ಅಭಿಷೇಕ್ ಅಂಬರೀಷ್-ಅವಿವಾ ಬಿಡಪ ಮದುವೆಯ ಕಲರ್ಫುಲ್ ಫೋಟೋಸ್ ಇಲ್ಲಿದೆ
ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದಲ್ಲಿ ಈ ಅದ್ದೂರಿ ಮದುವೆ ನಡೆದಿದೆ. ಅಂಬರೀಷ್ ಅವರು ಐಷಾರಾಮಿ ಕಾರಿನಲ್ಲಿ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟರು.
Updated on:Jun 05, 2023 | 2:59 PM

ಹಲವು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಮದುವೆ ಆಗಿದ್ದಾರೆ. ಇಂದು (ಜೂನ್ 5) ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಅಭಿಷೇಕ್ ಅವರು ಅವಿವಾಗೆ ಮಾಂಗಲ್ಯಧಾರಣೆ ಮಾಡಿದರು.

ಸೆಲೆಬ್ರಿಟಿಗಳು, ಕುಟುಂಬದವರ ಸಮ್ಮುಖದಲ್ಲಿ ಈ ವಿವಾಹಕಾರ್ಯ ನೆರವೇರಿದೆ. ಎಲ್ಲರೂ ನವ ದಂಪತಿಗೆ ಶುಭಾಶಯ ಕೋರುತ್ತಿದ್ದಾರೆ. ಅವರ ದಾಂಪತ್ಯ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತಿದ್ದಾರೆ.

ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದಲ್ಲಿ ಈ ಅದ್ದೂರಿ ಮದುವೆ ನಡೆದಿದೆ. ಮುಂಜಾನೆಯೇ ಸುಮಲತಾ ಕುಟುಂಬದವರು ಚಾಮರ ವಜ್ರಕ್ಕೆ ಆಗಮಿಸಿದರು. ಅಭಿಷೇಕ್ ಅಂಬರೀಷ್ ಅವರು ಐಷಾರಾಮಿ ಕಾರಿನಲ್ಲಿ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟರು.

ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಮದುವೆಗೆ ಸೆಲೆಬ್ರಿಟಿಗಳ ದಂಡು ನೆರೆದಿತ್ತು. ಹಲವರು ಇವರಿಗೆ ವಿಶ್ ಮಾಡಿ ಶುಭ ಕೋರಿದ್ದಾರೆ.

ಅಭಿಷೇಕ್ ಮದುವೆ-ಅವಿವಾ ಕಲರ್ಫುಲ್ ಫೋಟೋ ವೈರಲ್ ಆಗಿದೆ. ನವ ದಂಪತಿಗೆ ಎಲ್ಲರೂ ಶುಭಕೋರಿದ್ದಾರೆ.
Published On - 2:35 pm, Mon, 5 June 23

ರಾಜೇಶ್ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.
Read More



