವಿವಾ ಆರತಕ್ಷತೆ; ಬಂದು ಹಾರೈಸಿದ ರಾಜಕಾರಣಿಗಳು, ನಟರು

|

Updated on: Jun 08, 2023 | 9:06 AM

Abhishek Ambareesh-Aviva Bidapa Reception: ಅಭಿಷೇಕ್ ಅವಿವಾ ಮದುವೆ ಜೂನ್ 5ರಂದು ಅದ್ದೂರಿಯಾಗಿ ನೆರವೇರಿತು. ಆಪ್ತರು, ಕುಟುಂಬದವರಿಗೆ ಮಾತ್ರ ಆಹ್ವಾನ ಇತ್ತು. ಈಗ ಮದುವೆಗಿಂತಲೂ ಅದ್ದೂರಿಯಾಗಿ ರಿಸೆಪ್ಷನ್ ನಡೆದಿದೆ.

ಅಭಿಷೇಕ್ ಅಂಬರೀಷ್ (Abhishek Ambareesh) ಹಾಗೂ ಅವಿವಾ ಬಿಡಪ ಅವರ ಆರತಕ್ಷತೆ ಕಾರ್ಯಕ್ರಮ ಬುಧವಾರ (ಜೂನ್ 7) ಅದ್ದೂರಿಯಾಗಿ ನೆರವೇರಿದೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್​​ನ​ ತ್ರಿಪುರಾ ವಾಸಿನಿಯಲ್ಲಿ ಈ ಸಮಾರಂಭ ನೆರವೇರಿದೆ. ಅಂಬಿ ಕುಟುಂಬ ರಾಜಕೀಯ ಹಾಗೂ ಚಿತ್ರರಂಗದಲ್ಲಿ ತೊಡಗಿಕೊಂಡಿದೆ. ಅಂಬರೀಷ್ (Ambareesh) ಕೂಡ ಅನೇಕರ ಜೊತೆ ಒಡನಾಟ ಹೊಂದಿದ್ದರು. ಹೀಗಾಗಿ, ಚಿತ್ರರಂಗದವರು ಹಾಗೂ ರಾಜಕಾರಣಿಗಳು ಆರತಕ್ಷತೆಗೆ ಆಗಮಿಸಿದ್ದರು. ಅವರು ಬಂದು ಈ ನವ ಜೋಡಿಗೆ ಹಾರೈಸಿದ್ದಾರೆ. ಆರತಕ್ಷತೆಗೆ ಸಿದ್ಧಗೊಂಡ ವೇದಿಕೆ ಕಂಗೊಳಿಸಿತು.

ಅಭಿಷೇಕ್ ಅವಿವಾ ಮದುವೆ ಜೂನ್ 5ರಂದು ಅದ್ದೂರಿಯಾಗಿ ನೆರವೇರಿತು. ಆಪ್ತರು, ಕುಟುಂಬದವರಿಗೆ ಮಾತ್ರ ಆಹ್ವಾನ ಇತ್ತು. ಈಗ ಮದುವೆಗಿಂತಲೂ ಅದ್ದೂರಿಯಾಗಿ ರಿಸೆಪ್ಷನ್ ನಡೆದಿದೆ. ಈ ಕಾರ್ಯಕ್ರಮಕ್ಕೆ ಆಗಮಿಸಿ ಎಲ್ಲರೂ ನವ ಜೋಡಿಗೆ ಶುಭಕೋರಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಎಸ್​ಎಂ ಕೃಷ್ಣ, ತಮಿಳು ನಟ ಪ್ರಭು, ನಟಿ ಖುಷ್ಬೂ, ಶತ್ರುಘ್ನ ಸಿನ್ಹಾ, ಜಾಕಿ ಶ್ರಾಫ್,ಸ್ಯಾಂಡಲ್​ವುಡ್​ನ ರಿಷಬ್ ಶೆಟ್ಟಿ ದಂಪತಿ, ಚಿರಂಜೀವಿ ಸೇರಿ ಅನೇಕರು ಆಗಮಿಸಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕ್ರಿಸ್ಟಲ್​ ಶಾಂಡ್ಲಿಯರ್​ ಲೈಟ್ಸ್​ ಬಳಸಿ ವೇದಿಕೆ ಸಿದ್ಧಪಡಿಸಲಾಗಿತ್ತು. 300 ಶಾಂಡ್ಲಿಯರ್​ ಬಳಕೆ ಆಗಿತ್ತು. 72 ಅಡಿ ಅಗಲದ 32 ಉದ್ದದ ಶಾಂಡ್ಲಿಯರ್​ ಇದರಲ್ಲಿ ಇತ್ತು. ಭಾರತದಲ್ಲೇ ಮೊದಲ ಬಾರಿಗೆ ಈ ರೀತಿ ವೇದಿಕೆ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ದೆಹಲಿಯಿಂದ ಈ ಪರಿಕರಗಳನ್ನು ತರಿಸಲಾಗಿತ್ತು. ವಿವಿಧ ಬಗೆಯ ಹೂವುಗಳನ್ನು ಕೂಡ ತರಿಸಲಾಗಿದ್ದು ಬಹಳ ಆಕರ್ಷಕವಾಗಿ ರಿಸೆಪ್ಷನ್​ ವೇದಿಕೆಯನ್ನು ಸಿಂಗರಿಸಲಾಗಿತ್ತು. ಸ್ವತಃ ಸುಮಲತಾ ಅಂಬರೀಷ್​ ಅವರೇ ಎಲ್ಲದರ ಉಸ್ತುವಾರಿ ವಹಿಸಿಕೊಂಡು ಈ ಡೆಕೋರೇಷನ್​ ಮಾಡಿಸಿದ್ದರು ಎಂಬುದು ವಿಶೇಷ.

ಇದನ್ನೂ ಓದಿ: ಅಭಿಷೇಕ್ ಅಂಬರೀಷ್-ಅವಿವಾ ಬಿಡಪ ಮದುವೆಯ ಕಲರ್​ಫುಲ್ ಫೋಟೋಸ್ ಇಲ್ಲಿದೆ

ಅಭಿಷೇಕ್​ ಅಂಬರೀಷ್​-ಅವಿವಾ ಬಿಡಪ ಅವರ ರಿಸೆಪ್ಷನ್​ಗೆ ಆಗಮಿಸುವವರಿಗಾಗಿ ಮೂರು ಸಾವಿರ ಆಸನದ ವ್ಯವಸ್ಥೆ ಮಾಡಲಾಗಿತ್ತು. 25 ಸಾವಿರ ಜನರಿಗೆ ಭೋಜನ ಸಿದ್ಧವಾಗಿತ್ತು. ವಿಐಪಿ ಮತ್ತು ವಿವಿಐಪಿ ಅತಿಥಿಗಳಿಗೆ ಪ್ರತ್ಯೇಕವಾಗಿ ಜಾಗದ ವ್ಯವಸ್ಥೆ ಇತ್ತು. ಆರತಕ್ಷತೆಯ ಊಟದಲ್ಲಿ ದಕ್ಷಿಣ ಭಾರತದ ಖಾದ್ಯಗಳ ಜೊತೆ 34 ಬಗೆಯ ತಿನಿಸುಗಳನ್ನು ಮಾಡಿಸಲಾಗಿತ್ತು. ಅಭಿಮಾನಿಗಳಿಗೆ ಮತ್ತು ಗಣ್ಯರಿಗೆ ಒಂದೇ ರೀತಿಯ ಊಟ ಇತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:55 am, Thu, 8 June 23