AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kishore: ನಟ ಕಿಶೋರ್​ ಸ್ನೇಹಿತ, ‘ಕಬಡ್ಡಿ’ ಚಿತ್ರದ ನಿರ್ಮಾಪಕ ಅನೂಪ್​ ಗೌಡ ನಿಧನ

ಕಿಶೋರ್​ ಅವರು ನಿರ್ಮಾಪಕರಾಗಿ ಮೊದಲು ಮಾಡಿದ ಸಿನಿಮಾವೇ ‘ಕಬಡ್ಡಿ’. ಈ ಚಿತ್ರಕ್ಕೆ ಅನೂಪ್​ ಗೌಡ ಕೂಡ ಹಣ ಹೂಡಿದ್ದರು. ಆ ದಿನಗಳನ್ನು ಕಿಶೋರ್​ ನೆನಪು ಮಾಡಿಕೊಂಡಿದ್ದಾರೆ.

Kishore: ನಟ ಕಿಶೋರ್​ ಸ್ನೇಹಿತ, ‘ಕಬಡ್ಡಿ’ ಚಿತ್ರದ ನಿರ್ಮಾಪಕ ಅನೂಪ್​ ಗೌಡ ನಿಧನ
ಕಿಶೋರ್​, ಅನೂಪ್​
ಮದನ್​ ಕುಮಾರ್​
|

Updated on: Jun 08, 2023 | 3:57 PM

Share

ಕನ್ನಡದ ಖ್ಯಾತ ನಟ ಕಿಶೋರ್​ (Kishore Kumar) ಅವರು ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ತಮಗೆ ಅನಿಸುವ ಹಲವು ವಿಚಾರಗಳ ಬಗ್ಗೆ ಅವರು ಪೋಸ್ಟ್​ ಮಾಡುತ್ತಾರೆ. ಈಗ ಅವರೊಂದು ಬೇಸರದ ಸುದ್ದಿ ಹಂಚಿಕೊಂಡಿದ್ದಾರೆ. ಅವರ ಸ್ನೇಹಿತ ಅನೂಪ್​ ಗೌಡ ನಿಧನರಾಗಿದ್ದಾರೆ. 2009ರಲ್ಲಿ ಬಿಡುಗಡೆ ಆಗಿದ್ದ ‘ಕಬಡ್ಡಿ’ (Kabaddi movie) ಸಿನಿಮಾಗೆ ಅನೂಪ್​ ಗೌಡ ಅವರು ನಿರ್ಮಾಪಕರಾಗಿದ್ದರು. ಅಂದಿನ ಘಟನೆಗಳನ್ನು ಕಿಶೋರ್​ ಈಗ ನೆನಪಿಸಿಕೊಂಡಿದ್ದಾರೆ. ಅಗಲಿದ ಗೆಳೆಯನಿಗೆ ಅವರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಅನೂಪ್​ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನೆಟ್ಟಿಗರು ಪ್ರಾರ್ಥಿಸಿದ್ದಾರೆ.

ಚಿತ್ರರಂಗದಲ್ಲಿ ಒಂದೊಂದೇ ಮೆಟ್ಟಿಲುಗಳನ್ನು ಏರಿ ಬಂದವರು ಕಿಶೋರ್​. ಅವರು ನಿರ್ಮಾಪಕನಾಗಿಯೂ ಕೆಲವು ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ. ಅವರು ನಿರ್ಮಾಪಕರಾಗಿ ಮೊದಲು ಮಾಡಿದ ಸಿನಿಮಾವೇ ‘ಕಬಡ್ಡಿ’. ಈ ಚಿತ್ರಕ್ಕೆ ಅವರ ಸ್ನೇಹಿತರೆಲ್ಲ ಸೇರಿ ಹಣ ಹೂಡಿದ್ದರು. ಅವರ ಪೈಕಿ ಅನೂಪ್​ ಗೌಡ ಕೂಡ ಇದ್ದರು. ಆ ದಿನಗಳಲ್ಲಿ ಬಹಳ ಕಷ್ಟಪಟ್ಟು ‘ಕಬಡ್ಡಿ’ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಆ ಕುರಿತು ಈಗ ಕಿಶೋರ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

‘ನಮ್ಮ ನಿರ್ಮಾಣದ ಮೊದಲ ಪ್ರಯತ್ನ, ‘ಕಬಡ್ಡಿ’ ಸಿನಿಮಾ ಬೇಡದ ಕಲಹಗಳಲ್ಲಿ ನಿಂತು ಹೋದ ಸಮಯದಲ್ಲಿ ಬೇಡ ಬೇಡವೆಂದರೂ ಎಲ್ಲರನ್ನೂ ಎದುರು ಹಾಕಿಕೊಂಡು ಎಲ್ಲರನ್ನೂ ದೂರ ಮಾಡಿಕೊಂಡು ಹಠ ಹಿಡಿದು ಸಿನಿಮಾ ಮುಗಿಸಿ , ಹಸಿರು ನೆನಪುಗಳನ್ನು ಬಳಿಯುಳಿಸಿ ದೂರ ದೂರ ಹೋಗುತ್ತಲೇ ದೂರದಲ್ಲೆಲ್ಲೊ ಅಸ್ತಂಗತನಾಗಿ ಹೋದ ಪುಟ್ಟ ಗೆಳೆಯ ಅನೂಪನಿಗೆ ದೂರದಿಂದಲೇ ಭಾಷ್ಪಾಂಜಲಿ’ ಎಂದು ಕಿಶೋರ್​ ಅವರು ಪೋಸ್ಟ್​ ಮಾಡಿದ್ದಾರೆ. ‘ಕಬಡ್ಡಿ’ ತುಂಬ ಒಳ್ಳೆಯ ಸಿನಿಮಾ ಎಂದು ಅಭಿಮಾನಿಗಳು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: Kishore: ‘ಮೈಂಡ್​ ಲೆಸ್​ ನನ್ನ ಪದವಲ್ಲ’: ‘ಕೆಜಿಎಫ್​’ ಕುರಿತ ಹೇಳಿಕೆಗೆ ಸ್ಪಷ್ಟನೆ ನೀಡಿದ ನಟ ಕಿಶೋರ್​

ಇತ್ತೀಚೆಗೆ ಒಡಿಶಾದಲ್ಲಿ ನಡೆದ ಭೀಕರ ರೈಲು ದುರಂತದಲ್ಲಿ 280ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಗಾಯಗೊಂಡವರ ಸಂಖ್ಯೆ ಸಾವಿರ ದಾಟಿದೆ. ಈ ಬಗ್ಗೆ ನಟ ಕಿಶೋರ್ ಕೂಡ ತಮ್ಮ ಅಭಿಪ್ರಾಯ ತಿಳಿಸಿದ್ದರು. ‘ಕಠಿಣ ಕ್ರಮದ ಶಪಥ ಮಾಡಿದ ಪ್ರಧಾನಿ; ಸಾವಿನ ಸಂಖ್ಯೆ 288 ಏರಿಕೆ’ ಎಂಬ ಸುದ್ದಿಯನ್ನು ಕಿಶೋರ್ ಶೇರ್ ಮಾಡಿಕೊಂಡು, ಈ ಫೋಟೋಗೆ ಉದ್ದನೆಯ ಕ್ಯಾಪ್ಶನ್ ನೀಡಿದ್ದರು.

ಇದನ್ನೂ ಓದಿ: Kishore: ದೈವದ ಕುರಿತ ಪೋಸ್ಟ್​ನಿಂದ ಕಿಶೋರ್​ ಟ್ವಿಟರ್​ ಖಾತೆ ಸಸ್ಪೆಂಡ್​ ಆಗಿಲ್ಲ; ಅಸಲಿ ಕಾರಣ ತಿಳಿಸಿದ ನಟ

‘ಯಾರ ಮೇಲೆ ಕಠಿಣ ಕ್ರಮ‘? ಯಾರು ಕಾರಣ? ಇಷ್ಟು ಭೀಕರ ಸಾವು ನೋವು ತಡೆಗಟ್ಟಬಹುದಿತ್ತೇ? ಇಂದಿಗೂ ಖಾಲಿಯಿರುವ 3 ಲಕ್ಷಕ್ಕೂ ಹೆಚ್ಚು ರೈಲ್ವೆ ನೌಕರರನ್ನು, 1500ಕ್ಕೂ ಹೆಚ್ಚು ಸುರಕ್ಷತೆಗೆ ಬೇಕಾದ ಹುದ್ದೆ ಖಾಲಿ ಆಗಿಯೇ ಇದೆ. ಇದನ್ನು ಸರ್ಕಾರ ತುಂಬಿ ಹಳಿ ನಿರ್ವಹಣೆ ಸಮರ್ಪಕವಾಗಿಸಬಹುದಿತ್ತೇ? ಕೋಟ್ಯಂತರ ರೂಪಾಯಿ ವ್ಯಯಿಸಿ ತಿಂಗಳಿಗೊಂದು ರೈಲಿಗೆ ಹಸಿರು ನಿಶಾನೆ ತೋರಿಸಿ ಫೋಟೋ ಕ್ಲಿಕ್ಕಿಸಿಕೊಳ್ಳುವ ಬದಲು, ‘ಕವಚ’ ತಂತ್ರಜ್ಞಾನಕ್ಕೆ ಪ್ರಾಮುಖ್ಯತೆ ಕೊಟ್ಟು ಎಲ್ಲೆಡೆ ಅಳವಡಿಸಬಹುದಿತ್ತೇ’ ಎಂದು ಕಿಶೋರ್ ಪ್ರಶ್ನೆ ಮಾಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.